ಅದೃಷ್ಟ ಪರೀಕ್ಷೆಗಿಳಿದ ತುಳುನಾಡಿನ ನಟ ರೂಪೇಶ್ ಶೆಟ್ಟಿ ‘ಸರ್ಕಸ್’ ಮೂಲಕ ಪ್ರೇಕ್ಷಕರ ಮುಂದೆ

ಮಂಗಳೂರು (ದಕ್ಷಿಣ ಕನ್ನಡ): ಕನ್ನಡ ಬಿಗ್ ಬಾಸ್ ಮೂಲಕ ಅಪಾರ ಪ್ರೇಕ್ಷಕರ ಮನಸ್ಸು ಗೆದ್ದಿರುವ ನಟ ರೂಪೇಶ್ ಶೆಟ್ಟಿ ಇದೀಗ ತಮ್ಮ ಹೊಸ ಸಿನಿಮಾ ‘ಸರ್ಕಸ್’ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.ಕರಾವಳಿಯ ನಟ ರೂಪೇಶ್ ಶೆಟ್ಟಿ ಅಭಿನಯದ ಸರ್ಕಸ್ ಸಿನಿಮಾ ಇದೇ ಜೂನ್ 23ರಂದು ವಿಶ್ವಾದ್ಯಂತ ತೆರೆಕಾಣಲಿದೆ ರೂಪೇಶ್ ಶೆಟ್ಟಿ ಪ್ರತಿಕ್ರಿಯೆ ಸರ್ಕಸ್’ ತುಳು ಸಿನಿಮಾ. ಈಗಾಗಲೇ ಕೆಲವು ತುಳು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಇವರು ಸರ್ಕಸ್ ಸಿನಿಮಾದಲ್ಲಿಯೂ ನಾಯಕ ನಟ. ಬಿಗ್ ಬಾಸ್ ವಿನ್ನರ್​​ ಆದ […]

World Yoga Day : ಯೋಗದಲ್ಲಿ ನಟಿ ರಾಗಿಣಿ ದ್ವಿವೇದಿ ಕಂಡಂತೆ

ಸ್ಯಾಂಡಲ್‌ವುಡ್ (Sandalwood) ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಆರೋಗ್ಯಕ್ಕೂ ಸಾಕಷ್ಟು ಸಮಯ ಕೊಡುತ್ತಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ನಿದ್ದೆಗೆಡಿಸುವ ನಟಿ ರಾಗಿಣಿ ಈ ಬಾರಿ ಯೋಗ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಹಲವು ಯೋಗಗಳನ್ನು ಮಾಡಿ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಮೂರು ದಿನದಲ್ಲಿ 300 ಕೋಟಿ ಗಳಿಸಿದ ಚಿತ್ರದ ನಾಲ್ಕನೇ ದಿನದ ಕಲೆಕ್ಷನ್​ 20 ಕೋಟಿ : ಆದಿಪುರುಷ್​​ ಗಳಿಕೆ 75 ರಷ್ಟು ಕುಸಿತ

ಇದೀಗ ಸಿನಿಮಾ ಗಳಿಕೆ ಇಳಿಕೆ ದಾರಿ ಹಿಡಿದಿದೆ. ಬಿಡುಗಡೆ ಕಂಡ ಬಳಿಕ ಮೊದಲ ಸೋಮವಾರದಂದು ಆದಿಪುರುಷ್​ ಕಲೆಕ್ಷನ್​​ನಲ್ಲಿ ತೀವ್ರ ಕುಸಿತ ಕಂಡಿದೆ. ಬಾಕ್ಸ್​ ಆಫೀಸ್​ ಸಂಗ್ರಹ ಸಂಖ್ಯೆ ರಷ್ಟಿ 75 ರಷ್ಟು ಕುಸಿದಿದೆ. ಬಿಗ್​​ ಬಜೆಟ್​ನಲ್ಲಿ ನಿರ್ಮಾಣಗೊಂಡ ಆದಿಪುರುಷ್​​ ಸಿನಿಮಾ ಗಳಿಕೆ ಎಲ್ಲರ ಹುಬ್ಬೇರಿಸಿದೆ. ಮೂರೇ ದಿನಗಳಲ್ಲಿ 300 ಕೋಟಿ ರೂ. ಸಂಗ್ರಹ ಮಾಡುವ ಮೂಲಕ ದಾಖಲೆ ಬರೆದಿದೆ.ಆದಿಪುರುಷ್’ ಬಾಕ್ಸ್ ಆಫೀಸ್​ ಕಲೆಕ್ಷನ್​ ವಿಚಾರವಾಗಿ ಭಾರಿ ಕುಸಿತ ಕಂಡಿದೆ. ಮೊದಲ ವಾರಾಂತ್ಯದ ಯಶಸ್ಸಿನ ನಂತರ ಚಿತ್ರವು ಓಟ […]

ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್​ : ‘ಜಾತರ’ ಮಾಡಲು ಸಜ್ಜಾದ ಪ್ರಜ್ವಲ್ ದೇವರಾಜ್

2007ರಿಂದ ಸಿನಿಮಾ ವೃತ್ತಿ ಜೀವನ ಆರಂಭಿಸಿ, ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಬೇಡಿಕೆ ಹೊಂದಿರುವ ನಟ‌ ಪ್ರಜ್ವಲ್ ದೇವರಾಜ್.ನಟ ಪ್ರಜ್ವಲ್ ದೇವರಾಜ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 5 ಭಾಷೆಗಳಲ್ಲಿ ಜಾತರೆ ಸಿನಿಮಾ: ನಟ ಪ್ರಜ್ವಲ್ ದೇವರಾಜ್ ಇದೇ ಮೊದಲ ಬಾರಿಗೆ ಬಿಗ್ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರವೊಂದರಲ್ಲಿ ನಟಿಸಲು ಸಜ್ಜಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ 5 ಭಾಷೆಗಳಲ್ಲಿ ಪ್ರಜ್ವಲ್ ದೇವರಾಜ್ ಅವರ ಮುಂದಿನ ಸಿನಿಮಾ ಮೂಡಿ […]

ಚೊಚ್ಚಲ ಹೆಣ್ಣು ಮಗುವನ್ನು ಬರಮಾಡಿಕೊಂಡ ರಾಮ್ ಚರಣ್ ದಂಪತಿಗಳು

ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಕೊನಿಡೇಲಾ ತಮ್ಮ ಚೊಚ್ಚಲ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಈ ಸುದ್ದಿಯನ್ನು ಆಸ್ಪತ್ರೆಯ ಬುಲೆಟಿನ್ ಮೂಲಕ ಪ್ರಕಟಿಸಲಾಗಿದೆ. ಉಪಾಸನಾ ಕೊನಿಡೇಲಾ ಜುಬಿಲಿ ಹಿಲ್ಸ್ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಮತ್ತು ತಾಯಿ ಚೆನ್ನಾಗಿದ್ದಾರೆ ಎಂದು ಆಸ್ಪತ್ರೆಯು ತಿಳಿಸಿದೆ. ಡಿಸೆಂಬರ್‌ನಲ್ಲಿ ತಾವು ತಂದೆ ತಾಯಿಯರಾಗುವ ಬಗ್ಗೆ ದಂಪತಿಗಳು ಘೋಷಿಸಿಕೊಂಡಿದ್ದರು. ರಾಮ್ ಚರಣ್ ಅವರ ತಂದೆ, ನಟ ಚಿರಂಜೀವಿ, ಮಂಗಳವಾರ ಮುಂಜಾನೆ ದಂಪತಿಗಳನ್ನು ಭೇಟಿ ಮಾಡಿ […]