14 ಅದ್ಭುತ ಸೆಟ್‌ಗಳಲ್ಲಿ ಶೂಟಿಂಗ್​! ಸಲಾರ್‌ ಸಿನಿಮಾ ನಿರ್ಮಾಣದ ರೋಚಕ ಮಾಹಿತಿ 400 ಕೋಟಿ ರೂಪಾಯಿ ವೆಚ್ಚ

‘ಬಾಹುಬಲಿ’ ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯ, ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರವು ಆರಂಭದಿಂದಲೂ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಇಂದು ಮುಂಜಾನೆ 05:12ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಭರ್ಜರಿ ಆಯಕ್ಷನ್ ದೃಶ್ಯಗಳು ಮತ್ತು ಪವರ್‌ಫುಲ್ ಸಂಭಾಷಣೆಗಳಿಂದ ಕೂಡಿರುವ ಈ ಟೀಸರ್, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ 25 ಮಿಲಿಯನ್​ಗೂ ಹೆಚ್ಚು ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಾಲಿನ ಹೈ ವೋಲ್ಟೆಜ್ ಚಿತ್ರ ಸಲಾರ್ […]

ಹೊಂಬಾಳೆ ಫಿಲಂಮ್ಸ್ ನ ಪ್ರಭಾಸ್-ಪ್ರಶಾಂತ್ ನೀಲ್-ಪೃಥ್ವಿರಾಜ್ ಕಾಂಬಿನೇಷನ್ ನ ಬಹು ನಿರೀಕ್ಷಿತ ಚಿತ್ರ ‘ಸಲಾರ್’ ಟೀಸರ್ ರಿಲೀಸ್

ಪ್ರಭಾಸ್ ನಟನೆ, ಹೊಂಬಾಳೆ ನಿರ್ಮಾಣ, ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರವನ್ನು 2020 ರಲ್ಲಿ ಘೋಷಿಸಲಾಯಿತಾದರೂ ಕೋವಿಡ್ ನಿಂದಾಗಿ ಚಿತ್ರ ನಿರ್ಮಾಣದ ಕೆಲಸವು ಹಿನ್ನಡೆಯನ್ನು ಅನುಭವಿಸಿತು. ಎರಡು ವರ್ಷಗಳ ಬಳಿಕ ಇದೀಗ ಮೊದಲನೆ ಬಾರಿಗೆ ಸಲಾರ್ ನ ಟೀಸರ್ ಅನ್ನು ಜುಲೈ 6 ರಂದು ಬೆಳಿಗ್ಗೆ 5.12 ಕ್ಕೆ ರಿಲೀಸ್ ಮಾಡಲಾಗಿದೆ. ಇತರ ಚಲನಚಿತ್ರ ನಿರ್ಮಾಪಕರು ಮಧ್ಯರಾತ್ರಿಯಲ್ಲಿ ಟೀಸರ್‌ಗಳನ್ನು ಬಿಡುಗಡೆ ಮಾಡಿದರೆ, ಸಲಾರ್ ನಿರ್ಮಾಪಕರು ವಿಚಿತ್ರ ಸಮಯವನ್ನು ಆರಿಸಿಕೊಂಡರು. ಟೀಸರ್ ಅನ್ನು ಜುಲೈ 6 ರಂದು ಬೆಳಿಗ್ಗೆ […]

ಕಂಗನಾ ರಣಾವತ್ ‘ತೇಜಸ್’ ಮತ್ತು ಟೈಗರ್ ಶ್ರಾಫ್ ‘ಗಣಪತ್ ಭಾಗ-1’ ಎರಡು ಸಿನಿಮಾ ಒಂದೇ ದಿನ ತೆರೆಗೆ

ಮುಂಬೈ: ತೇಜಸ್ ಚಿತ್ರದ ಮೂಲಕ ಕಂಗನಾ ರಣಾವತ್ ಮತ್ತೆ ದೊಡ್ಡ ಪರದೆಯ ಮೇಲೆ ಬರಲು ಸಜ್ಜಾಗಿದ್ದಾರೆ. ತಯಾರಕರು ಬುಧವಾರ ತೇಜಸ್‌ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದರು. ಕಂಗನಾ ವಾಯುಪಡೆಯ ಸೇನಾ ಸಮವಸ್ತ್ರದಲ್ಲಿರುವ ಕೆಲವು ಗ್ಲಿಂಪ್‌ಗಳನ್ನು ಸಹ ಹಂಚಿಕೊಂಡಿದ್ದಾರೆ. ಟೈಗರ್ ಶ್ರಾಫ್ ಮತ್ತು ಕೃತಿ ಸನೋನ್ ಅಭಿನಯದ ಆಕ್ಷನ್ ಥ್ರಿಲ್ಲರ್ ‘ಗಣಪತ್ ಭಾಗ-1’ ಚಿತ್ರದೊಂದಿಗೆ ಕಂಗನಾ ಅವರ ‘ತೇಜಸ್’ ಸಿನಿಮಾ ಒಂದೇ ದಿನ ಬಿಡುಗಡೆಯಾಗಲಿದೆ.ನಟಿ ಕಂಗನಾ ರಣಾವತ್ ಮುಂದಿರುವ ‘ತೇಜಸ್’ ನಿರ್ಮಾಪಕರು ಬುಧವಾರ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಕಂಗನಾ […]

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಪುಟ್ಟ ಬಾಲಕಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಟ ಸುದೀಪ್

ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಕನ್ನಡ ನಟ ಎಂದರೆ ಅದು ಅಭಿನಯ ಚಕ್ರವರ್ತಿ ಸುದೀಪ್.ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುಟ್ಟ ಬಾಲಕಿಯನ್ನು ನಟ ಸುದೀಪ್​ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅವರು ಕೇವಲ ತೆರೆ ಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ರಿಯಲ್ ಹೀರೋ ಅಂತಾರೆ ಅಭಿಮಾನಿಗಳು. ಕಷ್ಟದಲ್ಲಿದ್ದವರಿಗೆ ಜೊತೆಯಾಗಿ ನಿಲ್ಲುವ ಕಿಚ್ಚನ ಹೃದಯವಂತಿಕೆಗೆ, ಸರಳತೆಗೆ ಅಭಿಮಾನಿಗಳು ಸದಾ ಮೆಚ್ಚುಗೆ ಸೂಚಿಸುತ್ತಾರೆ. ಮೆಚ್ಚಿನ ನಟನನ್ನು […]

10 ವರ್ಷಗಳ ಬ್ರೇಕ್ ಬಳಿಕ ಅಮೀರ್ ಖಾನ್ – ರಾಜ್‌ಕುಮಾರ್ ಹಿರಾನಿ ಸಿನಿಮಾ

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಐಡಿಯಾ ಬಗ್ಗೆ ನಟ ಅಮೀರ್ ಖಾನ್​ ಉತ್ಸುಕರಾಗಿದ್ದರು. ಸದ್ಯ ಅವರ ಸಿನಿಮಾದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಈಡಿಯಟ್ಸ್ ಮತ್ತು ಪಿಕೆ ಅಂತಹ ಯಶಸ್ವಿ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವ ನಟ ಅಮೀರ್ ಖಾನ್ ಮತ್ತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತೆ ಒಟ್ಟಿಗೆ ಕೆಲಸ ಮಾಡಲು ಯೋಜಿಸುತ್ತಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಲಿರುವ ಬಯೋಪಿಕ್​ನಲ್ಲಿ ನಟ ಅಮೀರ್ ಖಾನ್ ನಟಿಸಲಿದ್ದಾರೆ ಎಂಬ ವರದಿಗಳಿವೆ ವರದಿಗಳ ಪ್ರಕಾರ, ಮುಂದಿನ ಈ ಪ್ರಾಜೆಕ್ಟ್ ಇನ್ನೂ ಯೋಜನಾ ಹಂತದಲ್ಲಿದೆ. ಈ […]