ಅಕ್ಷಯ್​ ಕುಮಾರ್ : ಬಾಲಿವುಡ್​ ಕಿಲಾಡಿ ​ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಟ

ಇನ್ನು ಕೆಲವರಿಗೆ ಹೀಗಲ್ಲ. ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿದ್ದು, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಪ್ರತಿ ಬಾರಿಯೂ ಗೆಲ್ಲುತ್ತಾ ಸ್ಟಾರ್​ ಹೀರೋಗಳಾಗಿದ್ದಾರೆ. ಡಾ.ರಾಜ್​ಕುಮಾರ್​, ಎನ್​ಟಿಆರ್​, ಅಮಿತಾಭ್​ ಬಚ್ಚನ್​ರಿಂದ ಹಿಡಿದು ರಜನಿಕಾಂತ್​, ಶಾರುಖ್​ ಖಾನ್​, ಯಶ್​, ಪ್ರಭಾಸ್​ ಹೀಗೆ ಅನೇಕರು ತಮ್ಮ ಕಠಿಣ ಶ್ರಮ, ಛಲದಿಂದ ಸ್ಟಾರ್​ ಪಟ್ಟಕ್ಕೆ ಏರಿದ್ದಾರೆ. ಬಣ್ಣದ ಲೋಕವೇ ಹೀಗೆ ಅಲ್ಲವೇ! ನೂರು ಸಿನಿಮಾ ಮಾಡಿದ್ರೂ ಸಿಗದೇ ಇರೋ ಕ್ರೇಜ್​, ಸ್ಟಾರ್​ ಗಿರಿ ಪಟ್ಟ ಕೆಲವೊಬ್ಬರಿಗೆ ಒಂದೇ ಚಿತ್ರದಲ್ಲಿ ದಕ್ಕಿಬಿಡುತ್ತದೆ.ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ […]

‘ಒಂದ್ಸಲ ಮೀಟ್ ಮಾಡೋಣ’ ಚಿತ್ರಕ್ಕೆ ಎಸ್​.ನಾರಾಯಣ್​ ಆಯಕ್ಷನ್​ ಕಟ್​: ಪಡ್ಡೆಹುಲಿ ಶ್ರೇಯಸ್​

ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇಂತಹ ದಿಗ್ಗಜ ನಟರ ಸಿನಿಮಾಗಳಿಗೆ ಆಯಕ್ಷನ್​ ಕಟ್​ ಹೇಳಿರುವ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್. ಇದೀಗ ‘ಪಡ್ಡೆಹುಲಿ’ ಸಿನಿಮಾ ಖ್ಯಾತಿಯ ಶ್ರೇಯಸ್ ಮಂಜು ಅವರ ಮುಂದಿನ ಚಿತ್ರಕ್ಕೆ ಆಯಕ್ಷನ್​ ಕಟ್ ಹೇಳುತ್ತಿದ್ದಾರೆ.’ಪಡ್ಡೆಹುಲಿ’ ಖ್ಯಾತಿಯ ಶ್ರೇಯಸ್ ಮಂಜು ನಟನೆಯ ‘ಒಂದ್ಸಲ ಮೀಟ್ ಮಾಡೋಣ’ ಚಿತ್ರಕ್ಕೆ ಎಸ್.ನಾರಾಯಣ್ ಆಯಕ್ಷನ್​ ಕಟ್​ ಹೇಳುತ್ತಿದ್ದಾರೆ. ‘ಪ್ರೀತಿ’ ಕಥೆಯಿದು.. ‘ಒಂದ್ಸಲ ಮೀಟ್ ಮಾಡೋಣ’ ಚಿತ್ರವು ಪ್ರೀತಿಯ ಜರ್ನಿ ಎಂದು ನಿರ್ದೇಶಕ ಎಸ್​.ನಾರಾಯಣ್​ ಹೇಳಿದ್ದಾರೆ. ಚಿಕ್ಕಮಗಳೂರಿನಿಂದ […]

ಸೆ.18 ರಂದು ಯೂಟ್ಯೂಬ್ ನಲ್ಲಿ By2 ಲವ್ ಕನ್ನಡ ಮ್ಯೂಸಿಕಲ್ ವಿಡೀಯೋ ಬಿಡುಗಡೆ

ಯತೀಶ್ ಪೂಜಾರಿ ನಿರ್ದೇಶನದ ಎ.ಎಸ್.ವಿ ಬ್ರದರ್ಸ್ ನಿರ್ಮಾಣದ By2 ಲವ್ ಕನ್ನಡ ಮ್ಯೂಸಿಕಲ್ ವಿಡೀಯೋ ಯೂಟ್ಯೂಬ್ ಚಾನೆಲ್ ಜಸ್ಟ್ ರೋಲ್ ನಲ್ಲಿ ಸೆ.18 ರಂದು ಬಿಡುಗಡೆಯಾಗಲಿದೆ. ಚಿತ್ರದ ಪೋಸ್ಟರ್ ಮತ್ತು ದಿನಾಂಕವನ್ನು ಕಾಂತಾರ ಚಿತ್ರದ ಗುರುವ ಖ್ಯಾತಿಯ ಸ್ವರಾಜ್ ಶೆಟ್ಟಿ ಬಿಡುಗಡೆ ಮಾದಿ ಶುಭ ಕೋರಿದ್ದಾರೆ.

‘ಜೈಲರ್​’ ನಿರ್ಮಾಪಕ ಕಲಾನಿಧಿ ಮಾರನ್ ಅವರಿಂದ ರಜನಿಕಾಂತ್‌ಗೆ BMW ಕಾರು ಗಿಫ್ಟ್‌

ಕಾಲಿವುಡ್​ ಸೂಪರ್​ಸ್ಟಾರ್ ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ.​ ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನದ ಈ ಚಿತ್ರ ಜಾಗತಿಕ ಮಟ್ಟದಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ.’ಜೈಲರ್​’ ನಿರ್ಮಾಪಕ ಕಲಾನಿಧಿ ಮಾರನ್​ ಅವರು ರಜನಿಕಾಂತ್ ಅವರಿಗೆ ಹೊಚ್ಚ ಹೊಸ BMW X7 ಕಾರು ಉಡುಗೊರೆ ನೀಡಿದ್ದಾರೆ. ತೆರೆಕಂಡು 3 ವಾರ ಕಳೆದರೂ ಹಲವೆಡೆ ಉತ್ತಮ ಪ್ರದರ್ಶನ ಮುಂದುವರೆಸಿದೆ. ಬಹುದಿನಗಳ ಬಳಿಕ ತೆರೆ ಮೇಲೆ ಬಂದ ‘ತಲೈವಾ’ನ ಹೊಸ ಅವತಾರ ಕಂಡು ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ. […]

ವೈಷ್ಣೋದೇವಿ ಸನ್ನಿಧಿಗೆ ಶಾರುಖ್​​ ಖಾನ್​ ಭೇಟಿ : ಜವಾನ್​ ಬಿಡುಗಡೆಗೆ ದಿನಗಣನೆ!

ದೇಶ ಮಾತ್ರದಲ್ಲದೇ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಜನಪ್ರಿಯ ನಟ ಶಾರುಖ್​ ಖಾನ್​​ ಮುಖ್ಯಭೂಮಿಕೆಯ ಜವಾನ್​​ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿ ಸನ್ನಿಧಿಗೆ ಶಾರುಖ್​​ ಖಾನ್​ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ. ವೈಷ್ಣೋದೇವಿ ಸನ್ನಿಧಿಗೆ ಎಸ್​ಆರ್​ಕೆ ಭೇಟಿ: ಪ್ರಸಿದ್ಧ ನಟ ಎಸ್​ಆರ್​ಕೆ ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿ ಸನ್ನಿಧಿಗೆ ಭೇಟಿ ಕೊಟ್ಟಿದ್ದಾರೆ. ಜವಾನ್​ ಬಿಡುಗಡೆಗೂ ಮುನ್ನ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟ ನಟ ವಿಶೇಷ ಪ್ರಾರ್ಥನೆ […]