ಕಂಗನಾ ರಣಾವತ್ ‘ತೇಜಸ್’ ಮತ್ತು ಟೈಗರ್ ಶ್ರಾಫ್ ‘ಗಣಪತ್ ಭಾಗ-1’ ಎರಡು ಸಿನಿಮಾ ಒಂದೇ ದಿನ ತೆರೆಗೆ
ಮುಂಬೈ: ತೇಜಸ್ ಚಿತ್ರದ ಮೂಲಕ ಕಂಗನಾ ರಣಾವತ್ ಮತ್ತೆ ದೊಡ್ಡ ಪರದೆಯ ಮೇಲೆ ಬರಲು ಸಜ್ಜಾಗಿದ್ದಾರೆ. ತಯಾರಕರು ಬುಧವಾರ ತೇಜಸ್‌ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದರು. ಕಂಗನಾ ವಾಯುಪಡೆಯ ಸೇನಾ ಸಮವಸ್ತ್ರದಲ್ಲಿರುವ ಕೆಲವು ಗ್ಲಿಂಪ್‌ಗಳನ್ನು ಸಹ ಹಂಚಿಕೊಂಡಿದ್ದಾರೆ. ಟೈಗರ್ ಶ್ರಾಫ್ ಮತ್ತು ಕೃತಿ ಸನೋನ್ ಅಭಿನಯದ ಆಕ್ಷನ್ ಥ್ರಿಲ್ಲರ್ ‘ಗಣಪತ್ ಭಾಗ-1’ ಚಿತ್ರದೊಂದಿಗೆ ಕಂಗನಾ ಅವರ ‘ತೇಜಸ್’ ಸಿನಿಮಾ ಒಂದೇ ದಿನ ಬಿಡುಗಡೆಯಾಗಲಿದೆ.ನಟಿ ಕಂಗನಾ ರಣಾವತ್ ಮುಂದಿರುವ ‘ತೇಜಸ್’ ನಿರ್ಮಾಪಕರು ಬುಧವಾರ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಕಂಗನಾ […]
ಕ್ಯಾನ್ಸರ್ನಿಂದ ಬಳಲುತ್ತಿದ್ದ ಪುಟ್ಟ ಬಾಲಕಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಟ ಸುದೀಪ್
ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಕನ್ನಡ ನಟ ಎಂದರೆ ಅದು ಅಭಿನಯ ಚಕ್ರವರ್ತಿ ಸುದೀಪ್.ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುಟ್ಟ ಬಾಲಕಿಯನ್ನು ನಟ ಸುದೀಪ್ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅವರು ಕೇವಲ ತೆರೆ ಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ರಿಯಲ್ ಹೀರೋ ಅಂತಾರೆ ಅಭಿಮಾನಿಗಳು. ಕಷ್ಟದಲ್ಲಿದ್ದವರಿಗೆ ಜೊತೆಯಾಗಿ ನಿಲ್ಲುವ ಕಿಚ್ಚನ ಹೃದಯವಂತಿಕೆಗೆ, ಸರಳತೆಗೆ ಅಭಿಮಾನಿಗಳು ಸದಾ ಮೆಚ್ಚುಗೆ ಸೂಚಿಸುತ್ತಾರೆ. ಮೆಚ್ಚಿನ ನಟನನ್ನು […]
10 ವರ್ಷಗಳ ಬ್ರೇಕ್ ಬಳಿಕ ಅಮೀರ್ ಖಾನ್ – ರಾಜ್‌ಕುಮಾರ್ ಹಿರಾನಿ ಸಿನಿಮಾ
ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಐಡಿಯಾ ಬಗ್ಗೆ ನಟ ಅಮೀರ್ ಖಾನ್ ಉತ್ಸುಕರಾಗಿದ್ದರು. ಸದ್ಯ ಅವರ ಸಿನಿಮಾದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ಈಡಿಯಟ್ಸ್ ಮತ್ತು ಪಿಕೆ ಅಂತಹ ಯಶಸ್ವಿ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವ ನಟ ಅಮೀರ್ ಖಾನ್ ಮತ್ತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತೆ ಒಟ್ಟಿಗೆ ಕೆಲಸ ಮಾಡಲು ಯೋಜಿಸುತ್ತಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಲಿರುವ ಬಯೋಪಿಕ್ನಲ್ಲಿ ನಟ ಅಮೀರ್ ಖಾನ್ ನಟಿಸಲಿದ್ದಾರೆ ಎಂಬ ವರದಿಗಳಿವೆ ವರದಿಗಳ ಪ್ರಕಾರ, ಮುಂದಿನ ಈ ಪ್ರಾಜೆಕ್ಟ್ ಇನ್ನೂ ಯೋಜನಾ ಹಂತದಲ್ಲಿದೆ. ಈ […]
ಆಚಾರ್ & ಕೋ ಸಿನಿಮಾ ಜುಲೈ 28ರಂದು ರಾಜ್ಯಾದ್ಯಂತ ತೆರೆಕಾಣಲಿದೆ
ಜುಲೈ 28ರಂದು ಬಿಡುಗಡೆ: ಮಹತ್ವಾಕಾಂಕ್ಷೆಯ ಸಹೋದರಿಯರು ಒಂದು ಕಡೆ ಆಧುನಿಕತೆಯ ಸವಾಲುಗಳನ್ನು ಎದುರಿಸುತ್ತಾ, ಇನ್ನೊಂದೆಡೆ ತಮ್ಮ ಬೇರುಗಳನ್ನೂ ಬಿಡದೇ ಹೇಗೆ ಯಶಸ್ವಿಯಾಗುತ್ತಾರೆ? ಎಂಬ ಕಥೆಯನ್ನು ಪ್ರೇಕ್ಷಕರಿಗೆ ಹೇಳಹೊರಟಿದೆ ವಿಭಿನ್ನ ಶೀರ್ಷಿಕೆಯ ಸಿನಿಮಾ. ಜುಲೈ 28ರಂದು ಸಿನಿಮಾ ತೆರೆಕಾಣಲಿದೆ. ಕನ್ನಡ ಸಿನಿಮೋದ್ಯಮದಲ್ಲಿ ಸದಭಿರುಚಿಯ, ಹೊಸ ಶೈಲಿಯ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಪಿ.ಆರ್.ಕೆ ಪ್ರೊಡಕ್ಷನ್ಸ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ನಿರ್ಮಾಣ ಮಾಡಿದೆ. ಸಿಂಧು ಶ್ರೀನಿವಾಸಮೂರ್ತಿ ಚೊಚ್ಚಲ ನಿರ್ದೇಶನದ ‘ಆಚಾರ್ & ಕೋ’ ಸಿನಿಮಾ ಬಿಡುಗಡೆಗೆ ದಿನಾಂಕ […]
ತೋತಾಪುರಿ 2 : ನವರಸನಾಯಕ ಜಗ್ಗೇಶ್ ಸಿನಿಮಾ ಜೊತೆ ಡಾಲಿ ಧನಂಜಯ್
ತೋತಾಪುರಿ 2 ಫಸ್ಟ್ ಲುಕ್: ತೋತಾಪುರಿ ಮೊದಲ ಭಾಗದ ಅಂತ್ಯದಲ್ಲಿ ಕಾಣಿಸಿಕೊಂಡು ಒಂದು ಸ್ಪೆಷಲ್ ಲುಕ್ ನೀಡಿದ್ದ ನಟ ಡಾಲಿ ಧನಂಜಯ್ ಈ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಪಾತ್ರ ಚಿತ್ರದಲ್ಲಿ ಬಹಳ ವಿಶೇಷವಾಗಿ ಮೂಡಿಬಂದಿದೆ. ಇದೀಗ ತೋತಾಪುರಿ 2 ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇಡೀ ಜಗತ್ತೇ ಒಂದು ಮನೆ, ನಾವೆಲ್ಲಾ ಒಂದೇ ಸೂರಿನಡಿ ಬದುಕುತ್ತಿರುವವರು ಎಂಬ ಭಾವೈಕ್ಯತೆಯ ಸಂದೇಶ ಸಾರುವ, ಸ್ಟ್ರಾಂಗ್ ಕಂಟೆಂಟ್ ಒಳಗೊಂಡಿದ್ದ ತೋತಾಪುರಿ ಸಿನಿಮಾ […]