ಅಬ್ಬರಿಸಿದ “ಕೂಲಿ” ಟ್ರೈಲರ್: ರಜನಿಕಾಂತ್ ಜೊತೆಗೆ ಉಪೇಂದ್ರ ಕೂಡ ನಟಿಸಿರೋ “ಕೂಲಿ” ಹೆಚ್ಚಿಸಿತು ಸಿನಿ ಜ್ವರ!

ರಜನಿಕಾಂತ್ ನಟನೆಯ “ಕೂಲಿ” ಟ್ರೈಲರ್ ಎಲ್ಲೆಡೆ ಅಬ್ಬರಿಸುತ್ತಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ “ಕೂಲಿ”ಚಿತ್ರದ ಟ್ರೈಲರ್ ಗೆ ಎಲ್ಲಡೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. “ಕೂಲಿ” ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರವಿದು. “ಕೂಲಿ” ನಾಯಕ ನಟನಾಗಿ ರಜನಿಕಾಂತ್ ಅವರ 171 ನೇ ಚಿತ್ರವಾಗಿದ್ದು ಈ ವರ್ಷದಲ್ಲಿ ದಾಖಲೆ ಬರೆಯುವ ಚಿತ್ರವೆಂದು ಹೇಳಲಾಗ್ತಿದೆ. ಕನ್ನಡಕ್ಕೂ ಈ ಚಿತ್ರಕ್ಕೆ ಮಹತ್ವವಿದೆ ಯಾಕೆಂದರೆ ರಜನಿಕಾಂತ್ ಜೊತೆಗೆ, ಕೂಲಿ ಚಿತ್ರದಲ್ಲಿ ನಟ ಉಪೇಂದ್ರ ಕೂಡ ನಟಿಸಿದ್ದಾರೆ. ಅಲ್ಲದೇ ನಾಗಾರ್ಜುನ, ಸೌಬಿನ್ […]
ಬರ್ತಿದೆಯಂತೆ “ಧರ್ಮಸ್ಥಳ ಫೈಲ್ಸ್” ಸಿನಿಮಾ: ರಿಜಿಸ್ಟರ್ ಆಯ್ತು ಟೈಟಲ್, ಚಿತ್ರರಂಗದಲ್ಲೂ ಸದ್ದು ಮಾಡುತ್ತ ಧರ್ಮಸ್ಥಳದ ಪ್ರಕರಣ!

ಎಲ್ಲರ ಕಣ್ಣು ಈಗ ಧರ್ಮಸ್ಥಳದತ್ತ ನೆಟ್ಟಿದೆ. ನಿನ್ನೆಯಷ್ಟೇ ಧರ್ಮಸ್ಥಳದ 6 ನೇ ಗುಂಡಿಯಲ್ಲಿ ಮೂಳೆಗಳು ಸಿಕ್ಕಿವೆ. ಎಸ್ ಐಟಿ ಮತ್ತು ಅನಾಮಿಕ ವ್ಯಕ್ತಿ ಇನ್ನಷ್ಟು ಶೋಧನೆಗಿಳಿದಿದ್ದಾರೆ. ಈ ಬೆನ್ನಲ್ಲೇ ಜನರು ಧರ್ಮಸ್ಥಳ ಪ್ರಕರಣದ ಕುರಿತು ಚರ್ಚಿಸೋದು ಜಾಸ್ತಿಯಾಗಿದೆ. ಎಲ್ಲರ ಬಾಯಲ್ಲೂ ಮಣ್ಣಿನಲ್ಲಿ ಹೂತುಹೋದ ಆ ಮೂಳೆಗಳು ಮತ್ತು ಇನ್ನೂ ಸಿಗಬಹುದಾದ ಅಸ್ಥಿಪಂಜರದತ್ತ ನೆಟ್ಟಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕರ್ನಾಟಕ ಸಿನಿಮಾ ವಾಣಿಜ್ಯ ಮಂಡಳಿಯಲ್ಲಿ ಧರ್ಮಸ್ಥಳ ಫೈಲ್ಸ್ ಎನ್ನುವ ಸಿನಿಮಾ ಟೈಟಲ್ ರಿಜಿಸ್ಟರ್ ಆಗಿದ್ದು ಚಿತ್ರರಂಗದಲ್ಲೂ ಸದ್ದು […]
ರಮ್ಯಾ ಗೆ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಮೆಂಟ್ ವಿಚಾರ: ರಮ್ಯಾ ಬೆಂಬಲಕ್ಕೆ ನಿಂತ ಶಿವಣ್ಣ

ತನ್ನನ್ನು ಅಶ್ಲೀಲ ಕಮೆಂಟ್ ಗಳ ಮೂಲಕ ನಿಂದಿಸಿರೋ ದರ್ಶನ್ ಅಭಿಮಾನಿಗಳಿಂದ ತನ್ನ ವ್ಯಕ್ತಿತ್ವಕ್ಕೆ ನೋವಾಗಿದೆ ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ರಮ್ಯಾ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ಈ ಕುರಿತು ಇದೀಗ ದೊಡ್ಡ ಮಟ್ಟದ ಚರ್ಚೆ ಟೀಕೆಗಳು ದರ್ಶನ್ ಅಭಿಮಾನಿಗಳ ವಿರುದ್ದವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ನಟ ಶಿವರಾಜ್ ಕುಮಾರ್ ಕೂಡಾ ರಮ್ಯಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಮ್ಯಾ- ದರ್ಶನ್ ಫ್ಯಾನ್ಸ್ ಕಮೆಂಟ್ ಜಟಾಪಟಿಯಲ್ಲಿ ರಮ್ಯಾ ಪರ ಶಿವರಾಜ್ ಕುಮಾರ್ ದಂಪತಿ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ರಮ್ಯಾ ವಿರುದ್ದ ಬಳಸಿರುವ […]
ಅಂತೂ ಇಂತೂ ಶೂಟಿಂಗ್ ಮುಗಿಸಿದ ಕಾಂತಾರ ಚಾಪ್ಟರ್ 1 : ಮೇಕಿಂಗ್ ವಿಡಿಯೋ ನೋಡಿ ಪ್ರೇಕ್ಷಕರು ದಿಲ್ ಖುಷ್

ಈ ವರ್ಷದ ಅದ್ಧೂರಿ ಬಹುನಿರೀಕ್ಷಿತ ಚಿತ್ರ, ರಿಷಬ್ ಶೆಟ್ಟಿ ಅಭಿನಯದ ಕಾಂತಾರ: ಚಾಪ್ಟರ್ 1’ ಅಂತೂ ಇಂತೂ ಶೂಟಿಂಗ್ ಪೂರ್ಣಗೊಳಿಸಿದ್ದು ಹೊಂಬಾಳೆ ಫಿಲ್ಮ್ಸ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಚಿತ್ರೀಕರಣದ ಹೈಲೈಟ್ ಇಡಿಯೋ ಪೋಸ್ಟ್ ಮಾಡಿದೆ. ಈ ವಿಡಿಯೋ, ಸಿನಿಮಾದ ಮೇಕಿಂಗ್ ತೋರಿಸುವ ಪ್ರಯತ್ನ ಮಾಡಿದೆ. ಕಾಂತಾರ ಚಿತ್ರತಂಡ ಬರೋಬ್ಬರಿ 250 ದಿನಗಳ ಕಾಲ ಶೂಟಿಂಗ್ ನಡೆಸಿದೆ. ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರಲಿದೆ. ಸತತ 3 ವರ್ಷಗಳ ಕಾಲ ರಿಷಬ್ ಹಾಗೂ ತಂಡ ‘ಕಾಂತಾರ: ಚಾಪ್ಟರ್ 1’ […]
ಇಬ್ಬರ ಕಣ್ಣನ್ನು ಬೆಳಗಿಸಿದ ಅಭಿನಯ ಸರಸ್ವತಿ : ತಮ್ಮ ಸಾವಿನಲ್ಲೂ ಮತ್ತೊಬ್ಬರ ಬಾಳಿಗೆ ಬೆಳಕಾದ ಬಿ ಸರೋಜಾದೇವಿ

1960-70 ಸಮಯದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚಿದ ಬಹುಮುಖ ತಾರೆ ಬಿ ಸರೋಜಾದೇವಿ ಅವರೀಗ ಲೋಕ ಬಿಟ್ಟು ಹೋದರೂ, ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಹೌದು 87 ವರ್ಷದ ಬಿ ಸರೋಜಾದೇವಿ ಚಿತ್ರರಂಗ ಕಂಡಂತಹ ಶ್ರೇಷ್ಠ ನಟಿಯಾಗಿದ್ದರು. ಇದೀಗ ಈ ನಟಿಯ ಇಚ್ಛೆಯಂತೆ ಅವರ ಕುಟುಂಬಸ್ಥರು ಸರೋಜಾದೇವಿ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ಬೆಳಕಾಗಿದ್ದಾರೆ. ಈ ಸಂಬಂಧ ಐ ಬ್ಯಾಂಕ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಕೂಡಲೇ, ಐ ಬ್ಯಾಂಕ್‌ನ ತಂಡವು ಸರೋಜಾದೇವಿಯವರ ಮನೆಗೆ […]