ಅಕ್ಷಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಈ ವರ್ಷ ಸೆಟ್ಟೇರಲಿದೆ “ಓ ಮೈ ಗಾಡ್ -3”

ಬಾಲಿವುಡ್‌ನ ನಟಿ ರಾಣಿ ಮುಖರ್ಜಿ ಹಾಗೂ ಅಕ್ಷಯ್ ಕುಮಾರ್ `ಓ ಮೈ ಗಾಡ್-3′ ಸಿನಿಮಾಗಾಗಿ ಒಂದಾಗ್ತಿದ್ದಾರೆ. 2026 ಹೊಸ ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಅಕ್ಷಯ್ ಹಾಗೂ ರಾಣಿ ಮುಖರ್ಜಿ. ಅಂದಹಾಗೆ ಓ ಮೈ ಗಾಡ್ ಸಿನಿಮಾ ಈಗಾಗ್ಲೇ ಪಾರ್ಟ್-1 ಹಾಗೂ ಪಾರ್ಟ್-2 ಗಳಲ್ಲಿ ಸಖತ್ ಸೌಂಡ್ ಮಾಡಿದೆ. ಇದೀಗ ಓ ಮೈ ಗಾಡ್ ಪಾರ್ಟ್-3 ಸಿನಿಮಾ ಇದೇ ವರ್ಷ ಸೆಟ್ಟೇರಲಿದೆ. ಅಕ್ಷಯ್ ಕುಮಾರ್ ಜೊತೆಗೆ ರಾಣಿ ಮುಖರ್ಜಿ ಕೈಜೋಡಿಸುತ್ತಿದ್ದಾರೆ. ಈ ಸುದ್ದಿ ಹೊಸ […]
ನಟ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆ ಡೇಟ್ ಫಿಕ್ಸ್!

ದಕ್ಷಿಣ ಭಾರತದ ಸಿನಿರಂಗದಲ್ಲಿ ಬಹಳ ದಿನಗಳಿಂದ ಕೇಳಿಬರುತ್ತಿದ್ದ ಒಂದು ದೊಡ್ಡ ಗಾಸಿಪ್ ಇದೀಗ ಬ್ರೇಕಿಂಗ್ ನ್ಯೂಸ್ ಆಗಿ ಹೊರಬಿದ್ದಿದೆ. ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವಿಜಯ್–ರಶ್ಮಿಕಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ರಾಜಸ್ಥಾನದ ಐತಿಹಾಸಿಕ ಅರಮನೆಯಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಶೈಲಿಯಲ್ಲಿ ಈ ಮದುವೆ ನಡೆಯಲಿದೆ ಎಂಬ ಮಾಹಿತಿ ವೈರಲ್ […]
ಬಾಕ್ಸ್ ಆಫೀಸ್ ನಲ್ಲಿ ‘ಮ್ಯಾಕ್ಸ್’ ಹಾಗೂ ’45’ ಅಬ್ಬರ; ಸಿನೆಮಾ ಕಲೆಕ್ಷನ್ ಎಷ್ಟು?

ಕನ್ನಡ ಚಿತ್ರರಂಗದ ಇಬ್ಬರು ಧ್ರುವತಾರೆಗಳಾದ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಡುವಿನ ಬಾಕ್ಸ್ ಆಫೀಸ್ ಸಮರ ರಂಗೇರಿದೆ. ಕ್ರಿಸ್‌ಮಸ್ ಸಂಭ್ರಮದ ನಡುವೆ ತೆರೆಕಂಡ ‘ಮಾರ್ಕ್’ ಮತ್ತು ’45’ ಚಿತ್ರಗಳು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತಿದ್ದು, ಮೊದಲ ಎರಡು ದಿನಗಳ ಗಳಿಕೆಯ ವಿವರ ಹೀಗಿದೆ: ವಿಜಯ್ ಕಾರ್ತಿಕೇಯ ನಿರ್ದೇಶನದ, ಅಜನೀಶ್ ಲೋಕನಾಥ್ ಸಂಗೀತವಿರುವ ‘ಮಾರ್ಕ್’ ಸಿನಿಮಾ ಭರ್ಜರಿ ಆರಂಭ ಪಡೆದಿದೆ. ಮೊದಲ ದಿನ (ಗುರುವಾರ): ರಜೆಯ ಲಾಭ ಪಡೆದ ಈ ಚಿತ್ರ ಬರೋಬ್ಬರಿ 7.50 ಕೋಟಿ […]
ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನ

ಮುಂಬೈ: ಬಾಲಿವುಡ್‌ನ ದಂತಕಥೆ ಹಿರಿಯ ನಟ ಧರ್ಮೇಂದ್ರ (89) ಇಂದು ಬೆಳಗ್ಗೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿದ್ದ ಅವರ ಸ್ಥಿತಿ ಗಂಭೀರವಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಧರ್ಮೇಂದ್ರ ಪತ್ನಿ ಹೇಮಾ ಮಾಲಿನಿ, ಪ್ರಕಾಶ್ ಕೌರ್ ಮಕ್ಕಳಾದ ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್, ವಿಜೇತಾ, ಅಜೀತಾ, ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅವರನ್ನು ಅಗಲಿದ್ದಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್, ಗೋವಿಂದ, […]
ಸಖತ್ ಸದ್ದು ಮಾಡ್ತಿದೆ “ದಿ ರಾಜಾಸಾಬ್” ಟ್ರೈಲರ್: ಪ್ರಭಾಸ್ ಅಭಿಮಾನಿಗಳು ಫುಲ್ ಖುಷ್

ರೆಬೆಲ್ ಸ್ಟಾರ್ ಪ್ರಭಾಸ್ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಹಾರರ್-ಫ್ಯಾಂಟಸಿ ಡ್ರಾಮಾ “ದಿ ರಾಜಾಸಾಬ್” ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ನಿರೀಕ್ಷೆಯೂ ದುಪ್ಪಟ್ಟಾಗಿದೆ. ಕಳೆದ ವರ್ಷ, ಚಿತ್ರತಂಡವು ಪ್ಯಾನ್-ಇಂಡಿಯಾ ಝಲಕ್ ಮೂಲಕ ಕುತೂಹಲ ಕೆರಳಿಸಿತ್ತು. ಇದೀಗ ಇದೇ ರಾಜಾಸಾಬ್ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಮಾರುತಿ ನಿರ್ದೇಶನದ ಬಹುನಿರೀಕ್ಷಿತ ‘ದಿ ರಾಜಾಸಾಬ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯ ಈ ಮಹೋನ್ನತ ಪ್ರಾಜೆಕ್ಟ್ಗೆ ಟಿ.ಜಿ. ವಿಶ್ವ ಪ್ರಸಾದ್ […]