ಬದುಕಿಗೆ ಬಲ, ಯುಗಾದಿಯ ಫಲ: ಯುಗಾದಿ ವಿಶೇಷ ಬರಹ

ಯುಗಾದಿ ಎಂದರೆ ಹೊಸತರ ಸಮ್ಮಿಶ್ರಣ. ಈ ಯುಗಾದಿಯಲ್ಲಿ ಫಲವೂ ಸಿಗುತ್ತದೆ. ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿದೆ. ಪಂಚ ಎಂದರೆ ಐದು, ಅಂಗ ಎಂದರೆ ಭಾಗ, ವಾರ, ತಿಥಿ, ಯೋಗ, ನಕ್ಷತ್ರ ಮತ್ತು ಕರಣ ಇವೇ ಆ ಐದು ಅಂಗಗಳು. ಈ ಐದು ಭಾಗಗಳಿಂದ ಕೂಡಿದ ವಿವರವೇ ಪಂಚಾಂಗ, ಪಂಚ + ಅಂಗ = ಪಂಚಾಂಗ, ಇವುಗಳಲ್ಲಿ ಒಂದು ಭಾಗವನ್ನು ಬಿಟ್ಟರೂ ಪಂಚಾಂಗ ಶಾಸ್ತ್ರ ಪೂರ್ಣವಾಗುವುದಿಲ್ಲ. ಇದು ಐದು ಬೆರಳುಗಳ ಪೂರ್ಣಹಸ್ತವಿದ್ದಂತೆ. ಯಾವುದೇ ಶುಭ ಕಾರ್ಯವನ್ನು […]
ಬೇವು ಬೆಲ್ಲದ ಮೂಲಕ ಒಳಿತಿನ ಸಂದೇಶ ಸಾರುವ ಸಂಭ್ರಮದ ಯುಗಾದಿ: ಯುಗಾದಿ ಹಬ್ಬದ ವಿಶೇಷ ಬರಹ

ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಆದರೆ ನಾವು ಕಳೆದ ಸಮಯ ಮಾತ್ರ ಮರಳಿ ಬರುವುದಿಲ್ಲ. ನಮ್ಮಹಿಂದೂಗಳಲ್ಲಿ ಹಬ್ಬಗಳ ಆಚರಣೆ ಬಹಳ ಇದೆ. ಅವುಗಳಲ್ಲಿ ಯುಗಾದಿಯು ಬಹಳ ಮುಖ್ಯವಾದ ಹಬ್ಬವಾಗಿದೆ. ಯುಗಾದಿ ಎ೦ಬ ಪದ ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ. ಯುಗಾದಿ ಎಂದರೆ ಯುಗದ ಆದಿ, ವರ್ಷದ ಆದಿ, ವರ್ಷದ ಆರಂಭ ಎಂಬುದಾಗಿ ಹೇಳಬಹುದಾಗಿದೆ. ಮಾಹೆಗಳಲ್ಲಿ ಚೈತ್ರ ಇದ್ದಂತೆ, ಋತುಗಳಲ್ಲಿ ವಸಂತ ಋತು ಇದ್ದಂತೆ, ಹಿಂದೂ ಧರ್ಮಕ್ಕನುಸಾರ ಹಬ್ಬಗಳಲ್ಲಿ ಯುಗಾದಿ ಹಬ್ಬವು […]
ಯುಗಾದಿಗೆ ಉಸಿರು, ಪ್ರಕೃತಿಯ ಹಸುರು: ಮತ್ತೆ ಬಂತು ಚಿಗುರಿನ ಹಬ್ಬ: ಯುಗಾದಿಯ ವಿಶೇಷ ಬರಹ

ಬರಹ-ಪ್ರಸಾದ ಶೆಣೈ ಮಾರ್ಚ್ ತಿಂಗಳು ಮುಗಿದು ಎಪ್ರಿಲ್ ತಿಂಗಳು ಆರಂಭವಾಗುತ್ತದೋ, ಆಗ ಮರದ ತುಂಬಾ ಚಿಪಿಪಿಲಿ ಹಾಡುಗಳನ್ನು ಹಾಡುತ್ತಲೇ ರೆಂಬೆ ಕೊಂಬೆಗಳಿಗೂ ಹಾರುವ ಹಕ್ಕಿಗಳು ಒಂದೇ ಸಮನೆ ಜಾಸ್ತಿಯಾಗುತ್ತವೆ. ಅವುಗಳೆಲ್ಲಾ “ನೋಡು ನೋಡು ಗೆಳತಿ ಚೈತ್ರ ಕಾಲ ಬಂದಿದೆ, ಮೋಡಿ ಮಾಡಿ ನನ್ನ ಮನಕೆ ಹರುಷ ತಂದಿದೆ”ಎಂದು ಯಕ್ಷಗಾನದಲ್ಲಿ ಭಾಗವತರು ಸುಶ್ರಾವ್ಯವಾಗಿ ಹಾಡುವ ಪದ್ಯದಂತೆ, ವಸಂತರಾಜನನ್ನು ಕೊಂಡಾಡುತ್ತ, ಬಾ ಬಾ ವಸಂತ ಬಾ ಬಾ ಎಂದು ಹಸಿರ ಬಾಗಿಲೊಳು ನಿಂತು ಕರೆದಂತೆ ಕಾಣಿಸುತ್ತವೆ. ಪುಟ್ಟ ಮರಿಹಕ್ಕಿಗೆ ಒಂದೊಂದೇ […]
ವಸುಧೈವ ಕುಟುಂಬಕಂ’ ನುಡಿಯ ನಿಜವಾದ ಅರ್ಥ ಅರಿತಾಗ: ನಟ ಅನಿರುದ್ಧ್ ಬರೆದ ಬರಹ

ಜನಪ್ರಿಯ ಟಿವಿ ಧಾರಾವಾಹಿ ‘ದಿ ಟ್ವೈಲೈಟ್ ಝೋನ್’ನ ಒಂದು ಕಂತು ‘ಎ ಕೈಂಡ್ ಆಫ್ ಎ ಸ್ಟಾಪ್ ವಾಚ್’ದಲ್ಲಿ (೧೯೬೩). ಒಬ್ಬಾತನಿಗೆ ಸ್ಟಾಪ್ ವಾಚೊಂದನ್ನು ಉಡುಗೊರೆಯಾಗಿ ಕೊಟ್ಟಿರುತ್ತದೆ. ತನ್ನೊಡೆಯನ ಹೊರತಾಗಿ ಬೇರೆಲ್ಲದಕ್ಕೂ ಮತ್ತು ಬೇರೆಲ್ಲರಿಗೂ ಸಮಯವನ್ನೇ ನಿಲ್ಲಿಸಬಲ್ಲದು ಈ ಸ್ಟಾಪ್ ವಾಚ್. ಆ ಮನುಷ್ಯ ಈ ಸ್ಟಾಪ್ ವಾಚನ್ನು ಬ್ಯಾಂಕ್ ದರೋಡೆ ಮಾಡಲು ಉಪಯೋಗಿಸುತ್ತಾನೆ. ಕಂತೆ, ಕಂತೆ ನೋಟುಗಳನ್ನು ಒಯ್ಯುತ್ತಿರುವಾಗ ಆಕಸ್ಮಿಕವಾಗಿ ಸ್ಟಾಪ್ ವಾಚನ್ನು ಕೆಳಗೆ ಬೀಳಿಸಿ, ಒಡೆದು ಹಾಕುತ್ತಾನೆ. ಒಮ್ಮೆಲೇ, ಇಡೀ ಜಗತ್ತಿನ ಜನರು ಮತ್ತು […]
ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮನೆಯಲ್ಲೇ ಈ ಸಿಂಪಲ್ ಮಾರ್ಗ ಅನುಸರಿಸಿ: ಸೌಂದರ್ಯ ಲಹರಿ ಅಂಕಣ

«ರಮಿತಾ ಶೈಲೇಂದ್ರ ರಾವ್ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಷ್ಟೆಲ್ಲಾ ಹರಸಾಹಸ ಪಡೆತ್ತೇವೆ. ನೋಡಲು ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಆಸೆಯೂ ಹೌದು. ಮನೆಮದ್ದು ಬಳಸಿ ಸುಲಭವಾಗಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಮಧ್ಯಾಹ್ನದ ವಿಪರೀತ ಬಿಸಿಲನ್ನು ಸ್ವಲ್ಪ ಅವಾಯ್ಡ್ ಮಾಡಿದರೆ ಸಾಕು. ಏಕೆಂದರೆ ಈ ಸಮಯದಲ್ಲಿ ನಮ್ಮ ಚರ್ಮದ ಭಾಗದಲ್ಲಿ ಮರ್ಕ್ಯೂರಿ ಅಂಶ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಇದರಿಂದ ನಮ್ಮ ಕೋಮಲ ತ್ವಚೆ ಕ್ರಮೇಣವಾಗಿ ಗಟ್ಟಿಯಾಗತೊಡಗುತ್ತದೆ. ಬಿಸಿಲಿನ ಸಮಯದಲ್ಲಿ ನಮ್ಮ ಚರ್ಮದ ಭಾಗದಿಂದ ಹೆಚ್ಚು ನೀರಿನ ಅಂಶ ಆವಿಯಾಗುವುದರಿಂದ […]