3 ರಂದು ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾಆದಿಶಕ್ತಿ ಕ್ಷೇತ್ರದಲ್ಲಿ ಏಕಕಾಲ ಶ್ರೀ ಚಕ್ರ ಮಂಡಲ ಪೂಜೆ

ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಜೂನ್ 3 ಶನಿವಾರದಂದು ಹುಣ್ಣಿಮೆಯ ಪರ್ವಕಾಲದಲ್ಲಿ ಶ್ರೀಚಕ್ರ ಪೀಠ ಸುರಪೂಜಿತೆಗೆ ಏಕಕಾಲ ಶ್ರೀಚಕ್ರ ಮಂಡಲ ಪೂಜೆ ಸಂಪನ್ನಗೊಳ್ಳಲಿದೆ. ಭಾರತದ ಹೆಸರಾಂತ ಜಿಮ್ ಟ್ರೈನರ್ ವಿನೋದ್ ಜನ್ನ ಮತ್ತು ಮನೆಯವರ ವತಿಯಿಂದ ಈ ಮಹಾನ್ ಪೂಜೆ ಪ್ರಾಯಶ್ಚಿತ್ತ ಪೂರಕವಾಗಿ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸಂಪನ್ನಗೊಳ್ಳಲಿರುವುದು. ಪ್ರಾತ:ಕಾಲದಿಂದ ಶ್ರೀಚಕ್ರ ಮಂಡಲ ರಚನೆ ಆರಂಭಗೊಳ್ಳಲಿದ್ದು, ಸಂಜೆ […]

ಸಿಜೆಐ ಟಿ.ಎಸ್.ನರಸಿಂಹ ಅವರಿಂದ ಶ್ರೀಕೃಷ್ಣಮಠಕ್ಕೆ ಭೇಟಿ

ಉಡುಪಿ: ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಟಿ.ಎಸ್.ನರಸಿಂಹ ತಮ್ಮ ಕುಟುಂಬ ಸಮೇತರಾಗಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣದೇವರ ದರ್ಶನ ಪಡೆದರು.ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಇವರು ಉಪಸ್ಥಿತರಿದ್ದರು.

ರಾಜ್ಯದ ದಕ್ಷಿಣ ಒಳನಾಡಿನ 6 ಜಿಲ್ಲೆಗಳಲ್ಲಿ ಇಂದು ಧಾರಾಕಾರ ಮಳೆಯಾಗುವ ಸಾಧ್ಯತೆ 

ರಾಜ್ಯದ ದಕ್ಷಿಣ ಒಳನಾಡಿನ 6 ಜಿಲ್ಲೆಗಳಲ್ಲಿ ಇಂದು ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಭಾರಿ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿಯಲ್ಲಿ ಸಾಧಾರಣ ಮಳೆಯಾಗಲಿದೆ. ಕಲಬುರಗಿಯಲ್ಲಿ 39.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆ […]

ಜೂ.3 ಮತ್ತು 4ರಂದು ಮಂಗಳೂರಿನಲ್ಲಿ 6ನೇ ವರ್ಷದ ಹಲಸು ಹಬ್ಬ

ಮಂಗಳೂರು: ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ 6ನೇ ವರ್ಷದ ಹಲಸು ಹಬ್ಬ ಜೂನ್ 3 ಮತ್ತು ‌4ರಂದು ಶರವು ದೇವಳ ಬಳಿಯ‌ ಬಾಳಂಭಟ್ ಹಾಲ್‌ನಲ್ಲಿ ನಡೆಯಲಿದೆ. ಜೂನ್ 3ರಂದು ಬೆಳಗ್ಗೆ 9.30ಕ್ಕೆ ಮೇಯರ್ ಜಯಾನಂದ ಅಂಚನ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಭಟ್ ಆಯಂಡ್ ಭಟ್ ಯೂ ಟ್ಯೂಬ್ ಚಾನಲ್‌ನ ಸುದರ್ಶನ್ ಭಟ್ ಬೆದ್ರಾಡಿ ಹಲಸು ಹಣ್ಣು ತುಂಡು‌ ಮಾಡಿ ಹಬ್ಬಕ್ಕೆ ಚಾಲನೆ‌ ನೀಡುವರು. ಹೋಳಿಗೆ‌ ಮಾಡಿ‌ ಹಲಸು ಮೌಲ್ಯ ವರ್ಧನೆ‌ ಮಾಡಿದ‌ ಲಕ್ಷ್ಮೀ ಚಿದಾನಂದರನ್ನು […]

ವಂಡ್ಸೆ ಗ್ರಾಮಕ್ಕೆ ಬೇಕಾಗಿದೆ 108 ಅಂಬ್ಯುಲೆನ್ಸ್ ಮತ್ತು ಸಮುದಾಯ ಆರೋಗ್ಯ ಕೇಂದ್ರ

ಕುಂದಾಪುರ: ವಂಡ್ಸೆ ಹೋಬಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ 108 ಅಂಬ್ಯುಲೆನ್ಸ್ ಮತ್ತು ಸಮುದಾಯ ಆರೋಗ್ಯ ಕೇಂದ್ರ ಇಲ್ಲದಿರುವುದು ದುರದೃಷ್ಕಕರ. ವಂಡ್ಸೆ ಹೋಬಳಿ ಗ್ರಾಮ ಆಗಿರುವುದರಿಂದ ಇಲ್ಲಿಗೆ ಒಂದು ಸಮುದಾಯ ಆರೋಗ್ಯ ಕೇಂದ್ರ ಮತ್ತು 108 ಅಂಬ್ಯುಲೆನ್ಸ್ ಸೌಲಭ್ಯ ಅಗತ್ಯವಾಗಿದೆ. ಇಲ್ಲಿನ ಸರಕಾರಿ ಕಛೇರಿ, ಬ್ಯಾಂಕುಗಳು, ಸೊಸೈಟಿಯಂತಹ ನಾನಾ ಕೆಲಸಗಳಿಗೆ ಬೇರೆ ಗ್ರಾಮಗಳಿಂದ ನೂರಕ್ಕೂ ಹೆಚ್ಚು ಜನರು ವ್ಯವಹಾರಕ್ಕಾಗಿ ಪ್ರತಿ ನಿತ್ಯ ಬರುತ್ತಾರೆ. ಹೋಬಳಿಗೊಂದು ಸಮುದಾಯ ಆರೋಗ್ಯ ಕೇಂದ್ರ ಇದ್ದರೆ ಸಾರ್ವಜನಿಕರಿಗೆ ಅನುಕೂಲವಾಗುವುದು.ಇಲ್ಲಿ ಯಾರದ್ದಾದರೂ ಆರೋಗ್ಯ ಹದೆಗೆಟ್ಟರೆ […]