ಜೆ.ಸಿ.ಐ ಮಣಿಪಾಲ ಹಿಲ್ ಸಿಟಿ ವತಿಯಿಂದ ಯುವ ಸಬಲೀಕರಣ ತರಬೇತಿ ಕಾರ್ಯಕ್ರಮ

ಮಣಿಪಾಲ: ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಜೆ.ಸಿ.ಐ ಮಣಿಪಾಲ ಹಿಲ್ ಸಿಟಿ ವತಿಯಿಂದ ‘ಯುವ ಸಬಲೀಕರಣ’ ತರಬೇತಿ ಕಾರ್ಯಕ್ರಮವನ್ನು ಆ.5 ರಂದು ಹಮ್ಮಿಕೊಳ್ಳಲಾಗಿತ್ತು. ಸಭೆಯ ಅಧ್ಯಕ್ಷತೆ ಜೇಸಿಐ ಮಣಿಪಾಲ ಹಿಲ್ ಸಿಟಿ ಅಧ್ಯಕ್ಷ ಜೇಸಿ ಜಯಂತ ತಲವಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಕಾಂತರಾಜ್ ಎ.ಎನ್., ಸಂಪನ್ಮೂಲ ವ್ಯಕ್ತಿಯಾಗಿ ಜೇ.ಸಿ.ಐ. ಸೆನೆಟರ್ ಸುಭಾಷ್ ಬಂಗೇರ, ಐಕಾನಿಕ್ ತರಬೇತುದಾರರು, ಜೇಸಿಐ ಭಾರತ, ಹಾಗೂ ಜೊತೆಗೆ ಕಾಲೇಜಿನ ಪ್ರಾಧ್ಯಾಪಕ ವೃಂದದವರು ಹಾಗೂ ಜೇ.ಸಿ.ಐ. ನ […]

ಮಲ್ಪೆ: ಸಮುದ್ರಕ್ಕೆ ತೆರಳಿದ ಇಬ್ಬರು ಬಾಲಕಿಯರು; ಒಬ್ಬಳ ಸಾವು ಮತ್ತೊಬ್ಬಳ ರಕ್ಷಣೆ

ಮಲ್ಪೆ: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಮಲ್ಪೆ ಬಳಿ ನೀರುಪಾಲಾಗಿದ್ದು, ಓರ್ವ ಬಾಲಕಿ ಸಾವನ್ನಪ್ಪಿದ್ದರೆ, ಮತ್ತೊರ್ವ ಬಾಲಕಿಯನ್ನು ರಕ್ಷಿಸಲಾಗಿದೆ. ಮಡಿಕೇರಿ ಮೂಲದ ಮಾನ್ಯ ಮೃತ ರ್ದುದೈವಿ. ಬದುಕುಳಿದ ಯಶಸ್ವಿನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಮಡಿಕೇರಿಯಿಂದ ಈ ಬಾಲಕಿಯರು ನಾಪತ್ತೆಯಾಗಿದ್ದರು. ಈ ಕುರಿತು ಮಡಿಕೇರಿ ಠಾಣೆಯಲ್ಲಿ ಇಬ್ಬರು ಕಾಣೆಯಾಗಿರುವ ದೂರು ದಾಖಲಾಗಿತ್ತು. ಇದೀಗ ಮಲ್ಪೆ ಬಳಿ ನಿನ್ನೆ ತಡರಾತ್ರಿ ಭಾರಿ ಅಲೆಗಳ ಹೊಡೆತಕ್ಕೆ ಇಬ್ಬರು ಬಾಲಕಿಯರು ಸಮುದ್ರ ಪಾಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. […]

ಕ್ಯೂ.ಆರ್. ಕೋಡ್ ಬಳಸಿ, ತ್ಯಾಜ್ಯ ನಿರ್ವಹಣಾ ಶುಲ್ಕ ಪಾವತಿಸಿ: ಕಾಡೂರು-ನಡೂರು ಗ್ರಾಮ ಪಂಚಾಯತ್ ನಿಂದ ವಿನೂತನ ಸೌಲಭ್ಯ

ಕಾಡೂರು: ಡಿಜಿಟಲೀಕರಣ ಪ್ರಭಾವದಿಂದ ಎಲ್ಲಾ ವಸ್ತು ಮತ್ತು ಸೇವೆಗಳು ಆನ್ ಲೈನ್ ಮೂಲಕ ಮನೆ ಬಾಗಿಲಿಗೆ ಬರುತ್ತಿದ್ದು, ವಿದ್ಯುತ್, ಗ್ಯಾಸ್, ಕೇಬಲ್ ಶುಲ್ಕ , ಬಸ್. ರೈಲು, ವಿಮಾನ ಬುಕ್ಕಿಂಗ್ ಸೇರಿದಂತೆ ದೈನಂದಿನ ಹಲವು ವಹಿವಾಟುಗಳನ್ನು ನಗದು ರಹಿತವಾಗಿ ಮನೆಯಿಂದಲೇ ನಿರ್ವಹಿಸಬಹುದಾಗಿದ್ದು, ಈಗ ಮನೆ ಮನೆಯಿಂದ ಕಸ ಸಂಗ್ರಹ ಶುಲ್ಕವನ್ನೂ ಸಹ ಕ್ಯೂಆರ್ ಕೋಡ್ ಮೂಲಕ ಪಾವತಿಸುವ ವಿನೂತನ ಸೌಲಭ್ಯವನ್ನು ಪರಿಚಯಿಸಲಾಗಿದೆ. ಉಡುಪಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಡೂರು-ನಡೂರು ಗ್ರಾಮ ಪಂಚಾಯತ್ ತ್ಯಾಜ್ಯ ನಿರ್ವಹಣಾ ಶುಲ್ಕ ಪಾವತಿಯನ್ನು […]

ಪಾದೂರು ಶ್ರೀ ರಾಮ ಭಜನಾ ಮಂದಿರ ವತಿಯಿಂದ ಆಟಿಡೊಂಜಿ ದಿನ

ಕಾಪು: ಶ್ರೀ ರಾಮ ಭಜನಾ ಮಂದಿರ ಪಾದೂರು, ಚಂದ್ರನಗರ ವತಿಯಿಂದ ಭಾನುವಾರದಂದು ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಗುರ್ಮೆ ಸುರೇಶ ಶೆಟ್ಟಿ ಅವರನ್ನು ಶ್ರೀ ರಾಮ ಭಜನಾ ಮಂದಿರದ ವತಿಯಿಂದ ಅಭಿನಂದಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಪಾದೂರು ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು, ಧರ್ಮದತ್ತ ಶೂನ್ಯಮಾಸ್ಟರ್ ನ್ಯೂಟ್ರಿಶನಿಸ್ಟ್ ದಯಾನಂದ ಕೆ. ಶೆಟ್ಟಿ, ಪಾದೂರು ರೋಟರಿ ಸಮುದಾಯ ದಳ […]

ಮಣಿಪಾಲ: ಮಾಹೆ ವತಿಯಿಂದ ನಮಾಮಿ ಗಂಗೆ ಅರಿವು ಕಾರ್ಯಾಗಾರ

ಮಣಿಪಾಲ: ಮಾಹೆ ವತಿಯಿಂದ ಎಂ.ಸಿ.ಎನ್.ಎಸ್ ನ ಪ್ಲಾಟಿನಂ ಹಾಲ್ ನಲ್ಲಿ ಶನಿವಾರದಂದು ನಡೆದ ನಮಾಮಿ ಗಂಗೆ ಅರಿವು ಕಾರ್ಯಾಗಾರದಲ್ಲಿ ನದಿಯ ಪಾವಿತ್ರ್ಯತೆ, ಅವುಗಳ ಪ್ರಾಮುಖ್ಯತೆ, ಮನುಷ್ಯನ ಜೀವನದಲ್ಲಿ ನೀರಿನ ಪಾತ್ರ, ಹಿಂದಿನ ಕಾಲದಿಂದಲೂ ರಾಜ ಮಹಾರಾಜರುಗಳಿಂದ ಕೆರೆಗಳನ್ನು ಕಟ್ಟಿಸಿದ ಉದ್ದೇಶ ಇವೆಲ್ಲದರ ಬಗ್ಗೆ ಶಾಲಾ-ಕಾಲೇಜುಗಳ ಮಕ್ಕಳಿಗೆ ಅರಿವು ಮೂಡಿಸಲಾಯಿತು. ಗಣ್ಯರು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗಂಗಾನದಿಯ ಹುಟ್ಟು ಹಾಗೂ ಭಾರತದಲ್ಲಿ ಅದಕ್ಕೆ ಇರುವ ಮಹತ್ವದ ಬಗ್ಗೆ ತಿಳಿಸಲಾಯಿತು.