ವಶಪಡಿಸಿಕೊಂಡ ದ್ವಿಚಕ್ರ ವಾಹನಗಳ ಮಾಲೀಕರಿಗೆ ಸೂಚನೆ

ಉಡುಪಿ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ಮಾಹೆ ಕ್ಯಾಂಪಸ್‌ನಲ್ಲಿ ಜುಲೈ 16 ರಂದು ವಾರೀಸುದಾರರಿಲ್ಲದ ದ್ವಿಚಕ್ರ ವಾಹನಗಳಾದ ಕಪ್ಪು ಬಣ್ಣದ ನಂಬರ್ ಪ್ಲೇಟ್ ಇಲ್ಲದ ಹೊಂಡಾ ಆಕ್ಟಿವಾ, ಕೆಎ 05 ಹೆಚ್‌ಡಿ 9020 ಬಿಳಿ ಮತ್ತು ಕೆಂಪು ಬಣ್ಣದ ಸ್ಕೂಟಿ ಪೆಪ್, ಕೆಎ 02 ಜೆ 6294 ಕಪ್ಪು ಬಣ್ಣದ ಕೆನೆಟಿಕ್ ಸ್ಕೂಟಿ, ಕೆಎ 20 ಎಸ್ 44 ಕೆಂಪು ಬಿಳಿ ಬಣ್ಣದ ನೋವಾ ಮಾದರಿಯ ಸ್ಕೂಟರ್, ಕೆಎ 20 ಆರ್ 1295 ಕೆಂಪು ಬಿಳಿ […]

ತಿರಂಗಾದೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಬಹುಮಾನ ಗಳಿಸಿ; ಸ್ವಾತಂತ್ರ್ಯೋತ್ಸವವನ್ನು ವಿಶೇಶವಾಗಿ ಆಚರಿಸಿ!!

ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗೆ ದ.ಕ/ಉಡುಪಿ ಜಿಲ್ಲೆ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ತಿರಂಗಾ ಜೊತೆ ಸೆಲ್ಫಿ ಕ್ಲಿಕ್ಕಿಸಿ 7204146368 ಈ ಸಂಖ್ಯೆಗೆ ಕಳುಹಿಸಿ ಬಹುಮಾನ ಗೆಲ್ಲಿ. ಮೊದಲನೆ ಬಹುಮಾನ-3000ರೂ ಎರಡನೇ ಬಹುಮಾನ-2000ರೂ ಮೂರನೇ ಬಹುಮಾನ-1000ರೂ 5 ಸಮಾಧಾನಕರ ಬಹುಮಾನ ಮತ್ತು ಆಕರ್ಷಕ ಉಡುಗೊರೆ ಗೆಲ್ಲಿ ಫೋಟೋ ಕಳುಹಿಸಲು ಕೊನೆಯ ದಿನಾಂಕ ಆ. 16. ಒಬ್ಬರು ಒಂದು ಫೋಟೋ ಮಾತ್ರ ಕಳುಹಿಸಬಹುದು. ಆ19 ರಂದು […]

ಕುಂದಾಪುರ: ವಿನಾಯಕ ಟಾಕೀಸ್ ರಿಕ್ಷಾ ನಿಲ್ದಾಣ ವಡೇರಹೋಬಳಿಗೆ ಸ್ಥಳಾಂತರ

ಕುಂದಾಪುರ: ಪುರಸಭಾ ವ್ಯಾಪ್ತಿಯ ವಿನಾಯಕ ಟಾಕೀಸಿನ ಹತ್ತಿರದ ಆಟೋ ರಿಕ್ಷಾ ನಿಲ್ದಾಣಕ್ಕೆ ಬದಲಿ ಸ್ಥಳವಾಗಿ ವಡೇರಹೋಬಳಿ ಗ್ರಾಮದ ಸ. ನಂ. 110/2ಎ1 ರಲ್ಲಿ 0.03 ಎಕ್ರೆ ಜಮೀನಿನ ಸ್ಥಳದಲ್ಲಿ ಆಟೋರಿಕ್ಷಾಗಳನ್ನು ನಿಲ್ಲಿಸಲು ಸ್ಥಳ ನಿಗದಿಪಡಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.

ಕವಿತಾ ಟ್ರಸ್ಟ್ ವತಿಯಿಂದ ಸಾದ್ ಸೈಮಾಚೊ: ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗ

ಮಂಗಳೂರು: ಕವಿತಾ ಟ್ರಸ್ಟ್ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ `ಸಾದ್ ಸೈಮಾಚೊ’ (ಪ್ರಕೃತಿಯ ನಾದಗಳು) ಎಂಬ ಕಾವ್ಯ ಮತ್ತು ಕಥಾ ಪ್ರಸ್ತುತಿಯ ವಿಭಿನ್ನ ಪ್ರಯೋಗವನ್ನು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಸಹಕಾರದಲ್ಲಿ ಆಗಸ್ಟ್ 06 ರಂದು ಆಯೋಜಿಸಲಾಯಿತು. ಗೋವಾದ ಢಾಯಿ ಆಖಾರ್ (ಎರಡುವರೆ ಅಕ್ಷರ) ತಂಡವು ಪ್ರಕೃತಿಯ ದನಿಗಳಿಗೆ ಸಂಬಂಧಪಟ್ಟ ಹಿಂದಿ ಮತ್ತು ಕೊಂಕಣಿ ಸಾಹಿತ್ಯವನ್ನು ಪ್ರಸ್ತುತ ಪಡಿಸಿತು. ಕೇದಾರ್‌ನಾಥ್ ಸಿಂಗ್ ಇವರ ’ಬಾಘ್’, ಸಲೀಲ್ ಚತುರ್ವೇದಿಯ ’ಕಹಾಂ ಗಯೀ ಓ ನದೀ ಕೀ ಧಾರ್’ […]

ಮಂದಾರ್ತಿ: ನಮಸ್ತೆ ಭಾರತ್ ಟ್ರಸ್ಟ್ ವತಿಯಿಂದ ಸದಾವತ್ಸಲೇ ಜನ-ಗಣ-ಮನ ಕಾರ್ಯಕ್ರಮ

ಮಂದಾರ್ತಿ: ನಮಸ್ತೆ ಭಾರತ್ ಟ್ರಸ್ಟ್ (ರಿ) ಮಂದಾರ್ತಿ ಇವರ ಸಂಯೋಜನೆಯಲ್ಲಿ ಆ.13 ರಂದು ಮಧ್ಯಾಹ್ನ 3 ಗಂಟೆಗೆ ಮಂದಾರ್ತಿ ಶ್ರೀ ದುರ್ಗಾ ಸನ್ನಿಧಿ ಶೇಡಿಕೂಡ್ಲುವಿನಲ್ಲಿ ಸದಾವತ್ಸಲೇ ಜನ-ಗಣ-ಮನ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ಜಾಗೃತಿ, ಪ್ರತಿಭಾ ಪುರಸ್ಕಾರ, ಕಿರುಚಿತ್ರ ಪ್ರದರ್ಶನ, ಕುಣಿತ ಭಜನೆ, ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ಹಮ್ಮಿಕೊಳ್ಳಲಾಗಿದೆ. ವೃತ್ತಿಪರ ಕೃಷಿಕ ಹೆಚ್. ವಿಠಲ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ, ಮಂದಾರ್ತಿ ದೇವಳದ ಆನುವಂಶಿಕ ಮೊಕ್ತೇಸರ ಹೆಚ್.ಧನಂಜಯ್ […]