ಜಿಲ್ಲಾ ಲಯನ್ಸ್ 317C ಸಂಪುಟ – ಪದಪ್ರದಾನ ‘ಬೆಳಕು’ ಸಮಾರಂಭ

ಉಡುಪಿ: ಜಿಲ್ಲಾ ಲಯನ್ಸ್ 317C ಸಂಪುಟ – ಪದಪ್ರದಾನ ‘ಬೆಳಕು’ ಸಮಾರಂಭ ಶನಿವಾರ ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ನಡೆಯಿತು. ಈ ಹಿಂದಿನ ಅಂತಾರಾಷ್ಟ್ರೀಯ ನಿರ್ದೇಶಕ ಕೆ.ಜಿ. ರಾಮಕೃಷ್ಣಮೂರ್ತಿ ನೂತನ ಸಂಪುಟದ ಪದಪ್ರದಾನ ನೆರವೇರಿಸಿದರು. ಪ್ರಥಮ ಮಹಿಳೆ ಓಫಿಲಿಯಾ ಫಿಲೋಮಿನಾ ಕರ್ನೆಲಿಯೋ ಬೆಳಕು ಪದ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿದರು. ಉಡುಪಿ ಧರ್ಮಪ್ರಾಂತದ ಬಿಷಪ್ ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಆಶೀರ್ವಚನ ನೀಡಿ, ಡಾ| ನೇರಿ ಕರ್ನೇಲಿಯೊ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗಾಗಿ ತೊಡಗಿಸಿಕೊಂಡವರು. ಉತ್ತಮ ಸಮಾಜ […]

ಪಂದುಬೆಟ್ಟುವಿನ ನಾಗಮೂಲಸ್ಥಾನದಲ್ಲಿ ನಾಗಾರಾಧನೆ, ನಾಗತಂಬಿಲ ಸೇವೆ

ಉಡುಪಿ: ಕಲ್ಮಾಡಿ ಪಂದುಬೆಟ್ಟುವಿನ ನಾಗ ಮೂಲಸ್ಥಾನದಲ್ಲಿ ನಾಗದೇವರಿಗೆ ವಿಶೇಷ ಪೂಜಾಕೈಂಕರ್ಯಗಳನ್ನು ನೆರವೇರಿಸಲಾಯಿತು. ನಾಗತಂಬಿಲ‌ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಚಿಕ್ಕಮಗಳೂರು ಸಹಿತ ಉಡುಪಿಯ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಭಕ್ತರು ತಂದ‌ ಹಾಲು, ಸೀಯಾಳವನ್ನು ಅರ್ಚಕರು ದೇವರಿಗೆ ಅರ್ಪಿಸಿದರು. ಇದು ಅತ್ಯಂತ ಪ್ರಾಚೀನ ನಾಗಬನವಾಗಿದ್ದು, ನೂರಾರು ಕುಟುಂಬಗಳಿಗೆ ಮೂಲಸ್ಥಾನವೂ ಆಗಿದೆ. ಅಲ್ಲದೆ, ಗರೋಡಿ, ದೇವಸ್ಥಾನ, ಗುತ್ತುದ ಮನೆಗಳಿಗೆ ಈ ನಾಗಬನವೇ ಮೂಲ. ಹೀಗಾಗಿ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಜನರು‌ ಆಗಮಿಸಿ ತನು ಸೇವೆ ಅನ್ನು […]

ವಿವಿ ಗಳ ಎಸ್ ಸಿ-ಎಸ್ ಟಿ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಗೆ 230 ಕೋಟಿ ನೀಡಲು ನಿರ್ಧಾರ 

ಬೆಂಗಳೂರು : ವಿಶ್ವವಿದ್ಯಾಲಯಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ಅನ್ನು ಎಸ್‌.ಪಿ.ಎಸ್.ಪಿ. / ಟಿ.ಎಸ್.ಪಿ. ಅಡಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಶ್ವ ವಿದ್ಯಾಲಯಗಳ ಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು. ಲ್ಯಾಪ್ ಟಾಪ್ ವಿತರಿಸುವ ಸಂಬಂಧ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ. ಅಡಿ 230 ಕೋಟಿ ರೂ. ಒದಗಿಸುವಂತೆ ಸಮಾಜ ಕಲ್ಯಾಣ […]

ಗೃಹಲಕ್ಷ್ಮೀ ಯೋಜನೆ: ಆಗಸ್ಟ್ 30ರಂದು ಮಹಿಳೆಯರ ಖಾತೆಗೆ 2000 ರೂ. ವರ್ಗಾವಣೆ: ಲಕ್ಷ್ಮೀ ಹೆಬ್ಬಾಳ್ಕರ್

ಮೈಸೂರು: ಆಗಸ್ಟ್ 30ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆಯಲಿದ್ದು, ಸರ್ಕಾರ ಅಂದೇ ಮಹಿಳೆಯರ ಖಾತೆಗೆ 2 ಸಾವಿರ ರೂ. ಹಣ ಹಾಕಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು 4 ಜಿಲ್ಲೆಗಳಲ್ಲಿ 13,81,430 ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. 1,09,54,000 ಮಹಿಳೆಯರ ಖಾತೆಗೆ ತಲಾ 2,000 ರೂ. ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.

ಉಡುಪಿ: ತುಳುನಾಡ ಟೈಗರ್ಸ್ ನ ಮೂರನೇ ವರ್ಷದ ಹುಲಿ‌ ಕುಣಿತದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ತುಳುನಾಡ ಟೈಗರ್ಸ್ ಉಡುಪಿ ಇದರ ಆಶ್ರಯದಲ್ಲಿ ರಾಜೇಶ್ ಸುವರ್ಣ ನೇತೃತ್ವದಲ್ಲಿ ‌ನಿಟ್ಟೂರಿನ ಹೈಸ್ಕೂಲ್ ಬಳಿಯ ತಾಂಗದಗಡಿಯಲ್ಲಿ ಸೆಪ್ಟೆಂಬರ್ 6 ಮತ್ತು 7ರಂದು ನಡೆಯಲಿರುವ ಮೂರನೇ ವರ್ಷದ ಹುಲಿ‌ ಕುಣಿತ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಅಂಬಲಪಾಡಿ ದೇವಸ್ಥಾನದಲ್ಲಿ ಜರಗಿತು. ತುಳುನಾಡ ಟೈಗರ್ಸ್ ನ ರಾಜೇಶ್ ಸುವರ್ಣ, ಜಯಂತ್ ಸುವರ್ಣ, ದಿವಾಕರ್ ಪೂಜಾರಿ, ಪ್ರಸನ್ನ ಅಲೆವೂರು, ನಂದೀಶ್ ಪೂಜಾರಿ, ಪ್ರಸನ್ನ ಆಚಾರ್ಯ, ಶೇಖರ್, ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.