ನಾಳೆ (ಆ. 24) ವಿವಿಧೆಡೆ ವಿದ್ಯುತ್ ವ್ಯತ್ಯಯ
ಉಡುಪಿ: 33/11 ಕೆ.ವಿ ಶಿರ್ವ ಎಂ.ಯು.ಎಸ್.ಎಸ್ ನಲ್ಲಿ 5 ಎಂ.ವಿ.ಎ. ಎಸ್.ಎಫ್-6 ಬ್ರೇಕರ್ ಚಾರ್ಜಿಂಗ್ ಮತ್ತು ಕೆಪಾಸಿಟರ್ ಬ್ಯಾಂಕ್-1 ಮತ್ತು 2 ಚಾರ್ಜಿಂಗ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಸದರಿ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್‌ಗಳಾದ ಉಳಿಯಾರಗೋಳಿ, ಬಂಟಕಲ್ಲು, ಮೂಡಬೆಟ್ಟು, ಪಾಂಗಳ, ಶಿರ್ವ, ಶಂಕರಪುರ, ಕುಂಜಾರುಗಿರಿ, ಸಾಲ್ಮರ, ಪಾಜೈ, ಕುರ್ಕಾಲು, ಇನ್ನಂಜೆ, ಪಡುಬೆಳ್ಳೆ, ಮಟ್ಟಾರು, ಪದವು, ಪಾಂಬೂರು, ಪಿಲಾರು ಖಾನ, ಪೆರ್ನಾಲು, ಕುತ್ಯಾರು, ಪುಂಚಲಕಾಡು, ಕಳತ್ತೂರು, ಚಂದ್ರನಗರ, ಮಲ್ಲಾರು, ಪೊಲಿಪು, ಕೊಪ್ಪಲಂಗಡಿ, ಪಣಿಯೂರು, ಕಾಪು ಬಡಾ ಗ್ರಾಮ(ಉಚ್ಚಿಲ), […]
ಬನ್ನಂಜೆ: ಆ. 25 ರಂದು ಮಹೀಂದ್ರ ರೂರಲ್ ಹೌಸಿಂಗ್ ಪ್ರೈ.ಲಿ ನಲ್ಲಿ ನೇರ ಸಂದರ್ಶನ
ಬನ್ನಂಜೆ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಆಗಸ್ಟ್ 25 ರಂದು ಬೆಳಗ್ಗೆ 10.30 ಕ್ಕೆ ನಗರದ ಬನ್ನಂಜೆ ರೋಡ್ ಶ್ರೀರಾಮ್ ಬಿಲ್ಡಿಂಗ್ 2 ನೇ ಮಹಡಿಯ ಮಹೀಂದ್ರ ರೂರಲ್ ಹೌಸಿಂಗ್ ಪ್ರೈ.ಲಿ ಇಲ್ಲಿ ನೇರ ಸಂದರ್ಶನ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ ಮತ್ತು ಡಿಪ್ಲೋಮಾ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಧಿಕಾರಿ […]
ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.ಗೆ ಸಾಧನಾ ಪ್ರಶಸ್ತಿ
ಉಡುಪಿ: ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ., 2022-23ನೇ ಸಾಲಿನಲ್ಲಿ ಸಂಘವು ಸಾಧಿಸಿದ ಸರ್ವತೋಮುಖ ಅಭಿವೃದ್ದಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೆಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇವರಿಂದ ಗುರುತಿಸಲ್ಪಟ್ಟು ಸಾಧನಾ ಪ್ರಸ್ತಿಗೆ ಭಾಜನವಾಗಿದೆ. ಆ.19 ರಂದು ನಡೆದ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷ ಅಲೋಶಿಯಸ್ ಡ್ ಅಲ್ಮೇಡಾ, ಉಪಾಧ್ಯಕ್ಷ ಲೂವಿಸ್ ಲೋಬೋ ಮತ್ತು ಸಿಇಓ ಸಂದೀಪ್ ಫೆರ್ನಾಂಡೀಸ್ ಇವರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್.ರಾಜೇಂದ್ರ ಕುಮಾರ್ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ […]
ಛಾಯಾಚಿತ್ರ ಪತ್ರಕರ್ತ ಜನಾರ್ದನ್ ಕೊಡವೂರು ಇವರಿಗೆ ಛಾಯಾ ಸಾಧಕ ಪುರಸ್ಕಾರ
ಉಡುಪಿ: ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಛಾಯಾಚಿತ್ರ ಪತ್ರಕರ್ತ ಜನಾರ್ದನ್ ಕೊಡವೂರು ಇವರಿಗೆ ಛಾಯಾ ಸಾಧಕ ಪುರಸ್ಕಾರ ದೊರೆತಿದೆ. ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಛಾಯಾ ಸಾಧಕ ಪುರಸ್ಕಾರವನ್ನು ನೀಡಿದರು. ಈ ಸಂದರ್ಭದಲ್ಲಿ ಕೆಎಸ್ ಪಿವಿ ಅಧ್ಯಕ್ಷ ರಮೇಶ್ ಬಿ.ಕೆ, ಗರುಡ ಫೌಂಡೇಶನ್ ನ ಅಧ್ಯಕ್ಷೆ ಮೇಧಿನಿ ಗರುಡಾಚಾರ್, ಕೋಶಾಧಿಕಾರಿ ರಘು, ಕಾರ್ಯದರ್ಶಿ ರಮೇಶ್ ಮೂರ್ತಿ ಉಪಸ್ಥಿತರಿದ್ದರು.
ಕಾನೂನು ಬಾಹಿರವಾಗಿ ಚಟುವಟಿಕೆ ನಡೆಸುವ ಕ್ಲಬ್ ಪಬ್ ಹಾಗೂ ಮಟ್ಕಾ ದಂಧೆ ನಿಲ್ಲಿಸಲು ಬಿಜೆಪಿ ಒತ್ತಾಯ
ಉಡುಪಿ: ಜಿಲ್ಲೆಯ ಮಣಿಪಾಲ ಪರಿಸರದಲ್ಲಿ ಮಧ್ಯರಾತ್ರಿಯ ನಂತರವೂ ಪರವಾನಿಗೆ ಇಲ್ಲದೆ, ಅಬಕಾರಿ ಇಲಾಖೆಯ ಸಿಎಲ್ 7 ಮತ್ತು ಸಿಎಲ್ 9 ಬಳಸಿಕೊಂಡು ಪಬ್ಬುಗಳಲ್ಲಿ ಮತ್ತು ಡಿಸ್ಕೋಗಳಲ್ಲಿ ಡಿಜೆ ಮ್ಯೂಸಿಕ್ ಬಳಸಿ ಚಟುವಟಿಕೆ ನಡೆಸುತ್ತಿದ್ದು, ಸದ್ರಿ ಚಟುವಟಿಕೆಗಳು ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿವೆ. ಅಬಕಾರಿ ಇಲಾಖೆಯ ಕಾನೂನಿನಂತೆ ಬಾರ್ ಮತ್ತು ರೆಸ್ಟೋರೆಂಟ್ ಗಳು ನಿಗದಿತ ಮುಕ್ತಾಯ ಅವಧಿಯ ನಂತರವೂ ತನ್ನ ವ್ಯವಹಾರವನ್ನು ಯಾವುದೇ ಅಳುಕಿಲ್ಲದೆ ನಡೆಸಿಕೊಂಡಿವೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಉಡುಪಿ ಜಿಲ್ಲೆಯಾದ್ಯಂತ ರಿಕ್ರಿಯೇಷನ್ ಕ್ಲಬ್‌ನ ಹೆಸರಿನಲ್ಲಿ ಇಸ್ಪಿಟ್ […]