ಇನ್ನು ನಾಲ್ಕು ಗಂಟೆಗಳಲ್ಲಿ ವಿಕ್ರಮನ ಗರ್ಭದಿಂದ ಹೊರಬರಲಿದೆ ಪ್ರಗ್ಯಾನ್!! ಚಂದ್ರನ ಮೇಲೆ ಭಾರತದ ರಾಷ್ಟ್ರೀಯ ಚಿಹ್ನೆ ಅಂಕಿತಕ್ಕೆ ಕ್ಷಣಗಣನೆ…

ಬೆಂಗಳೂರು: ಇಸ್ರೋ ವಿಜ್ಞಾನಿಗಳ ತ್ಯಾಗ ಮತ್ತು ಎಡೆ ಬಿಡದ ಪರಿಶ್ರಮವು ಐತಿಹಾಸಿಕ ದಾಖಲೆಯನ್ನು ಬರೆದಿದೆ. ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿರಿಸಿದೆ. ಇನ್ನೀಗ ಕೆಲವೇ ಗಂಟೆಗಳಲ್ಲಿ ಪ್ರಗ್ಯಾನ್ ತನ್ನ ಕೆಲಸವನ್ನು ಶುರು ಮಾಡಲಿದೆ. ಚಂದ್ರನ ಮೇಲೆ ಇಳಿದ ನಂತರ ‘ವಿಕ್ರಮ್’ ಸ್ವಲ್ಪ ಹೊತ್ತು ಕಾದು ಧೂಳಿನ ಕಣಗಳು ನೆಲೆಗೊಳ್ಳಲು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಇದರ ನಂತರ, ಅದು ತನ್ನ ಹೊಟ್ಟೆಯನ್ನು ತೆರೆಯುತ್ತದೆ, ಮತ್ತು ಚಂದ್ರನ ಮೇಲ್ಮೈಗೆ ರಾಂಪ್ ಅನ್ನು ಹಾಕಲಾಗುತ್ತದೆ. ಆರು ಚಕ್ರಗಳ […]

ಬ್ರಹ್ಮಾವರ ಮೂರ್ತೆದಾರರ ಸೇವಾ ಸಹಕಾರಿ ಸಂಘ ಕ್ಕೆ ಸಾಧನ ಪ್ರಶಸ್ತಿಯ ಗೌರವ

ಮಂಗಳೂರು:ಬ್ರಹ್ಮಾವರ ಮೂರ್ತೆದಾರರ ಸೇವಾ ಸಹಕಾರಿ ಸಂಘ ಸಾಧಿಸಿದ ಸರ್ವತೋಮುಖ ಅಭಿವೃದ್ಧಿಯನ್ನು ಗುರುತಿಸಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮಂಗಳೂರು ಇದರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದಲ್ಲಿ ಸಾಧನಾ ಪ್ರಶಸ್ತಿ 2022-23ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಾವರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಂಕರ ಪೂಜಾರಿ ಕುಕ್ಕುಡೆ., ನಿರ್ದೇಶಕ ಅಚ್ಚುತ ಕೋಟ್ಯಾನ್ ಹೇರೂರು , ಸತೀಶ್ ಪೂಜಾರಿ ಉಗ್ಗೇಲ್ ಬೆಟ್ಟು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಎನ್ ಕರ್ಕೇರಾ ಉಪಸ್ಥಿತರಿದ್ದು ಪ್ರಶಸ್ತಿ ಸ್ವೀಕರಿಸದರು. ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ […]

ಅಮರನಾಥದಲ್ಲಿ ವಿಹಿಂಪ ಹಾಗೂ ಬಜರಂಗದಳದಿಂದ ಸೌಜನ್ಯಳಿಗಾಗಿ ಪ್ರಾರ್ಥನೆ

ಶ್ರೀನಗರ: ಬೆಳ್ತಂಗಡಿಯ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳಿಗೆ ಶಿಕ್ಷೆಯಾಗಿ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪುತ್ತೂರಿನ ವಿಶ್ವ ಹಿಂದೂಪರಿಷತ್ ಹಾಗೂ ಬಜರಂಗದಳ ವತಿಯಿಂದ ಅಮರನಾಥದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಅಂಚೆ ಇಲಾಖೆಯಿಂದ ಡಿಜಿಟಲ್ ಇಂಡಿಯಾ ಫಾರ್ ನ್ಯೂ ಇಂಡಿಯಾ ಕುರಿತು ಪತ್ರ ಲೇಖನ ಸ್ಪರ್ಧೆ

ಉಡುಪಿ: ಭಾರತೀಯ ಅಂಚೆ ಇಲಾಖೆಯ ವತಿಯಿಂದ ನವ ಭಾರತದ ನಿರ್ಮಾಣಕ್ಕಾಗಿ ಡಿಜಿಟಲ್ ಇಂಡಿಯಾ (ಡಿಜಿಟಲ್ ಇಂಡಿಯಾ ಫಾರ್ ನ್ಯೂ ಇಂಡಿಯಾ) ಎಂಬ ವಿಷಯದ ಕುರಿತು 18 ವರ್ಷ ಒಳಗಿನವರಿಗೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಮುಕ್ತವಾಗಿ ಭಾಗವಹಿಸಲು ಪತ್ರ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಾಳುಗಳು ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಅಂತರ್ದೇಶಿಯ ಪತ್ರದಲ್ಲಿ ಐದು ನೂರು ಶಬ್ದಗಳಿಗೆ ಮೀರದಂತೆ ಅಥವಾ ಎ4 ಹಾಳೆಯಲ್ಲಿ ಒಂದು ಸಾವಿರ ಶಬ್ದಗಳು ಮೀರದಂತೆ ಲೇಖನವನ್ನು ಕೈಬರಹದಲ್ಲಿ ಬರೆದು, ಅಂಚೆ ಲಕೋಟೆಯಲ್ಲಿ […]

ರೋಟರಿ ಮಣಿಪಾಲ ಹಿಲ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶಭಕ್ತಿ ಗೀತೆ ಸ್ಪರ್ಧಾ ಕಾರ್ಯಕ್ರಮ

ಮಣಿಪಾಲ: ರೋಟರಿ ಮಣಿಪಾಲ ಹಿಲ್ಸ್, ಹುಡ್ಕೋ ಫ್ರೆಂಡ್ಸ್ ಹಾಗೂ ಮಣಿಪಾಲ ಕೆರೋಕೆ ಯವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಾರ್ವಜನಿಕರಿಗಾಗಿ ಜಿಲ್ಲಾಮಟ್ಟದ ದೇಶ ಭಕ್ತಿ ಗೀತೆ ಸ್ಪರ್ಧೆ ಸತತ 5ನೇ ವರ್ಷ ಆಯೋಜಿಸಲಾಗಿದ್ದು, ಸುಮಾರು ನೂರಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಮಾಜಿ ರೋಟರಿ ಜಿಲ್ಲಾ ರಾಜ್ಯಪಾಲ ಹಾಗೂ ಯುವ ಉದ್ಯಮಿ ರೋ. ಅಭಿನಂದನ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ನಾಗರಿಕರಲ್ಲಿ ದೇಶಭಕ್ತಿಯನ್ನು ಜಾಗೃತಿಗೊಳಿಸುವ ಕಾರ್ಯಕ್ರಮವನ್ನು ಶ್ಲಾಘಿಸಿದರು. ಶಾಸಕ ಯಶ್ ಪಾಲ್ ಸುವರ್ಣ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ […]