ಉಡುಪಿ: ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ತೊಂದರೆ ನೀಡುವವರ ವಿರುದ್ದ ಕ್ರಮಕ್ಕೆ ಆಗ್ರಹ; ಸಾರ್ವಜನಿಕ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಮನವಿ.

ಉಡುಪಿ: ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಚ್ ಅಶೋಕ್ ಅವರಿಗೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಅನಗತ್ಯ ತೊಂದರೆ ನೀಡುತ್ತಿರುವ ಕುರಿತು ಸಾರ್ವಜನಿಕ ಹಿತರಕ್ಷಣಾ ವೇದಿಕೆ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಡಾಕ್ಟರ್ ಎಚ್. ಅಶೋಕ್ ಕಳೆದ ಒಂದು ವರ್ಷ ಐದು ತಿಂಗಳಿನಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಜನಾನುರಾಗಿಯಾಗಿ ದಕ್ಷ ಹಾಗೂ ಪ್ರಾಮಾಣಿಕವಾಗಿ ಜನ ಸೇವೆಯನ್ನು ನೀಡುತ್ತಾ ಬಂದಿದ್ದು ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ಕೆಲವೊಂದು ವೈದ್ಯರು ಇಲ್ಲೇ ಸೇವೆ ಸಲ್ಲಿಸುತ್ತಿದ್ದು ಬಡ ರೋಗಿಗಳಿಗೆ ಸ್ಪಂದಿಸುತ್ತಿಲ್ಲ […]
ಅಕ್ಷಯಾಮೃತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 4ನೇ ವಾರ್ಷಿಕ ಮಹಾಸಭೆ: ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ

ಹಿರಿಯಡಕ: ಅಕ್ಷಯಾಮೃತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 4ನೇ ವಾರ್ಷಿಕ ಮಹಾಸಭೆಯು ಸೆ.20 ರಂದು ಸುರಭಿ ಸಭಾಭವನ ಹಿರಿಯಡಕದಲ್ಲಿ ಅಪರಾಹ್ನ 3 ಗಂಟೆಗೆ ಸಂಘದ ಅಧ್ಯಕ್ಷರಾದ ಜನಾರ್ಧನ್ ಆರ್. ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಗತಿ ಪರ ಕೃಷಿಕ ಸುರೇಶ್ ನಾಯಕ್ ಮುಂಡುಜೆ ಯವರನ್ನು ಮತ್ತು ಜಾನಪದ ಕ್ಷೇತ್ರವನ್ನು ಗುರುತಿಸಿ ನೀರೆ ಬೈಲೂರಿನ ಶೇಷಿಯವರನ್ನು ಹಾಗೂ ಮಾಜಿ ಸೈನಿಕರಾದ ರಾಮ್‍ದಾಸ್ ದಾಮೋದರ ಸಾಲ್ವಂಕಾರ್, ಹರಿಕೃಷ್ಣ ಪೂಜಾರಿ, ಮನೋಹರ ನಾಯಕ್ ಸನ್ಮಾನಿಸಲಾಯಿತು ಮತ್ತು ಎಸ್ ಎಸ್ ಎಲ್‌ಸಿ’ಯಲ್ಲಿ ಅತೀ ಹೆಚ್ಚು […]
ಹಮಾಸ್ ಉಗ್ರರನ್ನು ಗುರಿಯಾಗಿಸಿ ಗಾಜಾ ಮೇಲೆ ಇಸ್ರೇಲ್ ದಾಳಿ; ಮಕ್ಕಳು, ಮಹಿಳೆಯರು ಸೇರಿ 34 ಮಂದಿ ಮೃತ್ಯು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ಯಾಲೆಸ್ತೀನ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಲು ಹಲವು ದೇಶಗಳು ಸಿದ್ಧತೆ ನಡೆಸಿರುವ ಮಧ್ಯೆಯೇ ಇಸ್ರೇಲ್ ನಡೆಸಿದ ದಾಳಿಗೆ ಗಾಜಾದಲ್ಲಿ ಮಕ್ಕಳು, ಮಹಿಳೆಯರು ಸೇರಿ 34 ಜನರು ಮೃತಪಟ್ಟಿದ್ದಾರೆ. ಇಸ್ರೇಲ್ ಹಮಾಸ್ ಉಗ್ರರನ್ನು ಗುರಿಯಾಗಿಸಿದೆ ಎಂದು ಸಮರ್ಥಿಸುತ್ತಿದ್ದು, ಇತ್ತ ನಾಗರಿಕ ಪ್ರದೇಶಗಳ ಮೇಲೂ ದಾಳಿಯಾಗುತ್ತಿದೆ. ಹಮಾಸ್‌ನ ಸ್ನೈಪರ್ ಆಗಿದ್ದ ಮಾಜೆದ್ ಅಬು ಸೆಲ್ಮಿಯಾರನ್ನು ಹತ್ಯೆಗೈಯಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಆದರೆ ಇದನ್ನು ಶೀಫಾ ಆಸ್ಪತ್ರೆಯ ನಿರ್ದೇಶಕ ಡಾ.ಮೊಹಮ್ಮದ್ ಸೆಲ್ಮಿಯಾ ನಿರಾಕರಿಸಿದ್ದಾರೆ.
ಮಂಗಳೂರು: ಸೆ.25ರಂದು ಉದ್ಯೋಗ ಮೇಳ

ಮಂಗಳೂರು: ನಗರದ ಮಣೇಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಬೊಂದೆಲ್‌ನಲ್ಲಿರುವ ಬೆಸೆಂಟ್ ಕ್ಯಾಂಪಸ್‌ನಲ್ಲಿ ಸೆ.25ರಂದು ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಎಂಎಸ್‌ಎನ್‌ಐಎಂ ಕೆರಿಯರ್ ಎಕ್ಸ್‌ಪೋ 2025 – ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಉದ್ಯೋಗ ಮೇಳ ಬಿಎ, ಬಿ.ಕಾಂ, ಬಿಬಿಎ, ಬಿ.ಎಸ್ಸಿ., ಬಿಸಿಎ, ಬಿಎಚ್‌ಎಂ, ಎಂ.ಕಾಂ, ಎಂಸಿಎ, ಎಂಬಿಎ, ಬಿಇ, ಬಿ.ಟೆಕ್., ಮತ್ತು ಎಂ.ಟೆಕ್ ಸ್ಟ್ರೀಮ್‌ಗಳ ಹೊಸ ಪದವೀಧರರಿಗೆ ಮುಕ್ತವಾಗಿದೆ, ಅವರು ಉತ್ತಮ ಉದ್ಯೋಗಾವ ಕಾಶಗಳನ್ನು ಅನ್ವೇಷಿಸಲು ತಮ್ಮ ಸಿವಿ ಮತ್ತು ಪ್ರಮಾಣಪತ್ರಗಳೊಂದಿಗೆ ಹಾಜರಾಗಬಹುದು. […]
ಎಂಸಿಸಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ: ರೂ.9.51 ಕೋಟಿ ನಿವ್ವಳ ಲಾಭ, ಶೇ.10 ಡಿವಿಡೆಂಡ್ ಘೋಷಣೆ.

ಮಂಗಳೂರು: 2024–25ನೇ ಹಣಕಾಸು ವರ್ಷದಲ್ಲಿ ಎಂ.ಸಿ.ಸಿ. ಬ್ಯಾಂಕ್ ಎಲ್ಲಾ ಹಣಕಾಸು ನಿಯತಾಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಮತ್ತು ತನ್ನ ಷೇರುದಾರರಿಗೆ 10% ಲಾಭಾಂಶವನ್ನು ಘೋಷಿಸಿದೆ. 2024–25ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ₹9.51 ಕೋಟಿಗಳ ಅಭೂತಪೂರ್ವ ನಿವ್ವಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಹೇಳೀದರು. ಅವರು 2025 ಸಪ್ಟಂಬರ್ 21ರಂದು ನಡೆದ ಬ್ಯಾಂಕಿನ 107ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಎಂ.ಸಿ.ಸಿ. ಬ್ಯಾಂಕಿನ 107ನೇ ವಾರ್ಷಿಕ ಸಾಮಾನ್ಯ ಸಭೆಯು ಸೆಪ್ಟೆಂಬರ್ […]