ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಉತ್ಸವಗಳಿಗೆ ಮಾರ್ಗಸೂಚಿ ಪ್ರಕಟ

ಮಂಗಳೂರು: ದೇಶಾದ್ಯಂತ ಸೆ. 6 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಸಂಭ್ರಮಗಳು ನಡೆಯಲಿದ್ದು, ದ.ಕ ಜಿಲ್ಲೆಯಲ್ಲಿ ಹಬ್ಬದ ಆಚರಣೆಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಆರ್ ಜೈನ್, ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಾಂಪ್ರದಾಯಿಕವಾಗಿ ಆಚರಿಸುವುದರೊಂದಿಗೆ ಮುಂಜಾಗ್ರತಾ ಕ್ರಮವಾಗಿ ಕೆಲವೊಂದು ಮಾರ್ಗಸೂಚಿ ನೀಡಲಾಗಿದ್ದು, ಸಂಘಟಕರು ಈ ಬಗ್ಗೆ ಗಮನಹರಿಸಬೇಕು. ಪೊಲೀಸ್‌ ಇಲಾಖೆಯಿಂದ ನೀಡಲಾದ ಪರವಾನಗಿಯಲ್ಲಿ ನಿಗದಿಪಡಿಸಿದ ಸಮಯದವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಡಿ.ಜೆ. ಬಳಸಲು ಅವಕಾಶವಿಲ್ಲ. ಸುರಕ್ಷತೆಗೆ ವಿಶೇಷ […]

FTII ಸೊಸೈಟಿ ಅಧ್ಯಕ್ಷರಾಗಿ ಬಹುಭಾಷಾ ನಟ ಆರ್ ಮಾಧವನ್ ನೇಮಕ

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಶುಕ್ರವಾರ ನಟ ಆರ್ ಮಾಧವನ್ ಅವರನ್ನು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII) ಸೊಸೈಟಿಯ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದೆ. ಮಾಜಿ ಅಧ್ಯಕ್ಷ ನಿರ್ದೇಶಕ ಶೇಖರ್ ಕಪೂರ್ ಅವರ ಅಧಿಕಾರಾವಧಿಯು ಈ ವರ್ಷದ ಮಾರ್ಚ್ 3 ರಂದು ಕೊನೆಗೊಂಡಿತು. ಆರ್ ಮಾಧ್ವನ್ ಅವರನ್ನು ಎಫ್‌ಟಿಐಐ ಸೊಸೈಟಿಯ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ನಿರ್ಧಾರವನ್ನು ಸಚಿವಾಲಯವು ನಮಗೆ ಔಪಚಾರಿಕವಾಗಿ ತಿಳಿಸಿದೆ ಎಂದು […]

ಹೊಸ ಸರ್ಕಾರದ ‘ಕಾರು’ ಬಾರು: 33 ಸಚಿವರಿಗೆ ಹೊಸ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಎಸ್‌ಯುವಿ ಖರೀದಿಸಲು 10 ಕೋಟಿ ಖರ್ಚು

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 33 ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಎಸ್‌ಯುವಿಗಳನ್ನು ಖರೀದಿಸಲಿದೆ ಎಂದು ವರದಿಯಾಗಿದೆ. 33 ಸಚಿವರಿಗೆ ತಲಾ ಒಂದು ಗಾಡಿಯಂತೆ 9.9 ಕೋಟಿ ರೂ ಬಜೆಟ್ ಅನ್ನು ನಿಗದಿಪಡಿಸಲಾಗಿದೆ. ಈ ನೇರ ಖರೀದಿಗೆ ಅನುಕೂಲವಾಗುವಂತೆ, ಕರ್ನಾಟಕ ಟ್ರಾನ್ಸ್ಪೆರೆನ್ಸಿ ಪಬ್ಲಿಕ್ ಪ್ರೊಕ್ಯೂರ್ ಮೆಂಟ್ (ಕೆಟಿಪಿಪಿ) ಕಾಯಿದೆಯಡಿಯಲ್ಲಿ 4(ಜಿ) ವಿನಾಯಿತಿಯನ್ನು ನೀಡಲಾಗಿದ್ದು, ಇದು ಟೆಂಡರ್‌ಗಳಿಲ್ಲದೆ ಗುತ್ತಿಗೆಗಳನ್ನು ನೀಡಲು ಸಹಾಯಮಾಡುತ್ತದೆ. ನೂತನ ಸಚಿವರಿಗಾಗಿ ಅತ್ಯಾಧುನಿಕ ಎಸ್ ಯುವಿಗಳಿಗೆ ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸಿರುವುದು ಕೆಲವೆಡೆ ಟೀಕೆಗೆ […]

ಗ್ಲೋಬಲ್ ಫೈನಾನ್ಸ್‌ನ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್‌ 2023: ಆರ್.ಬಿ.ಐ ಗವರ್ನರ್ ಶಕ್ತಿಕಾಂತ ದಾಸ್ ಗೆ A+

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಗ್ಲೋಬಲ್ ಫೈನಾನ್ಸ್‌ನ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್‌ 2023 ರಲ್ಲಿ A+ ರೇಟಿಂಗ್ ಪಡೆದಿದ್ದಾರೆ. “ಗ್ಲೋಬಲ್ ಫೈನಾನ್ಸ್ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ 2023 ರಲ್ಲಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು “A+” ಎಂದು ರೇಟ್ ಮಾಡಲಾಗಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಎ+ ರೇಟಿಂಗ್ ಪಡೆದಿರುವ ಮೂರು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಪಟ್ಟಿಯಲ್ಲಿ ದಾಸ್ ಅವರನ್ನು ಅಗ್ರಸ್ಥಾನದಲ್ಲಿ ಇರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಯುಎಸ್ […]

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ಅನುಜ್ಞಾ ಗೆ ದ್ವಿತೀಯ ಸ್ಥಾನ

ಕುಂದಾಪುರ: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಶ್ಯಾಮಿಲಿ ಪದವಿ ಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನುಜ್ಞಾ 60 ಕೆ. ಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.