ಸುಶಾಂತ್ ಕೆರಮಠ ಇವರಿಗೆ ಉಪರಾಷ್ಟ್ರಪತಿಯಿಂದ ಪ್ರಶಸ್ತಿ ಪತ್ರದ ಮಾನ್ಯತೆ

ಉಡುಪಿ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಇದರ ಕಡಿಯಾಳಿ ವಲಯದ ರೋವರ್ ಘಟಕದ ಸಕ್ರಿಯ ಸದಸ್ಯ ಸುಶಾಂತ್ ಕೆರೆಮಠ ಇವರು ಸಮುದಾಯ ಸೇವೆ, ಸ್ವಚ್ಚತೆ ಹಾಗು‌ ಪರಿಸರ ಸಂಬಂಧಿತ ಸೇವೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು,  ಉಪರಾಷ್ಟ್ರಪತಿ ಯವರಿಂದ ಪ್ರಶಸ್ತಿ ಪತ್ರದ ಮಾನ್ಯತೆ ಪಡೆದಿರುತ್ತಾರೆ. ರಾಜ್ಯ ಸಂಘಟನಾ ಸಹಾಯಕ ಕಮಿಷನರ್ ನಿತಿನ್ ಅಮೀನ್ ಗರಡಿಯಲ್ಲಿ ಪಳಗಿದ ಇವರು ಮೂಡುಬೆಟ್ಟು ಕೆರಮಠ ಸುಮನ ಹಾಗು ಶ್ರೀನಾಥ ದಂಪತಿಗಳ ಪುತ್ರ.

ಮಲ್ಪೆ: ಕರ್ತವ್ಯಕ್ಕೆ ತೆರಳಿದ್ದ ವೇಳೆ ಬೋಟ್ ನಿಂದ ಕಾಲು ಜಾರಿ ಬಿದ್ದು ಮೀನುಗಾರ ಮೃತ್ಯು

ಮಲ್ಪೆ: ಮೀನುಗಾರಿಕೆ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಬೋಟಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ. ಜಾರ್ಖಂಡ್ ಮೂಲದ ಮನೋಜ್ ಸನ್(32) ಮೃತ ಪಟ್ತ ವ್ಯಕ್ತಿ. ಆ.31 ರ ರಾತ್ರಿ ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಸುಮಾರು ಎರಡು ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸಲು ತೆರಳಿದ್ದರು. ದುರದೃಷ್ಟವಶಾತ್ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಮನೋಜ್ ಸನ್ ಅವರನ್ನು ಸಹಚರ ಕೀರ್ತನ್ ಎಂಬವರು ಮೇಲಕ್ಕೆತ್ತಿ ಉಪಚಾರ ನೀಡಿದ್ದಾರೆ. ಆದರೂ ಮನೋಜ್ ಸನ್ ಸ್ವಸ್ಥರಾಗದ್ದನ್ನು ಕಂಡು ಮಣಿಪಾಲದ […]

ಅಪಪ್ರಚಾರ ಟೀಕೆಗಳಿಂದ ಕಾರ್ಕಳಕ್ಕೆ  ಕಳಂಕ ತರುವ ಯತ್ನ: ಮಹಾವೀರ ಹೆಗ್ಡೆ

ಕಾರ್ಕಳ: ವಿಶ್ವವೇ ಕಾರ್ಕಳದ ಕಡೆ ಕಣ್ತೆರೆದು ನೋಡುವ  ರೀತಿಯಲ್ಲಿ  ಅಭಿವೃದ್ಧಿ ಹಾಗೂ ಕೀರ್ತಿ ತರುವ ಕೆಲಸಗಳು ಕಾರ್ಕಳ ಕ್ಷೇತ್ರದಲ್ಲಿ ನಡೆದಿವೆ. ಕಾರ್ಕಳದ ಅಭಿವೃದ್ಧಿ ಮತ್ತು ಕೀರ್ತಿ ಸಹಿಸದ ಕೆಲ ಸ್ಥಾಪಿತ ಹಿತಾಸಕ್ತಿಗಳು ನಿರಂತರ ದೂಷಣೆಯನ್ನೇ ನಿತ್ಯದ ಕಾಯಕವನ್ನಾಗಿಸಿಕೊಂಡು, ಸರಣಿ ಅಪಪ್ರಚಾರ, ಟೀಕೆಗಳ ಮೂಲಕ ಕಾರ್ಕಳಕ್ಕೆ ಕಳಂಕ, ಅಗೌರವ, ಅಭಿವೃದ್ಧಿಗೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ  ಹೇಳಿದ್ದಾರೆ. ಕಾರ್ಕಳದ ಬಗ್ಗೆ ಕೆಲವರು ಮಾಡುವ ಟೀಕೆ-ಟಿಪ್ಪಣಿಗಳು ದುರುದ್ದೇಶ ಪೂರ್ವಕವಾಗಿವೆ. ಅಪಪ್ರಚಾರವನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವರು […]

ಆದಿತ್ಯ ಎಲ್-1 ಮಿಷನ್‌ನ ಹಿಂದಿದ್ದಾರೆ ನಿಗರ್ ಶಾಜಿ ಎಂಬ ಮಹಿಳೆ! ಕೃಷಿಕ ಪರಿವಾರದಿಂದ ಇಸ್ರೋವರೆಗಿನ ಅಮೋಘ ಪಯಣ!!

ಚೆನ್ನೈ: ಆದಿತ್ಯ ಎಲ್-1 ಮಿಷನ್‌ನ ಯಶಸ್ವಿ ಉಡಾವಣೆ ನಂತರ, ತಮಿಳುನಾಡಿನ ದಕ್ಷಿಣ ಜಿಲ್ಲೆಯ ತೆಂಕಾಶಿಯ ಪ್ರತಿಷ್ಠಿತ ಮಹಿಳಾ ವಿಜ್ಞಾನಿ ನಿಗರ್ ಶಾಜಿ ಹೆಸರು ಮುನ್ನೆಲೆಗೆ ಬಂದಿದೆ. ಸೂರ್ಯನನ್ನು ಅಧ್ಯಯನ ಮಾಡಲು ಭಾರತವು ಪ್ರಾರಂಭಿಸಿದ ಮೊದಲ ಬಾಹ್ಯಾಕಾಶ ಆಧಾರಿತ ಯೋಜನೆಯ ನಿರ್ದೇಶಕಿಯಾಗಿದ್ದಾರೆ ನಿಗರ್ ಶಾಜಿ. ತಮಿಳುನಾಡಿನ ಗ್ರಾಮಾಂತರ ಪ್ರದೇಶವಾದ ಸೆಂಗೊಟ್ಟೈ ಮೂಲದ ನಿಗರ್ ಶಾಜಿ ಮಧುರೈ ಕಾಮರಾಜ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. 1987 ರಲ್ಲಿ ಇಸ್ರೋ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ಇವರು ಈಗ ಬೆಂಗಳೂರನ್ನು ತಮ್ಮ ಮನೆಯಾಗಿಸಿಕೊಂಡಿದ್ದಾರೆ. […]

ಕೆಎಂಸಿ ಯಲ್ಲಿ 2023-24 ರ ಮೆಡ್ ಓರಿಯಂಟ್ ಎಂಬಿಬಿಎಸ್ ಬ್ಯಾಚ್ ಉದ್ಘಾಟನೆ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ (KMC) ಮೆಡ್‌ಓರಿಯಂಟ್ (MBBS ಬ್ಯಾಚ್ 2023-24 ರ ಓರಿಯಂಟೇಶನ್ ಪ್ರೋಗ್ರಾಂ) ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಮಾತನಾಡಿ ವೈದ್ಯರು ಮತ್ತು ನಾಯಕರ ಮಹತ್ವವನ್ನು ತಿಳಿಸಿದರು. ಅವರು ವೈದ್ಯಕೀಯ ಕೌಶಲ್ಯಗಳು, ಸಮಯಪಾಲನೆ, ಬದ್ಧತೆ ಮತ್ತು ರೋಗಿಗಳ ಬಗ್ಗೆ ಸಮರ್ಪಣಾ ಭಾವ, ಅಧ್ಯಯನ ಮತ್ತು ಸಹೋದ್ಯೋಗಿಗಳಿಗೆ ಪ್ರಾಮುಖ್ಯತೆಯನ್ನು ನೀಡುವ ಬಗ್ಗೆ ಹೇಳಿದರು. ಮಾಹೆಯ ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ ಅವರು 2023-24 ನೇ ಸಾಲಿನ […]