ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ.:ವಾರ್ಷಿಕ ಮಹಾಸಭೆ

ಉಡುಪಿ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ : 29-೦8-2026 ರಂದು ಸoಘದ ಅಧ್ಯಕ್ಷರಾದ ಶ್ರೀ ಅರುಣ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಜರಗಿತು. ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ಹೆಗ್ಡೆ ಸಂಘದ ೬೮ನೇ ವರ್ಷದ ವಾರ್ಷಿಕ ವರದಿ, ವರದಿಗೆ ತಯಾರಿಸಿದ ಅನುಪಾಲನಾ ವರದಿ, ಆಯ-ವ್ಯಯ ಪಟ್ಟಿ ಹಾಗೂ 2026-27 ನೇ ಸಾಲಿನ ಯೋಜಿತಕಾರ್ಯಕ್ರಮಗಳನ್ನು ಮಂಡಿಸಿದರು. ಹಾಗೂ 2026-27 ನೇ ಸಾಲಿನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರ […]
ಸೆಪ್ಟಂಬರ್ 6 ರಂದು ಕೇರಳ ಸಮಾಜಂ (ರಿ) ವತಿಯಿಂದ ದ್ವೀತಿಯ ವರ್ಷದ ಅದ್ದೂರಿ ಓಣಂ ಸಂಭ್ರಮಾಚರಣೆ.

ಕೇರಳ ಸಮಾಜಂ ಉಡುಪಿ (ರಿ) ವತಿಯಿಂದ ದ್ವಿತೀಯ ವರ್ಷದ ಅದ್ದೂರಿ ಓಣಂ ಸಂಭ್ರಮಾಚರಣೆ ಸೆಪ್ಬಂಬರ್ 6 ಭಾನುವಾರದಂದು ಅಂಬಾಗಿಲು ಬಳಿಯ ಅಮೃತ್ ಗಾರ್ಡನ್ ಸಭಾಭವನದಲ್ಲಿ ನಡೆಯಲಿದೆ ಎಂದು ಕೇರಳ ಸಮಾಜಂ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ತಿಳಿಸಿದ್ದಾರೆ. ಕಳೆದ ಬಾರಿ ಮೊದಲ ವರ್ಷದ ಓಣಂ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಅತ್ಯದ್ಭುತ ಬೆಂಬಲ ಸಿಗುವುದರ ಮೂಲಕ ಯಶಸ್ವಿಯಾಗಿ ನೆರವೇರಿತ್ತು.ಅದೇ ಯಶಸ್ವಿನ ಮುಂದುವರೆದ ಭಾಗವಾಗಿ ಈ ಬಾರಿ ಅದ್ದೂರಿಯಾಗಿ ಓಣಂ ಸಂಭ್ರಮಾಚರಣೆಯನ್ನು ಅಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ […]
ಚಾಲಕನ ಪುತ್ರಿಗೆ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು; ಆಳ್ವಾಸ್ ಪಿಯು ಶಿಕ್ಷಣದ ದತ್ತು ಯೋಜನೆಯಿಂದ ವೈದ್ಯಕೀಯ ಕನಸು ನನಸು.

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನೂತನ ಶೈಕ್ಷಣಿಕ ಅಧ್ಯಾಯಕ್ಕೆ ಸಾಕ್ಷಿಯಾಗಿರುವ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್ನ (ಎಐಎಂಎಸ್ಆರ್ಸಿ) ಮೊದಲ ಎಂಬಿಬಿಎಸ್ ಪ್ರವೇಶದ ಹೆಗ್ಗಳಿಕೆಗೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸ್ನೇಹಾ ಪಾತ್ರರಾಗಿದ್ದಾರೆ. ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಪ್ರವೇಶ ಪಡೆದಿರುವ ಸ್ನೇಹಾ, ಸೀಮಿತ ಆರ್ಥಿಕ ಹಿನ್ನೆಲೆಯ ಕುಟುಂಬದಿಂದ ಬಂದು ಶೈಕ್ಷಣಿಕ ಪರಿಶ್ರಮ, ಅವಕಾಶ ಹಾಗೂ ಸೂಕ್ತ ಮಾರ್ಗದರ್ಶನದ ಮೂಲಕ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಿಕೊಂಡಿದ್ದಾರೆ.ಕಾರ್ಕಳದ ಕುಂಟಲ್ಪಾಡಿಯ ನಿವಾಸಿಯಾಗಿರುವ ಸ್ನೇಹಾ, ತನ್ನ ಎಸ್ಎಸ್ಎಲ್ಸಿಯನ್ನು ಜೆಸೀಸ್ […]
ಕೌಶಲ್ಯ ತರಬೇತಿಗೆ MSDCಯಲ್ಲಿದೆ ಭರ್ಜರಿ ಅವಕಾಶ; ವಿವಿಧ ಉದ್ಯೋಗಾಧಾರಿತ ಕೋರ್ಸ್ಗಳಿಗೆ ಪ್ರವೇಶ ಶುರು!

ಮಣಿಪಾಲ: ಉದ್ಯೋಗಾವಕಾಶಗಳಿಗೆ ಪೂರಕವಾದ ಕೌಶಲ್ಯಗಳನ್ನು ಕಲಿಯಲು ಬಯಸುವ ಯುವಜನರಿಗೆ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC)ನಲ್ಲಿ ವಿವಿಧ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಕಾರ್ಯಕ್ರಮಗಳಿಗೆ ಪ್ರವೇಶ ಆರಂಭವಾಗಿದೆ. MSDCಯಲ್ಲಿ 3, 6 ಮತ್ತು 12 ತಿಂಗಳ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳು ಮತ್ತು ಕೈಗಾರಿಕಾ ವಲಯದೊಂದಿಗೆ ಸಂಯೋಜಿತ ಅಪ್ರೆಂಟಿಸ್ಶಿಪ್ ಅವಕಾಶಗಳು ಲಭ್ಯವಿವೆ. ಪ್ರಾಯೋಗಿಕ ತರಬೇತಿಯೊಂದಿಗೆ ವಿದ್ಯಾರ್ಥಿಗಳನ್ನು ಉದ್ಯೋಗ ಕ್ಷೇತ್ರಕ್ಕೆ ಸಿದ್ಧಪಡಿಸುವ ಉದ್ದೇಶದಿಂದ ಕೋರ್ಸ್ಗಳನ್ನು ರೂಪಿಸಲಾಗಿದೆ. IT & AI, IoT, ರೋಬೋಟಿಕ್ಸ್, ಇಂಡಸ್ಟ್ರಿಯಲ್ ಆಟೊಮೇಷನ್, ಡ್ರೋನ್ ಟೆಕ್ನಾಲಜಿ, PCB […]
ತನಿಖೆಯಲ್ಲಿ ವೈಜ್ಞಾನಿಕ ಸಾಕ್ಷ್ಯ ಸಂಗ್ರಹ ಮುಖ್ಯ: ಚೇತನ್ ಆರ್

ಉಡುಪಿ: ಪ್ರಕರಣಗಳ ತನಿಖೆಯಲ್ಲಿ ವೈಜ್ಞಾನಿಕ ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂಗ್ರಹಿಸಿ, ಅವುಗಳನ್ನು ಪ್ರಕರಣದೊಂದಿಗೆ ಜೋಡಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದು ಅತ್ಯಂತ ಮುಖ್ಯ. ಇದರಿಂದ ಆರೋಪಿಗೆ ಶಿಕ್ಷೆ ಕೊಡಿಸುವುದರ ಜತೆಗೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಫೊರೆನ್ಸಿಕ್ ಸೈನ್ಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕ (ಡಿಐಜಿ) ಚೇತನ್ ಆರ್. ಹೇಳಿದರು. ಮಣಿಪಾಲ ಕೆಎಂಸಿಯ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆದ ಮಂಗಳೂರು ಪಶ್ಚಿಮ ವಲಯ ಮಟ್ಟದ ಎಂಟನೇ […]