ಉಡುಪಿ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ : 29-೦8-2026 ರಂದು ಸoಘದ ಅಧ್ಯಕ್ಷರಾದ ಶ್ರೀ ಅರುಣ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಜರಗಿತು. ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ಹೆಗ್ಡೆ ಸಂಘದ ೬೮ನೇ ವರ್ಷದ ವಾರ್ಷಿಕ ವರದಿ, ವರದಿಗೆ ತಯಾರಿಸಿದ ಅನುಪಾಲನಾ ವರದಿ, ಆಯ-ವ್ಯಯ ಪಟ್ಟಿ ಹಾಗೂ 2026-27 ನೇ ಸಾಲಿನ ಯೋಜಿತ
ಕಾರ್ಯಕ್ರಮಗಳನ್ನು ಮಂಡಿಸಿದರು. ಹಾಗೂ 2026-27 ನೇ ಸಾಲಿನ ಲೆಕ್ಕ ಪರಿಶೋಧನೆಗೆ ಲೆಕ್ಕ ಪರಿಶೋಧಕರ ನೇಮಕಾತಿ ಬಗ್ಗೆ ಮಹಾಸಭೆಯಲ್ಲಿ ಮಂಡನೆ ಮಾಡಿ ಅನುಮೋದಿಸಲಾಯಿತು. ಸಂಘವು ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ ಪಾಲು ಬಂಡವಾಳದ ಮೇಲೆ ಶೇಕಡಾ 15 ರಷ್ಟು ಡಿವಿಡೆಂಡ್ ಘೋಷಿಸಿರುತ್ತದೆ. 2026 ರ ಮಾರ್ಚ್ ಅಂತ್ಯಕ್ಕೆ 233 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದ್ದು ರೂ. 226 ಕೋಟಿ ಸದಸ್ಯರಿಗೆ ಸಾಲ ವಿತರಿಸಿದೆ. ವಸೂಲಾತಿಯಲ್ಲಿಯೂ ದಾಖಲೆ ಹೊಂದಿದ್ದು, 1304 ಕೋಟಿ ರೂಪಾಯಿಗೂ ಮೀರಿ ವಾರ್ಷಿಕ ವ್ಯವಹಾರ ಮಾಡಿರುತ್ತದೆ ಎಂದು ಸಭೆಗೆ ತಿಳಿಸಲಾಯಿತು. ಹೆರ್ಗದ ಪ್ರಸಿದ್ಧ ಅಜ್ಜ-ಅಜ್ಜಿ ಹೋಟೆಲ್ ನ ಸ್ಥಾಪಕರೂ, ಮಾಲೀಕರೂ ಆದ ಶ್ರೀ ಗೋಪಾಲಕೃಷ್ಣ ಪ್ರಭು ಮತ್ತು ಶ್ರೀಮತಿ ವಸಂತಿ ಪ್ರಭು ಇವರನ್ನೂ, ಕಪ್ಪೆಟ್ಟು ಅಂಬಲಪಾಡಿಯ ಜನಪ್ರಿಯ ಡೋಲು ವಾದಕ ಶ್ರೀ ರವಿಚಂದ್ರ ( ಅಂಬಲಪಾಡಿ ) ಇವರನ್ನೂ, ಉದ್ಯಾವರದ ರುಧ್ರಭೂಮಿಯ ನಿಷ್ಠಾವಂತ ಮೇಲ್ವಿಚಾರಕರಾದ ಶ್ರೀ ಜಯ ಶೇರಿಗಾರ್ ಇವರನ್ನೂ ಗೌರವಿಸಿ, ಸನ್ಮಾನಿಸಲಾಯಿತು. ಶಾಖಾ ವ್ಯಾಪ್ತಿಯಲ್ಲಿ ಬರುವ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ಸದಸ್ಯರ ೯ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರತಿಭಾ ಪುರಸ್ಕಾರ ಮಾಡಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸಂಘದ ಮುದ್ರಣ ಘಟಕ ನಿಟ್ಟೂರಿನಲ್ಲಿ ಎಲ್ಲಾ ತರಹದ
ಸಹಕಾರ ಸಂಘ, ಸೌಹಾರ್ದ ಸೊಸೈಟಿ ಹಾಗೂ ಸಹಕಾರಿ ಬ್ಯಾಂಕ್ಗಳಿಗೆ ಬೇಕಾಗುವ ಎಲ್ಲಾ ತರಹದ ಪುಸ್ತಕ, ಫಾರ್ಮುಗಳು ಇತ್ಯಾದಿ ಮುದ್ರಣ ಕೆಲಸವನ್ನು ಕ್ಲಪ್ತ ಸಮಯದಲ್ಲಿ ಹಾಗೂ ರಿಯಾಯಿತಿ ದರದಲ್ಲಿ ಮುದ್ರಿಸಿ ಕೊಡುವ ಬಗ್ಗೆ ತಿಳಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಶ್ರೀ ಎಮ್. ಗಣೇಶ್ ಕಿಣಿ, ನಿರ್ದೇಶಕರಾದ ಶ್ರೀಮತಿ ಇಂದು ರಮಾನಂದ ಭಟ್, ಶ್ರೀ
ನಾರಾಯಣ ಬಲ್ಲಾಳ್, ಶ್ರೀ ಎಲ್. ಉಮಾನಾಥ, ಶ್ರೀ ದೇವದಾಸ್ ಶೆಟ್ಟಿಗಾರ್, ಶ್ರೀ ಯಶವಂತ ನಾಯಕ್, ಶ್ರೀ ರಾಧಾಕೃಷ್ಣ ಶೆಣೈ, ಶ್ರೀಮತಿ ಮೀನಾ ಕುಮಾರಿ ಯು. , ಶ್ರೀಮತಿ ಶ್ವೇತಾ ಜೆ. ಶೆಟ್ಟಿ, ಶ್ರೀ ಅಬ್ದುಲ್ಲಾ ಎಚ್. ಸಾಹೇಬ್ , ಶ್ರೀ ಅರುಣ್ ಟಿ. ಶೆಟ್ಟಿ, ಶ್ರೀ ಸುರೇಶ್ ನಾಯ್ಕ್, ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರು ಹಾಗೂ ಸಹಕಾರ ಮಹಾ ಮಂಡಳ-ಬೆoಗಳೂರು ಇದರ ನಿರ್ದೇಶಕರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು ಉಪಸ್ಥಿತರಿದ್ದು, ಸಂಘದ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಎಮ್. ಗಣೇಶ್ ಕಿಣಿಯವರು ಧನ್ಯವಾದ ಸಮರ್ಪಣೆ ಮಾಡಿದರು.















