ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಮನೋಜ್ ಕಡಬ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ
ಉಡುಪಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ), ಕೇಂದ್ರ ಸಮಿತಿ ಹುಬ್ಬಳ್ಳಿ ಮತ್ತು ಶ್ರೀ ಜನಾರ್ದನ ಮಹಾಂಕಾಳಿ ದೇವಸ್ಥಾನ ಸಮಿತಿ, ಅಂಬಲಪಾಡಿ ಇವರ ಸಂಯುಕ್ತಾಶ್ರಯದಲ್ಲಿ ಸೆಪ್ಟಂಬರ್ 5 ಮಂಗಳವಾರದಂದು ಅಂಬಲಪಾಡಿಯಲ್ಲಿ ನಡೆಯಲಿರುವ ಶಿಕ್ಷಕ ಸಾಹಿತಿಗಳ ಆರನೇಯ ಸಮ್ಮೇಳನ ಸಂಭ್ರಮ ಕಾರ್ಯಕ್ರಮದಲ್ಲಿ ಉಡುಪಿಯ ಶೆಫಿನ್ಸ್ ಇಂಗ್ಲಿಷ್ ಅಕಾಡೆಮಿಯ ನಿರ್ದೇಶಕ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತುದಾರ ಮನೋಜ್ ಕಡಬ ಇವರು ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನವನ್ನು ಆರಂಭಿಸಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ […]
ಹದಿಹರೆಯದ ದೈಹಿಕ-ಮಾನಸಿಕ ಬದಲಾವಣೆಗಳ ಬಗ್ಗೆ ಕೀಳರಿಮೆ ಸಲ್ಲದು: ಡಾ. ಅಪೇಕ್ಷಾ ಡಿ ರಾವ್
ಉಡುಪಿ: ಹದಿಹರೆಯ ಒಬ್ಬ ವ್ಯಕ್ತಿಯ ಜೀವನದ ಸಂಕ್ರಮಣ ಕಾಲ. ಈ ಸಂದರ್ಭದಲ್ಲಿ ಜೀವಜಗತ್ತಿನ ಎಲ್ಲ ಜೀವಿಗಳಲ್ಲಿ ಆಗುವಂತೆ ಮನುಷ್ಯನಲ್ಲಿಯೂ ಕೂಡ ಪ್ರಾಕೃತಿಕ ಬದಲಾವಣೆಗಳು ಆಗುವುದು ಸಹಜ. ಈ ವಿಷಯದಲ್ಲಿ ಕೀಳರಿಮೆ, ಸಂಕೋಚ, ಮುಜುಗರಪಡುವ ಅಗತ್ಯ ಇಲ್ಲ. ಈ ಬದಲಾವಣೆಯನ್ನು ಸಹಜ ಎಂಬಂತೆ ತಿಳಿದು ದೈಹಿಕ, ಮಾನಸಿಕ ಆರೋಗ್ಯ ಮತ್ತು ಸ್ವಚ್ಛತೆಯ ಕಡೆ ಗಮನ ಹರಿಸಿದರೆ ಸಾಕು ಎಂದು ಡಾ| ಅಪೇಕ್ಷಾ ಡಿ ರಾವ್ ಅಭಿಪ್ರಾಯಪಟ್ಟರು. ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ […]
ದೊಡ್ಡಣ್ಣಗುಡ್ಡೆ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಹಮ್ಮಿಕೊಂಡ ವಿವಿಧ ಸ್ಮರ್ಧಾತ್ಮಕ ಕಾರ್ಯಕ್ರಮಗಳನ್ನು ಶಾಲಾ ಸಂಸ್ಥಾಪಕ ರಮಾನಂದ ಗುರೂಜಿಯವರು ಉದ್ಘಾಟಿಸಿದರು. ಹಲವು ಪ್ರತಿಭಾನ್ವಿತ ಶಿಕ್ಷಕರನ್ನು ಒಳಗೊಂಡ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕವಾಗಿ ಪಾಲ್ಗೊಂಡು ವಿದ್ಯಾರ್ಥಿಗಳ ಸಂಭ್ರಮಾಚರಣೆಗೆ ಕಾರಣರಾದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಭಾವನೆಗಳ ಕೊಂಡಿ ಇದ್ದಂತೆ. ಪ್ರಾಥಮಿಕ […]
ಇಂಡಿಯಾ ಬದಲಿಗೆ “ಭಾರತ” ಅಧಿಕೃತ ಹೆಸರು? ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ?
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸೆಪ್ಟೆಂಬರ್ 18-22 ರಿಂದ ನಿಗದಿಯಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಅಧಿಕೃತ ಹೆಸರನ್ನು ‘ಇಂಡಿಯಾ’ ಬದಲಿಗೆ ‘ಭಾರತ್’ ಎಂದು ಬದಲಾಯಿಸುವ ನಿರ್ಣಯವನ್ನು ತರುವ ಸಾಧ್ಯತೆಯಿದೆ ಎಂದು ಟೈಮ್ಸ್ ನೌ ಮಂಗಳವಾರ ವರದಿ ಮಾಡಿದೆ. ಭಾರತದ ರಾಷ್ಟ್ರಪತಿಗಳಿಂದ ನೀಡಲಾದ ಅಧಿಕೃತ ಜಿ 20 ಔತಣಕೂಟದ ಆಮಂತ್ರಣಗಳನ್ನು ಸಾಮಾನ್ಯವಾಗಿ ಬರೆಯುವ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಹೆಸರಿನಲ್ಲಿ ಕಳುಹಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಆದರೆ […]
ಈ ಬಾರಿಯೂ ವಿನೂತನ ವೇಷದೊಂದಿಗೆ ಜನರ ಮುಂದೆ ಬರಲಿದ್ದಾರೆ ರವಿ ಕಟಪಾಡಿ: ಎರಡು ವರ್ಷದ ಮಗುವಿನ ಚಿಕಿತ್ಸೆಗೆ ನಿಧಿ ಸಂಗ್ರಹ ಉದ್ದೇಶ
ಉಡುಪಿ: ಜಿಲ್ಲೆಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಭರದ ಸಿದ್ಧತೆ ನಡೆದಿದೆ. ಪೊಡವಿಗೊಡೆಯನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲು ಎಲ್ಲರೂ ಸಿದ್ದರಾಗುತ್ತಿದ್ದಾರೆ. ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಆಕರ್ಷಣೆ ರಂಗು ಬಿರಂಗಿ ವೇಷ ಭೂಷಣಗಳು ಮತ್ತು ಭರ್ಜರಿ ಹುಲಿ ಕುಣಿತಗಳು. ಶ್ರೀಕೃಷ್ಣ ಜನ್ಮಾಷ್ಟಮಿಯ ವೇಷ ಎಂದಾಗ ನೆನಪಾಗುವವರೆ ರವಿ ಕಟಪಾಡಿ. ಈ ಬಾರಿ ರವಿ ಯಾವ ವೇಷ ಧರಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಈ ಬಾರಿ ಸಮಾಜ ಸೇವಕ ರವಿ ಕಟಪಾಡಿ ವಿಶಿಷ್ಟ ವೇಷಭೂಷಣ ತೊಡಲಿದ್ದಾರೆ. ಇಂಗ್ಲಿಷ್ […]