ವಿದ್ಯಾರ್ಥಿಗಳಂತೆ ಶಿಕ್ಷಕರೂ ಸದಾ ಅಧ್ಯಯನಶೀಲರಾಗಿರಬೇಕು: ಪ್ರೊ.ಬಿ.ಪದ್ಮನಾಭ ಗೌಡ

ಕಾರ್ಕಳ: ಶಿಕ್ಷಣ ಮತ್ತು ಶಿಕ್ಷಕ ವೃತ್ತಿಗಳು ಅತ್ಯಂತ ಶ್ರೇಷ್ಠವಾದದ್ದು ವಿದ್ಯಾರ್ಥಿಗಳಲ್ಲಿ ಸದ್ಭಾವನೆಯನ್ನು ಬೆಳೆಸುತ್ತಾ, ಶಿಕ್ಷಕನೂ ಅಧ್ಯಯನ ಶೀಲನಾಗಬೇಕು. ನಿರಂತರವಾಗಿ ಗುರುತರವಾದ ಜವಾಬ್ದಾರಿಯಿಂದ ಬೋಧನೆ ಮಾಡುವವರಾಗಬೇಕು ಎಂದು ಪ್ರೊ.ಬಿ.ಪದ್ಮನಾಭ ಗೌಡ ಕರೆ ನೀಡಿದರು. ಅವರು ಕಾರ್ಕಳದ ಕ್ರಿಯೇಟಿವ್ ಪ. ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನದ ಪ್ರಯುಕ್ತ ಆಚರಿಸಲಾದ ‘ಗುರುದೇವೋ ಭವ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೋರ್ವ ಅತಿಥಿ ಚೇತನಾ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಶೆಟ್ಟಿ ಮಾತನಾಡಿ, ಗುರುಗಳೆಂದರೆ ಅಪಾರ ಗೌರವದಿಂದ ಕಾಣಬೇಕಾದ ವ್ಯಕ್ತಿ. […]

ಭತ್ತದ ಸಸಿಗಳ ಒಣಗುವಿಕೆ ಸಮಸ್ಯೆಗೆ ವೈಜ್ಞಾನಿಕ ಪರಿಹಾರ

ಕಾರ್ಕಳ: ತಾಲೂಕಿನ ಅಜೆಕಾರು ವ್ಯಾಪ್ತಿಯ ರೈತರಿಂದ ಭತ್ತದ ಸಸಿಗಳ ಒಣಗುವಿಕೆಯ ಕುರಿತು ಸಮಸ್ಯೆ ವರದಿಯಾದ ಹಿನ್ನೆಲೆ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಕ್ಷೇತ್ರ ಭೇಟಿಯನ್ನು ಕೈಗೊಂಡಿದ್ದು, ಈ ಸಂದರ್ಭದಲ್ಲಿ ತಡವಾಗಿ ಪ್ರಾರಂಭವಾದ ಮಳೆ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಳೆಯಾಗದೇ ಇರುವುದರಿಂದ ಪ್ರಮುಖವಾಗಿ ಭತ್ತದ ಬೆಳೆ ಸೋತು ಸೊರಗುತ್ತಿರುತ್ತದೆ. ಗದ್ದೆಗಳಲ್ಲಿ ನೀರಿಲ್ಲದ ಕಾರಣ ಕಳೆಗಳು ಹಾಗೂ ನೀರಿನ ಸಮಸ್ಯೆಯಿಂದಾಗಿ ಮೇಲು ಗೊಬ್ಬರ ಕೊಡಲು ಸಾಧ್ಯವಾಗದೇ ಇದ್ದುದರಿಂದ ಪೋಷಕಾಂಶಗಳ […]

ಮಲ್ಪೆ: ರಾಷ್ಟ್ರಮಟ್ಟದ ಬಾಕ್ಸಿಂಗ್ ಪಟು ಆತ್ಮಹತ್ಯೆಗೆ ಶರಣು

ಮಲ್ಪೆ: ರಾಷ್ಟ್ರಮಟ್ಟದ ಬಾಕ್ಸಿಂಗ್ ಪಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಶಾಂತಿನಗರದಲ್ಲಿ ನಡೆದಿದೆ. ಶಾಂತಿನಗರ ನಿವಾಸಿ 24 ವರ್ಷ ಪ್ರಾಯದ ವಿರಾಜ್ ಮೆಂಡನ್ ಆತ್ಮಹತ್ಯೆ ಮಾಡಿಕೊಂಡ ಯುವಕ. ವಿರಾಜ್ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದ. ಒಳ್ಳೆಯ ಕ್ರೀಡಾಪಟು ಎಂಬ ಹೆಸರನ್ನು ಕೂಡಾ ಪಡೆದಿದ್ದ. ಇಂದು ಶಾಂತಿನಗರದಲ್ಲಿರುವ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಮಲ್ಪೆ […]

ರೋಟರಿ ಮಣಿಪಾಲ ಹಿಲ್ಸ್ ವತಿಯಿಂದ ಮುದ್ದುಕೃಷ್ಣ ಸ್ಪರ್ಧೆ

ಮಣಿಪಾಲ: ರೋಟರಿ ಮಣಿಪಾಲ ಹಿಲ್ಸ್ ನ ಪ್ರಾಯೋಜಕತ್ವದಲ್ಲಿರುವ ರಾಜೀವನಗರ, ನೇತಾಜಿನಗರ, ಪ್ರಗತಿನಗರ, ಆದರ್ಶನಗರ, ಮಂಚಿಕೋಡಿ, ಮೂಡುಅಲೆವೂರು ರೋಟರಿ ಸಮುದಾಯ ದಳಗಳ ವ್ಯಾಪ್ತಿಯಲ್ಲಿಯ ಗ್ರಾಮೀಣ ಮಕ್ಕಳಿಗಾಗಿ ಏರ್ಪಡಿಸಲಾದ ಮುದ್ದುಕೃಷ್ಣ ಸ್ಪರ್ಧೆಯು ಸೆ.4ಸೋಮವಾರದಂದು ಮಣ್ಣಪಳ್ಳದಲ್ಲಿರುವ ರೋಟರಿ ಹಾಲಿನಲ್ಲಿ ಜರುಗಿತು. ರೋಟರಿ ಜಿಲ್ಲಾ ಉಪರಾಜ್ಯಪಾಲ ರೊ. ಡಾ ಕೆಂಪರಾಜ್ ವಿದ್ಯುಕ್ತವಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯ‌ ಸೇನಾನಿ ರೊ. ತಾರಾ ಶೆಟ್ಟಿಯವರು ಶುಭ ಹಾರೈಸಿದರು. ಮೂರು ವಯೋಮಿತಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಾರು 67 ಮಕ್ಕಳು ಭಾಗವಹಿಸಿದ್ದು, ವಿಜೇತರಿಗೆ ಬಹುಮಾನಗಳನ್ನು ವಲಯ ತರಬೇತುದಾರ […]

ಮಂಜೇಶ್ವರ: ಸ್ನೇಹಾಲಯ ರಿಹಾಬಿಲಿಟೇಶನ್ ಸೆಂಟರ್ ನಲ್ಲಿ ಸಂಭ್ರಮದ ಓಣಂ ಆಚರಣೆ

ಮಂಜೇಶ್ವರ: ಸ್ನೇಹಾಲಯ ಸೈಕೋ-ಸೋಷಿಯಲ್ ರಿಹಾಬಿಲಿಟೇಶನ್ ಸೆಂಟರ್ ಫಾರ್ ಮೆನ್ ಎಂಡ್ ವುಮೆನ್ ಇಲ್ಲಿ ದಿ ಕಲರ್ ಓಣಂ ಅನ್ನು ಉತ್ಸಾಹ ಮತ್ತು ವಿಜ್ರಂಭಣೆಯಿಂದ ಆಚರಿಸಲಾಯಿತು. ಕೇರಳದ ಸುಗ್ಗಿಯ ಹಬ್ಬವಾದ ಓಣಂ ಅನ್ನು ದಕ್ಷಿಣ ರಾಜ್ಯದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಸ್ನೇಹಾಲಯದ ನಿವಾಸಿಗಳು ಮತ್ತು ಸಿಬ್ಬಂದಿಗಳು ಒಗ್ಗೂಡಿ ಭಾಗವಹಿಸಿದ ಕಾರಣ ಎಲ್ಲರಿಗೂ ಒಂದು ಅವಿಸ್ಮರಣೀಯ ಅನುಭವವನ್ನು ನೀಡಿತು. ಪುನರ್ವಸತಿ ಕೇಂದ್ರದ ಆವರಣವನ್ನು ಸಾಂಪ್ರದಾಯಿಕ ಓಣಂ ಅಲಂಕಾರದಿಂದ ಅಲಂಕರಿಸಲಾಗಿತ್ತು, ಇದರಲ್ಲಿ ಹೂವಿನ ರಂಗೋಲಿಗಳು (ಪೂಕಳಂಗಳು) ಮತ್ತು ವರ್ಣರಂಜಿತ ಹೂವಿನ ಅಲಂಕಾರಗಳು ಸೇರಿದ್ದವು. […]