ಸೌಜನ್ಯಾ ಪ್ರಕರಣ: ಮರುತನಿಖೆ ಒತ್ತಾಯಿಸಿ ದ.ಕ. ಎಸ್‌ಪಿಗೆ ಸ್ನೇಹಮಯಿ ಕೃಷ್ಣ ದೂರು

ಮಂಗಳೂರು: ‘ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ಕೆಲ ವ್ಯಕ್ತಿಗಳ ಹೆಸರನ್ನು ಅವರು ಉಲ್ಲೇಖಿಸಿದ್ದಾರೆ. ಲೈಂಗಿಕ ದೌರ್ಜನ್ಯ ನಡೆಸಿ ಸೌಜನ್ಯಾಳನ್ನು ಕೊಲೆ ಮಾಡಿರುವ ನೈಜ ಆರೋಪಿಗೆ ಶಿಕ್ಷೆಆಗಬೇಕು. ಆ ಕಾರಣಕ್ಕಾಗಿ ದೂರಿನಲ್ಲಿ ಹೆಸರಿಸಿರುವ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ.
ಎನ್ಎಂಎಎಂಐಟಿ ಸಹಾಯಕ ಪ್ರಾಧ್ಯಾಪಕಿಗೆ ಎಕ್ಸಲೆನ್ಸ್ ಇನ್ ಎಜುಕೇಷನಲ್ ಲೀಡರ್ಶಿಪ್ ಪ್ರಶಸ್ತಿ

ಕಾರ್ಕಳ: ಹುಬ್ಬಳ್ಳಿಯ ಸಂತೋಷ್ ಫೌಂಡೇಶನ್ ಸಂಸ್ಥೆಯು 5 ಸೆಪ್ಟೆಂಬರ್ ರಂದು ಆಯೋಜಿಸಿದ್ದ ಎಜು ಇನ್ಸ್ಪೈರ್ ರಾಷ್ಟ್ರೀಯ ಪ್ರಶಸ್ತಿ 2025 ಕಾರ್ಯಕ್ರಮದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾನವಿಕ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸೌಮ್ಯಾಶ್ರೀ ಬಂಗೇರ ಅವರಿಗೆ ಎಕ್ಸಲೆನ್ಸ್ ಇನ್ ಎಜುಕೇಷನಲ್ ಲೀಡರ್ಶಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರತಿಷ್ಠಿತ ಪ್ರಶಸ್ತಿಯು ಶೈಕ್ಷಣಿಕ ನಾಯಕತ್ವಕ್ಕೆ ಶ್ರೀಮತಿ ಬಂಗೆರಾ ಅವರ ಅತ್ಯುತ್ತಮ ಕೊಡುಗೆಗಳನ್ನು ಮತ್ತು ಶೈಕ್ಷಣಿಕ ಸಮುದಾಯವನ್ನು ಬಲಪಡಿಸುವ ಅವರ ಅಚಲ ಬದ್ಧತೆಯನ್ನು ಗುರುತಿಸುತ್ತದೆ. ಈ ಕಾರ್ಯಕ್ರಮದ […]
ಮಂಗಳೂರು: ರಸ್ತೆ ಗುಂಡಿಗೆ ಬಿದ್ದ ದ್ವಿಚಕ್ರ ವಾಹನ ಸವಾರೆ ಮೇಲೆಯೇ ಹರಿದ ಲಾರಿ: ಉಡುಪಿ ಪರ್ಕಳ ಮೂಲದ ಮಹಿಳೆ ಮೃತ್ಯು.!

ಮಂಗಳೂರು: ಮಂಗಳೂರು ನಗರದ ಕೂಳೂರು ರಾಯಲ್ ಓಕ್ ಶೋರೂಂ ಮುಂಭಾಗದಲ್ಲಿ ರಸ್ತೆ ಗುಂಡಿಗೆ ಬಿದ್ದ ದ್ವಿಚಕ್ರ ವಾಹನ ಸವಾರೆ ಮೇಲೆಯೇ ಕ್ಯಾಂಟರ್ ಲಾರಿ ಹರಿದು, ಉಡುಪಿ ಪರ್ಕಳ ಮೂಲದ ಮಹಿಳೆಯೊಬ್ಬರು ಮೃತಪಟ್ಟಿರುವ ಭೀಕರ ಘಟನೆ ನಡೆದಿದೆ. ಮೃತಪಟ್ಟ ಮಹಿಳೆ ಉಡುಪಿಯ ಪರ್ಕಳ ಮೂಲದ ಮಾಧವಿ. ಮಂಗಳೂರಿನ ಎ.ಜೆ.ಆಸ್ಪತ್ರೆಯ ಸಿಬ್ಬಂದಿಯಾಗಿರುವ ಮಾಧವಿ, ಕರ್ತವ್ಯಕ್ಕೆ ಹಾಜರಾಗಲು ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಿದ್ದರು. ದ್ವಿಚಕ್ರ ವಾಹನವು ರಸ್ತೆ ಹೊಂಡಕ್ಕೆ ಬಿದ್ದ ಪರಿಣಾಮ ಮಾಧವಿ ರಸ್ತೆಗೆ ಬಿದ್ದಿದ್ದರು. ಈ ವೇಳೆ ಹಿಂದಿನಿಂದ ಬಂದ ಕ್ಯಾಂಟರ್ […]
‘ನಂಗೆ ಸ್ವಲ್ಪ ವಿಷ ಕೊಡಿ’: ಜಡ್ಜ್ ಮುಂದೆ ದರ್ಶನ್ ಮನವಿ!

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ನಟ (Darshan) ದರ್ಶನ್ ಜೈಲಿನ ನರಕಯಾತನೆ ತಾಳಲಾರದೆ ಜಡ್ಜ್ ಎದುರು ದರ್ಶನ್ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ ನನಗೆ ಮಾತ್ರ ಪಾಯಿಸನ್ ನೀಡಲಿ. ಕೋರ್ಟ್ನಿಂದಲೇ ಈ ಆದೇಶ ನೀಡಬೇಕು’ ಎಂದು ದರ್ಶನ್ ಮನವಿ ಮಾಡಿದ್ದಾರೆ. ಆಗ ಜಡ್ಜ್ ‘ಹಾಗೆಲ್ಲಾ ನೀವು ಕೇಳುವಂತಿಲ್ಲ’ ಜಡ್ಜ್ ದರ್ಶನ್ಗೆ ಕಿವಿ ಮಾತು ಹೇಳಿದ್ದಾರೆ.‘ಜೈಲು ಅಧಿಕಾರಿಗಳಿಗೆ […]
ಹುಲಿವೇಷದಲ್ಲೂ ಕಂಬಳದ ಹವಾ: ಬೆದ್ರದಲ್ಲಿ ಸದ್ದು ಮಾಡಿದ ಕೊಳಚೂರು ಕೊಂಡೆಟ್ಟು ಚೆನ್ನ!

ಕರಾವಳಿಗರ ಹೃದಯದಲ್ಲಿ ಕಂಬಳಕ್ಕೆ ಇರುವ ಪ್ರೀತಿ ಅಸಾಮಾನ್ಯ. ಸಿನಿಮಾ ನಟರಿಗಿಂತಲೂ ಹೆಚ್ಚು ತುಳುನಾಡಿನಲ್ಲಿ ಪೈಪೋಟಿ ಕೋಣಗಳಿಗೆ ಆರಾಧನೆ ಮಾಡುತ್ತಾರೆ ಎಂದರೆ ತಪ್ಪಲ್ಲ, ತನ್ನ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಂದು ಕೋಣವನ್ನೂ ದೇವರೆಂದು ಕಾಣುವುದು ತುಳುನಾಡಿನ ಸಂಸ್ಕೃತಿ. ಕಂಬಳದ ಗದ್ದೆಗಳಲ್ಲಿ ಕೋಣ ಓಡುವ ಶಬ್ದವೇ ಇಲ್ಲಿನ ಜನರ ಹೃದಯದ ಧ್ವನಿ.ಹುಲಿ ಬಣ್ಣ ತೊಟ್ಟು ಕುಣಿಯುವ ಪಿಲಿನಲಿಕೆ, ಗಣೇಶೋತ್ಸವದ ಸಂಭ್ರಮದಲ್ಲಿ ಮಕ್ಕಳಿಂದ ಹಿಡಿದು ಯುವಕರವರೆಗೂ ಎಲ್ಲರ ಉಲ್ಲಾಸದಿಂದ ಕಾತರಿಸುತ್ತಾರೆ. ಈ ಪಿಲಿನಲಿಕೆಯಲ್ಲಿ ಕಾಣುವ ಪ್ರತಿಯೊಂದು ಬಣ್ಣವೂ ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. . […]