ಜಿಎಸ್‌ಟಿ ಪರಿಷ್ಕರಣೆ: ಐಸಿಇ ವಾಹನಗಳ ಬೆಲೆ ಕಡಿಮೆಯಾಗುವ ಸಾಧ್ಯತೆ; ಟಿವಿಎಸ್‌ ಸಿಇಒ ಕೆ.ಎನ್.ರಾಧಾಕೃಷ್ಣನ್

ಕೇಂದ್ರ ಸರ್ಕಾರದ ಜಿಎಸ್​ಟಿ ಪರಿಷ್ಕರಣೆ ಹಿನ್ನೆಲೆ ಐಸಿಇ (ಆಂತರಿಕ ದಹನಕಾರಿ ಇಂಜಿನ್​) ವಾಹನಗಳ ಬೆಲೆಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಟಿವಿಎಸ್ ಮೋಟಾರ್ ಕಂಪನಿ ಸಿಇಓ ಕೆ.ಎನ್​.ರಾಧಕೃಷ್ಣನ್ ಸೋಮವಾರ(ಸೆ. 08) ಹೇಳಿದ್ದಾರೆ ಎಂದು ವರದಿಯಾಗಿದೆ.ಜಿಎಸ್‌ಟಿ ಕೌನ್ಸಿಲ್ ಐಸಿಇ ವಾಹನಗಳ ಮೇಲಿನ ಜಿಎಸ್‌ಟಿ ದರವನ್ನು ಶೇ.28 ರಿಂದ ಶೇ.18 ಕ್ಕೆ ಇಳಿಕೆ ಹಿನ್ನೆಲೆ ಮಾತನಾಡಿರುವ ಅವರು, ಜಿಎಸ್‌ಟಿ ದರ ತರ್ಕಬದ್ಧಗೊಳಿಸುವಿಕೆಯು ಒಂದು ದಿಟ್ಟ ಮತ್ತು ಪರಿವರ್ತನಾತ್ಮಕ ಕ್ರಮವಾಗಿದ್ದು ಅದು ಸಮಾಜದಾದ್ಯಂತ ಬಳಕೆಯನ್ನು ವೇಗಗೊಳಿಸುತ್ತದೆ. ಜಿಎಸ್‌ಟಿ ದರ ಕಡಿತದ ಸಂಪೂರ್ಣ […]

ಭದ್ರಾವತಿ: ಈದ್‌ ಮಿಲಾದ್ ಮೆರವಣಿಗೆಯಲ್ಲಿ ಪಾಕ್‌ ಪರ ಘೋಷಣೆ; ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇವೆ – ಶಿವಮೊಗ್ಗ ಎಸ್‌ಪಿ

ಶಿವಮೊಗ್ಗ: ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ರಾತ್ರಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೆಲ ಯುವಕರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಈ ಸಂಬಂಧ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋ ಸತ್ಯಾಸತ್ಯತೆ ಜೊತೆಗೆ ಘೋಷಣೆ ಕೂಗಿದವರ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಿವಮೊಗ್ಗ […]

‘ಸ್ವದೇಶಿ ಮೇಳ’ವನ್ನು ಆಯೋಜಿಸುವಂತೆ ಸಂಸದರಿಗೆ ಪ್ರಧಾನಿ ಮೋದಿ ಸೂಚನೆ

ನವದೆಹಲಿ: ದೇಶೀಯ ಉತ್ಪನ್ನಗಳನ್ನು ಉತ್ತೇಜಿಸುವುದು ಮತ್ತು ಅದನ್ನು ಚಳವಳಿಯನ್ನಾಗಿ ಮಾಡಲು ‘ಸ್ವದೇಶಿ ಮೇಳ’ವನ್ನು ಆಯೋಜಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಸಂಸದರಿಗೆ ಸೋಮವಾರ ಸಲಹೆ ನೀಡಿದರು. ಸಂಸದರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನವರಾತ್ರಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಂಸದರು ತಮ್ಮ ಕ್ಷೇತ್ರಗಳಲ್ಲಿನ ಜನರು ಮತ್ತು ವ್ಯಾಪಾರಿಗಳೊಂದಿಗೆ ಸಭೆಗಳನ್ನು ನಡೆಸಿ, ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಉತ್ತೇಜಿಸುವ ಕೆಲಸ ಮಾಡಬೇಕು. ಜಿಎಸ್‌ಟಿ ಸುಧಾರಣೆಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು. ಸ್ವಾವಲಂಬನೆಯು ಭಾರತದ ಅಭಿವೃದ್ಧಿಗೆ ಶಕ್ತಿಯ ಮಾರ್ಗವಾಗಿದೆ’ ಎಂದು […]

ಮಾಂಟೆಸ್ಸರಿ/ ನರ್ಸರಿ ಟೀಚರ್ಸ್ ಟ್ರೈನಿಂಗ್ ಕೋರ್ಸ್’ಗೆ ಸೇರಲು ಸೆ.30 ಕೊನೆಯ ದಿನ.

ಮಣಿಪಾಲ: ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲದಲ್ಲಿ ಮಹಿಳೆಯರಿಗೆ ಮಾಂಟೆಸ್ಸರಿ/ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸಿಗೆ ಪ್ರವೇಶಾತಿ (2025-26) ಪ್ರಕ್ರಿಯೆ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಅಭ್ಯರ್ಥಿಗಳು ಈ ತರಬೇತಿಗೆ ಪ್ರವೇಶ ಪಡೆದುಕೊಳ್ಳಬಹುದು. ಕೆಲವೇ ಸೀಟುಗಳು ಲಭ್ಯವಿದ್ದು, ಸೆ.30 ಕೊನೆಯ ದಿನವಾಗಿದೆ. ಆಸಕ್ತಿಯಿರುವವರು, ಹೆಚ್ಚಿನ ಮಾಹಿತಿಗಾಗಿ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಡಿ.ಸಿ ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್ ಕಾಂಪ್ಲೆಕ್ಸ್, 1ನೇ ಮಹಡಿಯಲ್ಲಿರುವಸಂಸ್ಥೆಯನ್ನು ಸಂಪರ್ಕಿಸುವಂತೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿರುತ್ತದೆ. M:9901722527

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಕಾಜಲ್ ಅಗರ್ವಾಲ್ ನಿಧನ ಸುಳ್ಳು ಸುದ್ದಿ: ನಟಿ ಸ್ಪಷ್ಟನೆ!

ಚೆನ್ನೈ: ನಟಿ ಕಾಜಲ್‌ ಅಗರವಾಲ್‌ ಅವರು ಭೀಕರ ಅಪಘಾತಕ್ಕೆ ಒಳಗಾಗಿದ್ದಾರೆ, ಗಂಭೀರ ಗಾಯಗಳಿಂದ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲ ಹರಿದಾಡುತ್ತಿದೆ.ಇದಕ್ಕೆ ಪ್ರತಿಕ್ರಿಯಿಸಿರುವ ನಟಿ, ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ನಾನು ಅಪಘಾತಕ್ಕೀಡಾಗಿದ್ದೇನೆ ಎನ್ನುವ ಕೆಲವು ಆಧಾರರಹಿತ ಸುದ್ದಿಗಳು ನನಗೆ ಬಂದಿವೆ (ಮೃತಪಟ್ಟಿದ್ದಾರೆ ಎಂದೂ ಹೇಳಲಾಗಿದೆ!). ನಿಜ ಹೇಳಬೇಕೆಂದರೆ, ಇದು ತುಂಬಾ ತಮಾಷೆಯಾಗಿರುವ ಸುದ್ದಿಯಾಗಿದೆ, ಏಕೆಂದರೆ ಅದು ಸುಳ್ಳು. ದೇವರ ದಯೆಯಿಂದ, ನಾನು ಕ್ಷೇಮವಾಗಿದ್ದೇನೆ. ಅಂತಹ […]