ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮೇಘನಾ ವಿಜಯ್ ಪ್ರಬಂಧ ಮಂಡನೆ

ಕುಂದಾಪುರ: ಎಂಐಟಿ ಕುಂದಾಪುರದ ಅಂತಿಮ ವರ್ಷದ ಎಐಅಂಡ್ ಎಂಎಲ್ ವಿದ್ಯಾರ್ಥಿನಿ ಮೇಘನಾ ವಿಜಯ್ ಕುಮಾರ್, ಕಾನ್ಫರೆನ್ಸ್ ಸಂಯೋಜಕಿ ಜೀನ್ ಆಶ್ಲೇ ಅವರ ಅಧಿಕೃತ ಆಹ್ವಾನದ ಮೇರೆಗೆ, ಎಸಿಎಸ್ ಟಿಎಂ ಇಂಟೆರ್ ರ್ನ್ಯಾಷನಲ್ ಕಾನ್ಫರೆನ್ಸ್ ದುಭಾಯ್ ನಲ್ಲಿ ವರ್ಚುವಲ್ ಆಗಿ ಪ್ರಬಂಧ ಮಂಡಿಸಿದ್ಧಾರೆ. ವಿಭಾಗ ಮುಖ್ಯಸ್ಥರಾದ ಡಾ. ಇಂದ್ರ ವಿಜಯ್ ಸಿಂಗ್ ಮತ್ತು ಟಿ. ದಿಲೀಪ್ ಅವರು ಸಹ-ಲೇಖಕರಾಗಿ ಬರೆದ ‘ಸೆಲ್ ಫೋನ್ ಮತ್ತು ಸೆಲ್ ಟವರ್ ವಿಕಿರಣಕ್ಕೆ ಒಡ್ಡಿಕೊಂಡ ಮಕ್ಕಳಲ್ಲಿ ಆಕ್ಸಿಡೇಟಿವ್ ಒತ್ತಡದ ಸೂಚಕಗಳ ಅಧ್ಯಯನ’ ಎಂಬ […]
ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಅಪರಂಜಿ 2.0 ಚಿಣ್ಣರ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ

ಕಿರಿಮಂಜೇಶ್ವರ: ಎಪ್ರಿಲ್ 15 ರಂದು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಚಿಣ್ಣರ ಬೇಸಿಗೆ ಶಿಬಿರ ಅಪರಂಜಿ 2.0 ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ನೆರವೇರಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಕರಾವಳಿ ಭಾಗದಲ್ಲಿ ಮರೀಚಿಕೆಯಾಗಿ ರುವ ಆಂಗ್ಲ ಭಾಷಾ ಸಂವಹನ ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು ನಮ್ಮ ಶಿಕ್ಷಣ ಸಂಸ್ಥೆಯ ಗುರಿಯಾಗಿದೆ. ಪ್ರತಿಯೊರ್ವ ಶಿಬಿರಾರ್ಥಿಯು ಇದರ […]
ಮಲ್ಪೆ:ಮಲ್ಪೆ ಬೀಚ್ ಬಳಿ ಹೋಟೆಲ್ ನಲ್ಲಿ ಅಗ್ನಿ ಅವಘಡ- ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಮಲ್ಪೆ: ಮಲ್ಪೆ ಬೀಚ್ ಬಳಿಯ ಹೋಟೆಲೊಂದರಲ್ಲಿ ರಾತ್ರಿ ವೇಳೆ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.ಸಚಿನ್ ಎಂಬವರಿಗೆ ಸೇರಿದ ಅಮ್ಮ ಹೋಟೆಲ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ರಾತ್ರಿ ಎಂದುನಂತೆ ಸಿಬ್ಬಂದಿ ಹೋಟೆಲ್ ಬಂದ್ ಮಾಡಿ ಹೋದ ನಂತರ ಫ್ರಿಜ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎನ್ನಲಾಗಿದೆ.ತಕ್ಷಣ ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಲಾಯಿತಾದರೂ ಈ ವೇಳೆಗಾಗಲೇ ಹೊಟೇಲಿನ ಒಳಗಿದ್ದಐದಾರು ಫ್ರಿಡ್ಜ್, ಗ್ರೈಂಡರ್, ಪಾತ್ರೆ, ದಿನಸಿ ವಸ್ತುಗಳು ಬೆಂಕಿಗಾಹುತಿಯಾಗಿತ್ತು.ಅಗ್ನಿ ಅವಘಡದಲ್ಲಿ ಸುಮಾರು 15 ಲಕ್ಷ ರೂಪಾಯಿ […]
ಮಣಿಪಾಲದಲ್ಲಿ 150 ಅಡಿ ವಿಸ್ತೀರ್ಣದಲ್ಲಿ ರಚಿಸಲ್ಪಟ್ಟ ಮೊನಾಲಿಸಾ ರಂಗೋಲಿ

ಉಡುಪಿ: ವಿಶ್ವ ಕಲಾ ದಿನಾಚರಣೆಯ ಪ್ರಯುಕ್ತ ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಮತ್ತು ಗ್ಯಾಲರಿ ಯಲ್ಲಿ 150 ಅಡಿ ವಿಸ್ತೀರ್ಣದಲ್ಲಿ ರಚಿಸಲ್ಪಟ್ಟ “ಮೊನಾಲಿಸಾ” ರಂಗೋಲಿ ಕಲಾರಸಿಕರ ಕಣ್ಮನ ಸೆಳೆಯಿತು. ಕಲಾ ಕೇಂದ್ರದ ಮಾರ್ಗದರ್ಶಕ, ಕಲಾವಿದ ಹರೀಶ್ ಸಾಗಾ ನಿರ್ದೇಶನದಲ್ಲಿ ಕಲಾ ವಿದ್ಯಾರ್ಥಿಯರಾದ ಉಜ್ವಲ್ ನಿಟ್ಟೆ, ಅನೂಷ ಆಚಾರ್ಯ, ಅಶ್ವಿನಿ ಶೆಟ್ಟಿ, ಮೀತಾ ಪೈ ಅವರು ರಚಿಸಿದ ಈ ಆಕರ್ಷಕ ರಂಗೋಲಿ ಕಲಾವಿದರ ಮನಸೂರೆಗೊಳಿಸಿತು.
ಹಂಗಾರಕಟ್ಟೆ ಬಂದರಿನಿಂದ ಹೊರಟ ಬೃಹತ್ ಗಾತ್ರದ ಹಡಗು

ಉಡುಪಿ: ಉಡುಪಿ ಜಿಲ್ಲೆಯ ಅತ್ಯಂತ ಪುರಾತನ ನೈಸರ್ಗಿಕ ಬಂದರು ಹಂಗಾರಕಟ್ಟೆಯಲ್ಲಿ ವೈಶಿಷ್ಟ್ಯವೊಂದು ನಡೆದಿದೆ. ಬಿಳಿ ಬಣ್ಣದ ಅಪಾರ್ಟ್ಮೆಂಟ್ ನಂತೆ ಕಾಣುವ ಬೃಹತ್ ಗಾತ್ರದ ಹಡಗು ಒಂದು ನೀರಿಗೆ ಇಳಿಸುವ ದೃಶ್ಯ ಗಮನ ಸೆಳೆದಿದೆ. ಕ್ಯಾಸಿಯೋ ಆಟಕ್ಕಾಗಿ ಈ ಹಡಗು ಸಿದ್ಧ ಗೊಳಿಸಲಾಗಿದೆ ಎನ್ನಲಾಗಿದ್ದು, ಹಲವಾರು ತಿಂಗಳುಗಳ ಕಾಲದ ಶ್ರಮದ ಬಳಿಕ ನಿರ್ಮಾಣಗೊಳಿಸಲಾಗಿತ್ತು. ಸದ್ಯ ಹಡಗು ಹಂಗಾರಕಟ್ಟೆ ಬಂದರಿಂದ ಹೊರಟಿದ್ದು, ಗೋವಾ ತಲುಪಲಿದೆ.