ಉಡುಪಿ:ಥಾಮಸ್‌ ಕುಕ್ ನಲ್ಲಿ ಬ್ರಾಂಚ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ

ಉಡುಪಿ:ಥಾಮಸ್‌ ಕುಕ್ ನಲ್ಲಿ ಬ್ರಾಂಚ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ನಡೆಯಲಿದೆ. Role: Sales & Operationsಪ್ರಯಾಣ ಉದ್ಯಮದಲ್ಲಿ ಕನಿಷ್ಠ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಇಮೇಲ್ ಐಡಿ: [email protected]ಮೊಬೈಲ್ ಸಂಖ್ಯೆ – 9880032035

ಉಡುಪಿ:ವಿದ್ಯಾಲಕ್ಷ್ಮಿ ವಿದ್ಯಾಸಂಸ್ಥೆ ವತಿಯಿಂದ ಕ್ರಿಟ್ ಟೆಕ್ 4.0 ಯಶಸ್ವಿ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮಿ ವಿದ್ಯಾಸಂಸ್ಥೆಯ ಬಿ.ಎಸ್ಸಿ. ಫುಡ್ ಟೆಕ್ನಾಲಜಿ ವಿಭಾಗವು ತಮ್ಮ ವಾರ್ಷಿಕ ಉತ್ಸವ ಕ್ರಿಟ್ ಟೆಕ್ 4.0 ಅನ್ನು ಯಶಸ್ವಿಯಾಗಿ ಆಯೋಜಿಸಿತು. ಈ ವಾರದ ಉದ್ದಕ್ಕೂ ಹಲವಾರು ರೋಮಾಂಚಕ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸೆಪ್ಟೆಂಬರ್ 10 ರಂದು ಅಡುಗೆ ಇಲ್ಲದೆ ಆಹಾರ ತಯಾರಿಸುವ ಸ್ಪರ್ಧೆಯೊಂದಿಗೆ ಪ್ರಾರಂಭವಾದ ಈ ಉತ್ಸವದಲ್ಲಿ, ಸೆಪ್ಟೆಂಬರ್ 11 ರಂದು ಒಳಾಂಗಣ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಸೆಪ್ಟೆಂಬರ್ 12 ರಂದು, ವಿದ್ಯಾರ್ಥಿಗಳು ಕೊಲಾಜ್ ಮೇಕಿಂಗ್, ಜಂಬಲ್ಡ್ ವರ್ಡ್ಸ್ ಮತ್ತು ವಿಡಿಯೋ ಎಡಿಟಿಂಗ್ ಸ್ಪರ್ಧೆಗಳಲ್ಲಿ […]

ತೆಕ್ಕಟ್ಟೆಯಲ್ಲಿ ಸ್ತ್ರೀ ಗೃಹಂ ರಕ್ಷತಿ ಏಕ ವ್ಯಕ್ತಿ ರಂಗ ಪ್ರಯೋಗ

ಉಡುಪಿ : ಪ್ರತಿಯೊಬ್ಬನ ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸಿದ್ದರೆ ಅದಕ್ಕಿಂತ ದೊಡ್ಡ ಸಂಪತ್ತಿಲ್ಲ. ಮನೆ ನೆಮ್ಮದಿಯಾಗಿ ಇರಬೇಕಾದರೆ ಮನೆಯ ಯಜಮಾನಿ ಸಂತೋಷದಿಂದ ಇರುವುದು ಅತೀ ಮುಖ್ಯ. ಇದನ್ನು ಅರಿತು ಬಾಳಿದವನ ಬದುಕು ಹಸನಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಶನಿವಾರ ತೆಕ್ಕಟ್ಟೆಯ ಶ್ರೀ ಹಯಗ್ರೀವ ಸಭಾಂಗಣದಲ್ಲಿ ಭಾವಭೂಮಿ ಕುಂದಾಪುರ, ಧಮನಿ ತೆಕ್ಕಟ್ಟೆ, ಯಶಸ್ವಿ ಕಲಾವೃಂದ ತೆಕ್ಕಟ್ಟೆ ಇವರ ಸಹಯೋಗದಲ್ಲಿ ದಿವ್ಯಾ ಶ್ರೀಧರ ರಾವ್ ರಚಿಸಿ, ನಾಗೇಶ್ ಕೆದೂರು ಅವರ […]

ಬೈಂದೂರು: ಕೇರಳದ ವ್ಯಕ್ತಿಯ ಕೊಲೆ ಪ್ರಕರಣ; ಆರೋಪಿಯ ಬಂಧನ

ಬೈಂದೂರು: ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆ ಎಂಬಲ್ಲಿ ಕೂಲಿ ಹಣದ ವಿಚಾರವಾಗಿ ವ್ಯಕ್ತಿಯೊಬ್ಬನನ್ನು ಕತ್ತಿ ಯಿಂದ ಕಡಿದು ಕೊಲೆ ಮಾಡಿರುವ ಘಟನೆ ಸೆ.14ರಂದು ನಡೆದಿದೆ. ಕೊಲೆಗೀಡಾದ ವ್ಯಕ್ತಿಯನ್ನು ಕೇರಳದ ಕೋಟಿಯನ್ ಜಿಲ್ಲೆಯ ಕಾನೇರಪಳ್ಳಿ ನಿವಾಸಿ ಬಿನೋ ಪಿಲಿಪ್(45) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಕೇರಳದ ಕೊಲಂ ಜಿಲ್ಲೆಯ ಕೊಟ್ಟರಯೇಕರ್‌ನ ಉದಯ ಕುಮಾರ್‌(42) ಎಂಬಾತನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತೂದಳ್ಳಿ ದೇವರಗದ್ದೆಯ ಥೋಮಸ್ ಎಂಬವರ ರಬ್ಬರ್ ತೋಟದಲ್ಲಿ ಬಿನೋ ಪಿಲಿಪ್ ಹಾಗೂ ಉದಯ ಕುಮಾರ್ ಕಳೆದ […]

ಕಮಲಶಿಲೆ: ರಸ್ತೆಗೆ ಅಡ್ಡ ಬಂದ ಕಡವೆಗೆ ಬೈಕ್ ಡಿಕ್ಕಿ; ಸವಾರ ಮೃತ್ಯು, ಸಹಸವಾರ ಗಂಭೀರ

ಉಡುಪಿ: ಚಲಿಸುತ್ತಿದ್ದ ಬೈಕ್ ವೊಂದು ದಿಢೀರ್ ಆಗಿ ರಸ್ತೆಗೆ ಅಡ್ಡ ಬಂದ ಕಡವೆಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಕಮಲಶಿಲೆ ಸಮೀಪ ತಾರೆಕುಡ್ಲುನಲ್ಲಿ ಸಂಭವಿಸಿದೆ.ಮೃತಪಟ್ಟ ಬೈಕ್‌ ಸವಾರ ನೆಲ್ಲಿಕಟ್ಟೆಯ ಶ್ರೇಯಸ್‌ ಮೊಗವೀರ (23) ಎಂದು ಗುರುತಿಸಲಾಗಿದೆ.ಗಂಭೀರ ಗಾಯಗೊಂಡ ಸಹಸವಾರ ವಿಶ್ಲೇಶ್ ಎಂದು ತಿಳಿದು ಬಂದಿದೆ. ಇವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇಬ್ಬರು ಸ್ನೇಹಿತರು ಮಧ್ಯಾಹ್ನ ಕಮಲಶಿಲೆ ದೇವಸ್ಥಾನಕ್ಕೆ ಹೋಗಿದ್ದು ಅಲ್ಲಿಂದ ವಾಪಸು ನೆಲ್ಲಿಕಟ್ಟೆಗೆ ಬರುತ್ತಿದ್ದ ಸಂದರ್ಭ […]