ಉಡುಪಿ:ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ

ಉಡುಪಿ: ದೊಡ್ಡಣಗುಡ್ಡೆೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಗಣೇಶ ಸರಳಾಯ, ವಿ ವಿಖ್ಯಾತ್ ಭಟ್ ಅವರ ಪೌರೋಹಿತ್ಯದಲ್ಲಿ ನವರಾತ್ರಿಿಯ ಪ್ರಥಮ ದಿನ ಸೋಮವಾರ ಕದಿರು ಕಟ್ಟುವಿಕೆಯಿಂದ ನವರಾತ್ರಿಿ ಮಹೋತ್ಸವಕ್ಕೆೆ ಚಾಲನೆ ನೀಡಲಾಯಿತು. ಪ್ರಾತಃಕಾಲ ಮಂಗಳವಾದ್ಯ ಸಹಿತ ಕದಿರನ್ನು ಬರಮಾಡಿಕೊಳ್ಳಲಾಯಿತು. ಪೂಜೆ ನೆರವೇರಿಸಿ ಸಾನ್ನಿಧ್ಯಕ್ಕೆೆ ಕದಿರು ಕಟ್ಟಲಾಯಿತು. ಅನಂತರ ಕ್ಷೇತ್ರದ ವತಿಯಿಂದ ಬಂದ ಭಕ್ತರಿಗೆ ಕದಿರನ್ನು ವಿತರಿಸಲಾಯಿತು. ಧಾರ್ಮಿಕ ಕಾರ್ಯಕ್ರಮವಾಗಿ ಆದ್ಯ ಗಣಪತಿಯಾಗ, ನವಕ ಕಲಶ ಪ್ರಧಾನ […]
ಠಾಣೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ದೂರು ಸ್ವೀಕರಿಸದೇ ಇರಲು ಸಾಧ್ಯವಿಲ್ಲ: ಹೈ ಕೋರ್ಟ್

ಬೆಂಗಳೂರು: ‘ನಾಪತ್ತೆ ಪ್ರಕರಣಗಳಲ್ಲಿ ನಾಪತ್ತೆಯಾದವರ ಬಗ್ಗೆ ದೂರು ಸ್ವೀಕರಿಸುವಾಗ ಪೊಲೀಸರು; ‘ಸಂಬಂಧಿಸಿದ ಪ್ರದೇಶ ನಮ್ಮ ಠಾಣೆ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ನಿರಾಕರಣೆ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ‘ನನ್ನ ಪುತ್ರಿ 2023ರಲ್ಲಿ ನಾಪತ್ತೆಯಾಗಿದ್ದಾಳೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿ ಹುಬ್ಬಳಿಯ ರಾಮಕೃಷ್ಣ ಭಟ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ (ಧಾರವಾಡ), ಇಂತಹ ದೂರುಗಳು ಬಂದಾಗ ಪೊಲೀಸರು ಯಾವ ಕ್ರಮ ಅನುಸರಿಸಬೇಕು ಎಂಬ ಬಗ್ಗೆ ಮಾರ್ಗಸೂಚಿ […]
ನವರಾತ್ರಿಯ ಪ್ರಯುಕ್ತ ಸೆ.22 ರಿಂದ ಜ.15 ರವರೆಗೆ “ಉಡುಪಿ ಬಲ್ಲಾಳ್ ಮೊಬೈಲ್ಸ್” ನಲ್ಲಿ ‘ದಿ ಗ್ರೇಟ್ ಫೆಸ್ಟಿವಲ್ ಸೇಲ್’

ಉಡುಪಿ: ನಗರದ ಪ್ರಸಿದ್ಧ ಬಳ್ಳಾಲ್ ಮೊಬೈಲ್ಸ್‌ನಲ್ಲಿ ಈ ನವರಾತ್ರಿಗೆ ಗ್ರಾಹಕರಿಗೆ ವಿಶೇಷ ಕೊಡುಗೆ ” ದಿ ಗ್ರೇಟ್ ಫೆಸ್ಟಿವಲ್ ಸೇಲ್” ನಡೆಯುತ್ತಿದೆ.ಈ ವಿಶೇಷ ಕೊಡುಗೆಯು ಸೆ.22 ರಿಂದ ಜ.17 ರ ವರೆಗೆ ಇರಲಿದ್ದು, ಈ ಕೊಡುಗೆಯಲ್ಲಿ ಮೊಬೈಲ್ ಖರೀದಿಯ ಮೇಲೆ ಬಂಪರ್ ಪ್ರೈಸ್‌ನಲ್ಲಿ ಹೀರೋ ಬೈಕ್ ಪಡೆಯುವ ಸುವರ್ಣಾವಕಾಶವನ್ನು ಗ್ರಾಹಕರು ಪಡೆಯಬಹುದಾಗಿದೆ. ಇದರೊಂದಿಗೆ ಸ್ಕ್ರ್ಯಾಚ್ ಆಂಡ್ ವಿನ್ ಆಫರ್‌ನಲ್ಲಿ ಪ್ರಥಮ ಬಹುಮಾನವಾಗಿ ಪ್ರಿಡ್ಜ್, ದ್ವಿತೀಯ ಬಹುಮಾನವಾಗಿ ವಾಶಿಂಗ್ ಮೆಶಿನ್, ತೃತೀಯ ಬಹುಮಾನ ಲ್ಯಾಪ್‌ಟಾಪ್, 4ನೇ ಬಹುಮಾನ ಸ್ಮಾರ್ಟ್ […]
ಉಡುಪಿ: ರಾಷ್ಟ್ರೀಯ ಲಾಂಛನ ಸ್ತಂಭ ನಿರ್ಮಿಸಲು ಆಗ್ರಹ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ, ಇಂದ್ರಾಳಿಯ ಹಳೆ ಮೇಲ್ಸೇತುವೆಯ ಅಶೋಕ ಸ್ತಂಭಗಳು ಧರೆಗುರುಳಿ ಹಲವು ವರ್ಷಗಳು ಕಳೆದಿವೆ. ಹಳೆ ಸೇತುವೆ ನಿರ್ಮಾಣದ ಸಮಯದಲ್ಲಿಯೇ ನಿರ್ಮಿಸಲ್ಪಟ್ಟ ಸ್ತಂಭಗಳು ಇವಾಗಿವೆ. ಶಿಥಿಲಗೊಂಡ ರಾಷ್ಟ್ರಲಾಂಛನದ ಅವಶೇಷಗಳು ಹೆದ್ದಾರಿಯ ಸನಿಹದ ಪೊದೆಗಳಲ್ಲಿ ಎಸೆದಿರುವುದು ಕಂಡುಬಂದಿದೆ. ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಕ್ಷಣವಾಗಿ ಸೇತುವೆಗೆ ಅಶೋಕ ಸ್ತಂಭಗಳನ್ನು ಹೊಸದಾಗಿ ನಿರ್ಮಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.ಭಾರತ ಸರಕಾರವು 1950 ರಲ್ಲಿ ಅಧಿಕೃತವಾಗಿ ಸಾರಾನಾಥದ ಅಶೋಕ […]
ಉಡುಪಿ: ಬಡಕುಟುಂಬಕ್ಕೆ ಆಸರೆಯಾದ ಸುಷ್ಮಾ ಬಂಟ್ವಾಳ; ವೇಷಧರಿಸಿ ಸಂಗ್ರಹಿಸಿದ 2,50,764 ಮೊತ್ತ ಹಸ್ತಾಂತರ..!!

ಉಡುಪಿ: ಕಿನ್ನಿಮುಲ್ಕಿಯ ಅಶಕ್ತ ಕುಟುಂಬದ ವೈದ್ಯಕೀಯ ನೆರವಿಗಾಗಿ ಶ್ರೀ ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಸುಷ್ಮಾ ಬಂಟ್ವಾಳ ಅವರು ವಿಭಿನ್ನವೇಶವನ್ನು ಧರಿಸಿ ಸಂಗ್ರಹವಾದ 2,50,764 ಮೊತ್ತದ ಚೆಕ್ ಅನ್ನು ಕಿನ್ನಿಮುಲ್ಕಿಯ ನಿವಾಸದಲ್ಲಿ ವಿಜಯಲಕ್ಷ್ಮಿ ಸಿ ಬಂಗೇರ ಅವರ ಕುಟುಂಬಕ್ಕೆ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶಾಂತರಾಮ್ ಶೆಟ್ಟಿ, ಉಡುಪಿ ಟೌನ್ ಸ್ಟೇಷನ್ ನ ಪಿಎಸ್ಐ ಭರಥೇಶ್, ಸಮಾಜ ಸೇವಕ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.