ಕ್ರೈಸ್ಟ್ ಕಿಂಗ್: ಪ್ರಥಮ ವಾಣಿಜ್ಯ ವಿಭಾಗದ ವರುಣ ಶೆಟ್ಟಿ ವಾಲಿಬಾಲ್ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ.

ಕಾರ್ಕಳ: ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ನವರು ಬೆಂಗಳೂರಿನಲ್ಲಿ ನಡೆಸಿದ ಆಯ್ಕೆ ಶಿಬಿರದಲ್ಲಿ ಭಾರತದ 49ನೇ ಜೂನಿಯರ್ ಬಾಲಕಿಯರ ರಾಷ್ಟ್ರೀಯ ವಾಲಿಬಾಲ್ ಛಾಂಪಿಯನ್ಶಿಪ್ ಪಂದ್ಯಾಟದ ಕರ್ನಾಟಕ ವಾಲಿಬಾಲ್ ತಂಡಕ್ಕೆ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿಪೂರ್ವಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವರುಣ ಶೆಟ್ಟಿ ಆಯ್ಕೆಯಾಗಿದ್ದಾಳೆ. ರಾಷ್ಟ್ರಮಟ್ಟದ ಪಂದ್ಯಾಟವು ಇದೇ ಡಿಸೆಂಬರ್ ತಿಂಗಳ 16 ರಿಂದ 21 ರವರೆಗೆ ರಾಜಸ್ಥಾನದ ಜುಂಜುನು ಜಿಲ್ಲೆಯ ಪಿಲಾನಿಯಲ್ಲಿ ನಡೆಯಲಿದ್ದು ಇಲ್ಲಿ ವರುಣ ಶೆಟ್ಟಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾಳೆ. ಈಕೆ ಜೋಡುರಸ್ತೆಯ ಕೊರಚೊಟ್ಟುವಿನ ಪ್ರಭಾಕರ […]
ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ: ತಂದೆ ತಾಯಿಯ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನವಿರಲಿ – ಡಾ.ಸುಧಾಕರ ಶೆಟ್ಟಿ.

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಡಿ.09 ರಂದು ನಡೆಯಿತು. ಅಜೆಕಾರ್ ಪದ್ಮ ಗೋಪಾಲ್ ಎಜುಕೇಶನಲ್ ಟ್ರಸ್ಟ್ ಹಾಗೂ ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಅತಿಥಿಯಾಗಿ ಭಾಗವಹಿಸಿ ವಿಶೇಷವಾದ ಶಿಕ್ಷಣದ ಕಾಲಘಟ್ಟದಲ್ಲಿ ವಿದ್ಯಾರ್ಜನೆಗೈಯುತ್ತಿರುವ ವಿದ್ಯಾರ್ಥಿಗಳು ವಯೋಸಹಜ ವಾದ ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿ ತಂದೆ ತಾಯಿಯ ಶ್ರಮ ವನ್ನು ನೆನಪಿಸಿಕೊಂಡು ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ವಿರಲಿ ಎಂದರು. ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ದೇವ್ ಎಜುಕೇಶನಲ್ & ಕಲ್ಬರಲ್ ಟ್ರಸ್ಟ್ ನ ಅಧ್ಯಕ್ಷ […]
ಪ್ರೋತ್ಸಾಹಧನ – ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ

ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಐ.ಐ.ಟಿ, ಐ.ಐ.ಐ.ಟಿ, ಎನ್.ಐ.ಟಿ, ಐ.ಐ.ಎಮ್, ಐ.ಐ.ಎಸ್.ಇ.ಆರ್, ಎ.ಐ.ಐ.ಎಂ.ಎಸ್, ಎನ್.ಎಲ್.ಯು, ಐ.ಎನ್.ಐ ಮತ್ತು ಐ.ಯು.ಎಸ್.ಎಲ್.ಎ ಇತ್ಯಾದಿ ಸರ್ಕಾರದಿಂದ ಶಾಸನಬದ್ಧ ಅನುಮತಿ ಪಡೆದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ರಾಜ್ಯದ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಹಾಗೂ ಸಿಖ್ ಸಮುದಾಯದ ವಿದ್ಯಾರ್ಥಿಗಳಿಂದ ಪ್ರೋತ್ಸಾಹಧನ ಸೌಲಭ್ಯ ಪಡೆಯಲು ವೆಬ್ಸೈಟ್ https://sevasindhu.karnataka.gov.in/sevasindhu/DepartmentService ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು 2026 ರ ಜನವರಿ 31 ರ ವರೆಗೆ ವಿಸ್ತರಿಸಲಾಗಿದೆ. […]
ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ಲೋಕ ಪಠಿಸಿ ಗಮನ ಸೆಳೆದ ನಟ-ನಿರೂಪಕ ಮಾಸ್ಟರ್ ಆನಂದ್

ಉಡುಪಿ: ಉಡುಪಿಯ ಶ್ರೀಕೃಷ್ಣಮಠದಲ್ಲಿ ಸಂಜೆ ನಡೆಯುವ ಅಷ್ಟಾವಧಾನ ಸೇವೆ ಅತ್ಯಂತ ಅಪೂರ್ವವಾಗಿದೆ . ಈ ಸೇವೆಯ ವೇಳೆಯಲ್ಲಿ ವಿವಿಧ ರೀತಿಯ ಧಾರ್ಮಿಕ ಪಠಣಗಳು ನಡೆಯುತ್ತದೆ. ಅಷ್ಟಾವಧಾನ ಕಾರ್ಯಕ್ರಮದ ವೇಳೆ ಸ್ವಾಮೀಜಿಗಳ ಸಮ್ಮುಖದಲ್ಲಿ, ನಟ ನಿರೂಪಕ ಮಾಸ್ಟರ್ ಆನಂದ್ ಯಜುರ್ವೇದ ಪಠಣದ ಮೂಲಕ ಗಮನ ಸೆಳೆದಿದ್ದಾರೆ. ಕೃಷ್ಣ ಮಠದ ಚಂದ್ರ ಶಾಲೆಯಲ್ಲಿ ನಡೆದ ಈ ಅಪೂರ್ವ ಕಾರ್ಯಕ್ರಮದ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಬಹಳ ಸ್ಪಷ್ಟವಾಗಿ ಮತ್ತು ಕ್ರಮಬದ್ಧವಾಗಿ ಆನಂದ್ ಶ್ಲೋಕಗಳನ್ನು ಪಠಿಸುತ್ತಿರುವುದು ಗಮನ ಸೆಳೆದಿದೆ.
ಮದುವೆ ಮಾತುಕತೆಗೆ ಮನೆಗೆ ಕರೆದು ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಹುಡುಗನ ಕೊಲೆ!

ಅಮರಾವತಿ: ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಪ್ರೇಮಿಗಳಿಬ್ಬರ ನಡುವಿನ ಪ್ರೀತಿ ಹುಡುಗನ ಸಾವಿಗೆ ಕಾರಣವಾಗಿದೆ. ಹುಡುಗ ಮತ್ತು ಹುಡುಗಿ ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ಅರಿತ ಹುಡುಗಿಯ ಪೋಷಕರು ಮದುವೆಯ ಕುರಿತು ಮಾತನಾಡಲು ಮನೆಗೆ ಕರೆದು ಹುಡುಗನಿಗೆ ಬ್ಯಾಟ್ನಿಂದ ಹೊಡೆದು ಕೊಂದಿರುವುದಾಗಿ ವರದಿಯಾಗಿದೆ. ಇವರಿಬ್ಬರ ನಡುವಿನ ಪ್ರೀತಿಗೆ ಹುಡುಗಿಯರ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಹಿಂದೆ ಈತನಿಗೆ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಇದರ ಹೊರತಾಗಿಯೂ, ಈ ಇಬ್ಬರು ಪ್ರೀತಿಸುತ್ತಿದ್ದರು. ಈ ಹಿನ್ನೆಲೆ ಕೊಲೆಗೈದಿದ್ದಾರೆ ಎನ್ನುವ ಆರೋಪಗಳು ಕೇಳಿ […]