ಅಮರಾವತಿ: ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಪ್ರೇಮಿಗಳಿಬ್ಬರ ನಡುವಿನ ಪ್ರೀತಿ ಹುಡುಗನ ಸಾವಿಗೆ ಕಾರಣವಾಗಿದೆ. ಹುಡುಗ ಮತ್ತು ಹುಡುಗಿ ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ಅರಿತ ಹುಡುಗಿಯ ಪೋಷಕರು ಮದುವೆಯ ಕುರಿತು ಮಾತನಾಡಲು ಮನೆಗೆ ಕರೆದು ಹುಡುಗನಿಗೆ ಬ್ಯಾಟ್ನಿಂದ ಹೊಡೆದು ಕೊಂದಿರುವುದಾಗಿ ವರದಿಯಾಗಿದೆ. ಇವರಿಬ್ಬರ ನಡುವಿನ ಪ್ರೀತಿಗೆ ಹುಡುಗಿಯರ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಹಿಂದೆ ಈತನಿಗೆ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಇದರ ಹೊರತಾಗಿಯೂ, ಈ ಇಬ್ಬರು ಪ್ರೀತಿಸುತ್ತಿದ್ದರು. ಈ ಹಿನ್ನೆಲೆ ಕೊಲೆಗೈದಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಮೃತ ಹುಡಗನನ್ನು ದ್ವಿತೀಯ ವರ್ಷದ ಬಿ ಟೆಕ್ ಇಂಜಿನಿಯರಿಂಗ್ ವಿದ್ಯಾರ್ಥಿ ಜ್ಯೋತಿ ಶ್ರವಣ್ ಸಾಯಿ ಎಂದು ಗುರಿತಸಲಾಗಿದೆ.
ಶ್ರವಣ್ ಕುತುಬುಲ್ಲಾಪುರದ ಬಾಡಿಗೆ ರೂಮ್ವೊಂದರಲ್ಲಿ ವಾಸವಾಗಿದ್. ಇನ್ನು ಈ ಬಗ್ಗೆ ಅಮೀನ್ಪುರದ ಸರ್ಕಲ್ ಇನ್ಸ್ಪೆಕ್ಟರ್ ನರೇಶ್ ಮಾಹಿತಿ ಹಂಚಿಕೊಂಡಿದ್ದು, “ಶ್ರವಣ್ ಬೀರಮ್ಗುಡದ ಇಸುಕಬಾವಿ ನಿವಾಸಿಯಾಗಿದ್ದು, 19 ವರ್ಷದ ಶ್ರೀಜಾ ಜೊತೆ ಸಂಬಂಧ ಹೊಂದಿದ್ದ. ಈ ವಿಷಯ ಹುಡುಗಿಯ ಕುಟುಂಬದ ಗಮನಕ್ಕೆ ಬಂದಿದ್ದು, ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಘಟನೆ ನಡೆದ ದಿನ ಶ್ರೀಜಾಳ ಪೋಷಕರು ಈ ಇಬ್ಬರ ನಡುವಿನ ಮದುವೆ ಮಾತುಕತೆಗೆಂದು ಶ್ರವಣ್ನನ್ನು ಮನೆಗೆ ಕರೆಸಿಕೊಂಡಿದ್ದರು. ಆತ ಮನೆಗೆ ಬರುತ್ತಿದ್ದಂತೆ ಶ್ರೀಜಾಳ ತಾಯಿ ಸೇರಿದಂತೆ ಆತನ ಮೇಲೆ ಕ್ರಿಕೆಟ್ ಬ್ಯಾಟ್ನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಆತನ ತಲೆಗೆ ಬಲವಾಗಿ ಏಟು ಬಿದ್ದಿದ್ದು, ಕಾಲು ಮತ್ತು ಪಕ್ಕೆಲುಬುಗಳು ಮುರಿದಿವೆ” ಎಂದು ಹೇಳಿದ್ದಾರೆ.

















