ಉಡುಪಿಯ ಬಲ್ಲಾಳ್ ಮೊಬೈಲ್ಸ್ ನಲ್ಲಿ ಕ್ರಿಸ್ ಮಸ್ ಹಬ್ಬವನ್ನು ಬಿಂದಾಸ್ ಆಗಿ ಆಚರಿಸಿರಿ: ಇಲ್ಲಿ ನಿಮಗಾಗಿ ಕಾದಿವೆ ಉಡುಗೊರೆಗಳ ಮಹಾಪೂರ! ಕ್ರಿಸ್ ಮಸ್ ಮತ್ತು ನ್ಯೂ ಇಯರ್ ಧಮಾಕಾ!

ಉಡುಪಿ: ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿರುವ ಹೆಸರಾಂತ “ಬಲ್ಲಾಳ್ ಮೊಬೈಲ್ಸ್” ಶೋರೂಮ್‌ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಭರ್ಜರಿ ಆಫರ್‌ಗಳನ್ನು ಲಾಂಚ್ ಮಾಡಲಾಗಿದೆ. ಇಲ್ಲಿಗೆ ಭೇಟಿ ನೀಡುವ ಮೂಲಕ ನಿಮ್ಮ ಹಬ್ಬವನ್ನು ಮತ್ತಷ್ಟು ಸಂತೋಷವಾಗಿ ಆಚರಿಸಕೊಳ್ಳಬಹುದು. ಎಕ್ಸ್ಚೇಂಜ್ ಆಫರ್: ತಮ್ಮ ಹಳೆಯ ಸ್ಮಾರ್ಟ್‌ಫೋನ್‌ನ್ನು ಉತ್ತಮ ಮಾದರಿಯ ಹೊಸ ಫೋನ್‌ಗೆ ಅಪ್ಗ್ರೇಡ್ ಮಾಡಲು ಬಲ್ಲಾಳ್ ಮೊಬೈಲ್ಸ್ ವಿಶೇಷ ಎಕ್ಸ್ಚೇಂಜ್ ಆಫರ್ ನೀಡುತ್ತಿದೆ. ನಿಮಗೆ ಇಷ್ಟವಾದ ಬ್ರ್ಯಾಂಡ್‌ಗಳ ಹೊಸ ಫೋನ್‌ಗಳನ್ನು ಆಕರ್ಷಕ ದರದಲ್ಲಿ ಪಡೆಯಬಹುದು. “ದಿ ಗ್ರೇಟ್ ಫೆಸ್ಟಿವಲ್ […]

ಉಡುಪಿ: ಹಿರಿಯ ರಂಗಕರ್ಮಿ ಪ್ರೊ.ರಾಮದಾಸ್ ನಿಧನ

ಉಡುಪಿ: ಶ್ರೇಷ್ಠ ನಾಟಕಕಾರ ಕವಿ ಸಾಹಿತಿ ರಂಗನಟ ನಿರ್ದೇಶಕರಾದ ಉಡುಪಿಯ ಪ್ರೊ. ರಾಮದಾಸ್ (86) ಇಂದು ಮುಂಜಾನೆ ನಿಧನರಾದರು. ರಂಗಭೂಮಿ ಉಡುಪಿಯ ರಂಗನಟರಾಗಿ, ನಿರ್ದೇಶಕರಾಗಿ ಇವರ ಕೊಡುಗೆ ಅಪಾರವಾದುದು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಇವರು ಕಾಲೇಜಿನ ಹಾಗೂ ಉಡುಪಿಯ ಸಾಂಸ್ಕೃತಿಕ, ಸಾಹಿತ್ಯ ರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದರು. ರಂಗಭೂಮಿ (ರಿ.) ‌ ಉಡುಪಿಯ ಓರ್ವ ಮುಖ್ಯ ಕಲಾವಿದರಾಗಿ ವೀರ ಪುರೂರವ, ಧರ್ಮಚಕ್ರ, ಸಂಕ್ರಾಂತಿ, ನಾಯೀಕತೆ, ಹರಕೆಯ ಕುರಿ , ಓಡಿಸ್ಸಿ, ಸಾಕ್ಷಾತ್ಕಾರ, ಸೂರ್ಯ ಶಿಕಾರಿ .. […]

ಚಂಡೀಗಢದ ಮುಖ್ಯ ಕಾರ್ಯದರ್ಶಿ ಎಚ್.ರಾಜೇಶ್ ಪ್ರಸಾದ್ ಐಪಿಎಸ್ ಅವರಿಗೆ ಹುಟ್ಟೂರ ನಾಗರಿಕ ಸನ್ಮಾನ.

ಹಿರಿಯಡಕ: ಭಾರತ ಮಾನವ ಸಂಪನ್ಮೂಲಭರಿತ ರಾಷ್ಟ್ರವಾಗಿದ್ದು ಅಪಾರ ಯುವ ಸಂಪತ್ತು ನಮ್ಮಲ್ಲಿದೆ. ಯುವಕರಿಗೆ ಅವಕಾಶ ಕೊಡುವ ಮೂಲಕ ಅವರನ್ನು ಬೆಳೆಸೋಣ ಎಂದು ಜ.ಪಿ.ವಿಶ್ವನಾಥ್ ಶೆಟ್ಟಿ ಹೇಳಿದರು. ಹಿರಿಯಡಕದ ಶ್ರೀವೀರಭದ್ರಸ್ವಾಮಿ ದೇವಸ್ಥಾನದ ವಠಾರದಲ್ಲಿ ರವಿವಾರ ಚಂಡೀಗಢ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯಡಕ ರಾಜೇಶ್ ಪ್ರಸಾದ್ ಐಎಎಸ್ ಅವರಿಗೆ ಹುಟ್ಟೂರ ನಾಗರಿಕ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ಬೆಳವಣಿಗೆಗೆ ಸಮಾಜದ ಕೊಡುಗೆ ಮತ್ತು ಪರಿಸರದ ಕೊಡುಗೆ ಅಪಾರವಾಗಿದೆ. ಸಮಾಜದ ಕೊಡುಗೆಯಿಂದ ಬೆಳೆದ ನಾವು ಸಮಾಜಕ್ಕೆ […]

ಉಡುಪಿ: ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ 35 ನೇ ಮದ್ಯವ್ಯಸನ ವಿಮುಕ್ತಿ ಶಿಬಿರ – 2026 ಜನವರಿ 1 – 10 ತನಕ ಶಿಬಿರ ಆಯೋಜನೆ

ಉಡುಪಿ: ದೊಡ್ಡಣಗುಡ್ಡೆ ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ‌ ಅವರ ನೇತೃತ್ವದಲ್ಲಿ 2026 ಜನವರಿ 1ರಿಂದ 10ರ ವರೆಗೆ 35ನೇ ಮದ್ಯವ್ಯಸನ ವಿಮುಕ್ತಿ ಶಿಬಿರ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜ.1ರಂದು ಬೆಳಿಗ್ಗೆ 10.30ಕ್ಕೆ ಶಿಬಿರವನ್ನು ಸಮಾಜಸೇವಕ ವಿಶು ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಜ.10ರಂದು ಬೆಳಿಗ್ಗೆ 10.30 ಕ್ಕೆ ಶಿಬಿರದ ಸಮಾರೋಪ ಸಮಾರಂಭದ ನಡೆಯಲಿದೆ ಎಂದರು. ಶಿಬಿರಕ್ಕೆ […]

ಉಡುಪಿ: ಜಿಲ್ಲೆಯಲ್ಲಿ 28 ನಕ್ಸಲ್ ಪ್ರಕರಣಗಳು ವಿಲೇವಾರಿ.

ಉಡುಪಿ: ಜಿಲ್ಲೆಯಲ್ಲಿ 68 ನಕ್ಸಲ್‌ ಪ್ರಕರಣಗಳಲ್ಲಿ 39 ಪ್ರಕರಣಗಳು ಕೋರ್ಟ್ ವಿಚಾರಣೆಯಲ್ಲಿದ್ದು, 28 ಪ್ರಕರಣಗಳು ವಿಲೇವಾರಿ ಆಗಿವೆ. 1 ಪ್ರಕರಣದಲ್ಲಿ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲು ಬಾಕಿ ಇದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ತಿಳಿಸಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಹೆಚ್ಚುವರಿ ದಾಖಲಾತಿ ಸಲ್ಲಿಸಲು ಬಾಕಿ ಇದೆ. ಒಂದು ಪ್ರಕರಣ ಸಿಐಡಿ ತನಿಖೆಯಲ್ಲಿದೆ. ಕಳೆದ 6 ತಿಂಗಳಲ್ಲಿ 39 ಪ್ರಕರಣ ಗಳಲ್ಲಿ 11 ಜನ ನಕ್ಸಲ್‌ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. […]