ಮಲ್ಪೆ: ಮೀನುಗಾರಿಕೆ ಸಚಿವ ಸಚಿವ ಕೆ.ಎಸ್ ಬಸವಂತಪ್ಪ ಮಲ್ಪೆ ಬಂದರಿಗೆ ಭೇಟಿ- ಮೀನುಗಾರರ ಜೊತೆ ಸಮಾಲೋಚನೆ

ಉಡುಪಿ: ರಾಜ್ಯದ ನೂತನ ಮೀನುಗಾರಿಕೆ ಹಾಗೂ ಬಂದರು ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕರಾವಳಿ ಭಾಗಕ್ಕೆ ಭೇಟಿ ನೀಡಿದ ಇಲಾಖಾ ಸಚಿವ ಕೆ.ಎಸ್ ಬಸವಂತಪ್ಪ ಇಂದು ಮಲ್ಪೆ ಬಂದರಿಗೆ ಭೇಟಿ ನೀಡಿ ವಿವಿಧ ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಆಳಸಮುದ್ರದಲ್ಲಿ ಹಿಡಿದು ಬೋಟಿನಲ್ಲಿ ತಂದು ಬಂದರಿನ ಧಕ್ಕೆಯಲ್ಲಿ ಇರಿಸಿದ್ದ ವೈವಿಧ್ಯಮಯ ಮೀನುಗಳನ್ನು ನೋಡಿ ಖುಷಿ ಪಟ್ಟ ಸಚಿವರು, ಅವುಗಳನ್ನು ಕೈಯಲ್ಲಿ ಹಿಡಿದು, ಮುಟ್ಟಿ ನೋಡಿದರು. ಕಾಂಗ್ರೆಸ್ ನಾಯಕರಿಂದ ಕರಾವಳಿಯ ಮೀನುಗಾರಿಕೆ ಕುರಿತಂತೆ ಮಾಹಿತಿಗಳನ್ನು ಪಡೆದರು. […]

ಮಣಿಪಾಲ: ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ- ಪೋಷಕರ ಖಾಸಗಿ ದೂರಿನ ಬಳಿಕ ಯುವಕನ ಬಂಧನ

ಉಡುಪಿ: 10 ತಿಂಗಳ ಹಿಂದೆ ನಡೆದ ಮಣಿಪಾಲದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಿರುಕುಳ ನೀಡಿದ ಆರೋಪದಡಿ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ದೀಯು ದಮನ್ ಕೇಂದ್ರಾಡಳಿತ ಪ್ರದೇಶದ ಸಾಯಿ ಸಂಜಯ್ ಬಿಂಗಾರೆ (21) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಮಣಿಪಾಲದ ಹೊಟೇಲ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಸ್ಸಾಂ ರಾಜ್ಯದ ಲೆಸ್ಲಿ ಜೋಸೆಫ್ ಮ್ಯಾಥ್ಯೂ ಎಂಬವರ ಮಗಳು ಪೌಲಾ ಲೆಸ್ಲಿ ವಾಜ್ರಿರ್ ಎಂಬಾಕೆ 2025ರ ನ.7ರಂದು ರಾತ್ರಿ ಮಣಿಪಾಲದ ಕಾಯಿನ್ ಸರ್ಕಲ್ […]

ಉಡುಪಿ: ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಟೆಕ್ನಿಷಿಯನ್ ಹಾಗೂ DG ಆಪರೇಟರ್ ಹುದ್ದೆಗಳಿಗೆ ನೇಮಕಾತಿ; ಅರ್ಜಿ ಸಲ್ಲಿಸಿ

ಉಡುಪಿ: ಉಡುಪಿ ಜಿಲ್ಲೆಯ ರಿಫೈನರಿ ಮತ್ತು ಶಿಪ್‌ಬಿಲ್ಡಿಂಗ್ ಘಟಕಗಳಲ್ಲಿ ಕೆಲಸ ಮಾಡಲು ಎಲೆಕ್ಟ್ರಿಕಲ್ ಟೆಕ್ನಿಷಿಯನ್, ಮೆಕ್ಯಾನಿಕಲ್ ಟೆಕ್ನಿಷಿಯನ್ ಹಾಗೂ DG ಆಪರೇಟರ್ ಹುದ್ದೆಗಳಿಗೆ ತಕ್ಷಣದ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ವಿಭಾಗದಲ್ಲಿ ITI ಅಥವಾ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಹಾಗೂ ಕಾರ್ಯಾಚರಣೆ ಅಥವಾ ನಿರ್ವಹಣೆ (Operation/Maintenance) ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಅನುಭವಕ್ಕೆ ಅನುಗುಣವಾಗಿ ಆಕರ್ಷಕ ವೇತನದೊಂದಿಗೆ PF, ESI ಹಾಗೂ ಓವರ್‌ಟೈಮ್ (OT) […]

ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿ. ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಾದ ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆ, ಜೀಜಾವು ಜಲಭಾಗ್ಯ ಯೋಜನೆ, ಹೊಸದು ಹಾಗೂ ನವೀಕರಣ ಅರಿವು – ಶೈಕ್ಷಣಿಕ ನೇರ ಸಾಲ ಯೋಜನೆ, ಮರಾಠ ಮಿಲ್ಟ್ರಿ ಹೋಟೆಲ್, ಸ್ವಾವಲಂಬಿ ಸಾರಥಿ ಯೋಜನೆ, ರಾಜಶ್ರೀ ಶಾಹುಮಹಾರಾಜ ವಿದೇಶಿ ಸಾಲ ಯೋಜನೆ ಹಾಗೂ ಹೊಲಿಗೆ ಯಂತ್ರ ವಿತರಣಾ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಬೆಂಗಳೂರು ಒನ್, ಕರ್ನಾಟಕ ಒನ್, ಅಟಲ್ ಜಿ ಜನಸ್ನೇಹಿ ಕೇಂದ್ರ ಮತ್ತು […]

ಸರ್ವಋತು ಮಲ್ಪೆ ಬಂದರಿನ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು: ಸಚಿವ ಕೆ.ಎಸ್ ಬಸವಂತಪ್ಪ

ಉಡುಪಿ: ಸರ್ವಋತು ಮಲ್ಪೆ ಬಂದರಿನ ಸರ್ವಾಂಗೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದರೊಂದಿಗೆ ಮೀನುಗಾರರ ಮೀನುಗಾರಿಕಾ ಚಟುವಟಿಕೆಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಕೆ.ಎಸ್ ಬಸವಂತಪ್ಪ ಹೇಳಿದರು. ಅವರು ಇಂದು ಮಲ್ಪೆಯ ಮೀನುಗಾರರ ಸಂಘದಲ್ಲಿ ಸಂಘದ ಪಧಾಧಿಕಾರಿಗಳನ್ನು ಭೇಟಿ ಮಾಡಿ, ಮೀನುಗಾರರ ಕುಂದು ಕೊರತೆಗಳನ್ನು ವಿಚಾರಿಸಿ ಮಾತನಾಡುತ್ತಿದ್ದರು. ಮಲ್ಪೆ ಮೀನುಗಾರಿಕಾ ಬಂದರು ಏಷ್ಯಾದಲ್ಲಿಯೇ ಎರಡನೇ ಮೀನುಗಾರಿಕಾ ಚಟುವಟಿಕೆಯ ಬಂದರು ಎಂಬ ಹೆಸರು ಪಡೆದಿದೆ. ಇದರ ಆಧುನೀಕರಣಕ್ಕೆ ಮೊದಲ ಆದ್ಯತೆ […]