ಕಾಪು: ಫೆ. 22ರಂದು ಗ್ರಾನೈಟ್ ಎಂಪೋರಿಯಂನ ಅದ್ಧೂರಿ ಉದ್ಘಾಟನೆ

ಉಡುಪಿ: ಕಾಪು ಸಮೀಪದ ಬಂಟಕಲ್ ಎಂಜಿನಿಯರಿಂಗ್ ಕಾಲೇಜ್ ಹತ್ತಿರ ಹೊಸದಾಗಿ ಕಾರ್ಯನಿರ್ವಹಿಸಲು ಸಿದ್ಧಗೊಂಡ “ಗ್ರಾನೈಟ್ ಎಂಪೋರಿಯಂ” ಘಟಕದ ಉದ್ಘಾಟನಾ ಸಮಾರಂಭವು ಫೆ. 22 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಈ ಘಟಕವು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪೂರೈಸುವ ಪ್ರೀಮಿಯಂ ಮಾರ್ಬಲ್ ಮತ್ತು ಗ್ರಾನೈಟ್ ಪ್ರೊಸೆಸಿಂಗ್ ಯುನಿಟ್ ಆಗಿದೆ. ಸಮಾರಂಭದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಆರ್ಜಿ ಗ್ರೂಪ್ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಘಟಕವನ್ನು […]
ಉಡುಪಿ: ಬಾವಿಗೆ ಹಾರಿ ಆತ್ಮಹತ್ಯೆ ಮಾಡುವ ವೇಳೆ ದೇಹದಿಂದ ಬೇರ್ಪಟ್ಟ ರುಂಡ; ಅಂಬಾಗಿಲು ಸಮೀಪದ ಕಕ್ಕುಂಜೆಯಲ್ಲಿ ಹೃದಯ ವಿದ್ರಾವಕ ಘಟನೆ.!

ಉಡುಪಿ: ಆತ್ಮಹತ್ಯೆ ವೇಳೆ ದೇಹದಿಂದ ರುಂಡ ಬೇರ್ಪಟ್ಟ ಹೃದಯ ವಿದ್ರಾವಕ ಘಟನೆ ಅಂಬಾಗಿಲು ಸಮೀಪದ ಕಕ್ಕುಂಜೆ ಎಂಬಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.ಕಕ್ಕುಂಜೆ ನಿವಾಸಿ ಪುರುಷೋತ್ತಮ ನಾಯಕ್ (52) ದುರಂತ ರೀತಿಯಲ್ಲಿ ಆತ್ಮಹತ್ಯೆ ಶರಣಾದ ವ್ಯಕ್ತಿ. ಇವರು ನಿನ್ನೆ ತಡರಾತ್ರಿ ಮನೆಯ ಬಾವಿಯ ನೈಲಾನ್ ಹಗ್ಗ ಬಿಗಿದುಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ದೇಹದಿಂದ ರುಂಡ ಬೇರ್ಪಟ್ಟಿದೆ.ಇವರು ಅರ್ಚಕ ವಾಸುದೇವ ನಾಯಕ್ ಅವರ ದ್ವಿತೀಯ ಪುತ್ರ. ಮಣಿಪಾಲದ ವ್ಯಾಲಿವ್ಯೂ ಹೋಟೆಲಿನಲ್ಲಿ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ಅಕ್ಕ […]
ಮಣಿಪಾಲ: ಸರಳೆಬೆಟ್ಟು ನಗರಸಭಾ ಸದಸ್ಯೆಯ ಸಹೋದರ ಆತ್ಮಹತ್ಯೆ

ಉಡುಪಿ: ವೈಯಕ್ತಿಕ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸರಳೇಬೆಟ್ಟು ಎಂಬಲ್ಲಿ ನಡೆದಿದೆ.ಮೃತರನ್ನು ಸರಳಬೆಟ್ಟು ನಗರಸಭಾ ಬಿಜೆಪಿ ಸದಸ್ಯೆ ವಿಜಯಲಕ್ಷ್ಮೀ ಅವರ ಸಹೋದರ ಮಂಜುನಾಥ್ ಕಾಮತ್(51) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಅವಿವಾಹಿತರಾಗಿದ್ದು, ಮಣಿಪಾಲ ಸುತ್ತಮುತ್ತ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೆಬ್ರಿ ಬಲ್ಲೆ ಕಾಡ್ಯನಾಗ ದೇವರ ಪುನರ್ ಪ್ರತಿಷ್ಠೆ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ

ಹೆಬ್ರಿ : ಪುರಾತನ ಹಿನ್ನೆಲೆ ಇರುವ ಹೆಬ್ರಿ ಬಲ್ಲೆ ಶ್ರೀ ಕಾಡ್ಯನಾಗ ದೇವರ ಸನ್ನಿಧಿ ಜೀರ್ಣೋದ್ಧಾರಗೊಂಡು ಇದೀಗ ಗುಡಿಯಲ್ಲಿ ಕಾಡ್ಯನಾಗದೇವರ ಪುನರ್ ಪ್ರತಿಷ್ಠಾಪನೆ ಫೆ. 8 ಮತ್ತು 9ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಫೆ. 9ರಂದು ಬೆಳಿಗ್ಗೆ ಪ್ರಧಾನ ಹೋಮ, ಪಂಚವಂಶತಿ ಕಲರಾಧನೆ, ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಲಿದ್ದು ಬಳಿಕ ಹೆಬ್ರಿ ತಾಣದಿಂದ ಚಂಡೆ ವಾದ್ಯ ಘೋಷದೊಂದಿಗೆ ಕಾಡ್ಯನಾಗ ದೇವರ ಸಾನಿಧ್ಯಕ್ಕೆ ವೈಭವದ ಕಳಶಗಳ ಆಗಮನ, ಕಾಡ್ಯನಾಗ ದೇವರ ಸನ್ನಿಧಿಯಲ್ಲಿ ಸಂದರ್ಶನ ಪ್ರಸಾದ ವಿತರಣೆ, ಮಧ್ಯಾಹ್ನ […]
ಉಡುಪಿ:ಒಳ ಚರಂಡಿ ಕಾಮಗಾರಿ : ಬದಲಿ ವ್ಯವಸ್ಥೆ

ಉಡುಪಿ:ಉಡುಪಿ ನಗರಸಭಾ ವ್ಯಾಪ್ತಿಯ ಬೈಲೂರು ವಾರ್ಡಿನ ಶಾರದಾ ದೇವಸ್ಥಾನ ಮುಂಭಾಗದಿಂದ ಪಿ.ಪಿ.ಸಿ ಲೇನ್ ವರೆಗೆ ಒಳ ಚರಂಡಿ ಕಾಮಗಾರಿಯನ್ನು ಪ್ರಾರಂಭಿಸಿರುವುದರಿಂದ ಸದರಿ ರಸ್ತೆಯನ್ನು ಬಂದ್ ಮಾಡಿ ಬದಲಿ ವ್ಯವಸ್ಥೆ ಯನ್ನು ಕಲ್ಪಿಸಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಛೇರಿ ಪ್ರಕಟಣೆ ತಿಳಿಸಿದೆ.