ಹೆಬ್ರಿ : ಪುರಾತನ ಹಿನ್ನೆಲೆ ಇರುವ ಹೆಬ್ರಿ ಬಲ್ಲೆ ಶ್ರೀ ಕಾಡ್ಯನಾಗ ದೇವರ ಸನ್ನಿಧಿ ಜೀರ್ಣೋದ್ಧಾರಗೊಂಡು ಇದೀಗ ಗುಡಿಯಲ್ಲಿ ಕಾಡ್ಯನಾಗದೇವರ ಪುನರ್ ಪ್ರತಿಷ್ಠಾಪನೆ ಫೆ. 8 ಮತ್ತು 9ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಫೆ. 9ರಂದು ಬೆಳಿಗ್ಗೆ ಪ್ರಧಾನ ಹೋಮ, ಪಂಚವಂಶತಿ ಕಲರಾಧನೆ, ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಲಿದ್ದು ಬಳಿಕ ಹೆಬ್ರಿ ತಾಣದಿಂದ ಚಂಡೆ ವಾದ್ಯ ಘೋಷದೊಂದಿಗೆ ಕಾಡ್ಯನಾಗ ದೇವರ ಸಾನಿಧ್ಯಕ್ಕೆ ವೈಭವದ ಕಳಶಗಳ ಆಗಮನ, ಕಾಡ್ಯನಾಗ ದೇವರ ಸನ್ನಿಧಿಯಲ್ಲಿ ಸಂದರ್ಶನ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನ ಸಂರ್ಪಣೆ ನಡೆಯಲಿದೆ. ಮಧ್ಯಾಹ್ನ 1:30 ರಿಂದ ಧಾರ್ಮಿಕ ಸಭೆ, ಸನ್ಮಾನ ಹಾಗೂ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹೆಬ್ರಿ ತಂಡದಿಂದ ಗಾನ -ನಾಟ್ಯ- ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಕಾಡ್ಯನಾಗ ದೇವರ ಜೀವನೋದ್ಧಾರ ಹಾಗೂ ಪುನರ್ಪ್ರತಿಷ್ಠಾಪನ ಸಮಿತಿ ಅಧ್ಯಕ್ಷ ವೆಂಕಟೇಶ್ ಆಚಾರ್ಯ, ಗೌರವಾಧ್ಯಕ್ಷರಾದ ಎಚ್. ರಘುರಾಮ ಸೋಮಯಾಜಿ, ಎಚ್ ಗಂಗಾಧರ್ ಸೋಮಯಾಜಿ, ಕಾರ್ಯದರ್ಶಿ ಎಂ. ಹರಿದಾಸ್ ಹೆಗ್ಡೆ, ಕೋಶಾಧಿಕಾರಿ ಶ್ರೀನಿವಾಸ್ ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
















