ಮಂಗಳೂರು ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಸ್ಥಾನದ ಆಶ್ರಯದಲ್ಲಿ ನಾಳೆಯಿಂದ 18 ದಿನಗಳ ತುಳು ಭಗವದ್ಗೀತೆ ಪ್ರವಚನ

ಮಂಗಳೂರು: ಇಸ್ಕಾನ್ ಶ್ರೀ ಶ್ರೀ ರಾಧಾ ಗೋವಿಂದ ದೇವಸ್ಥಾನ, ಕುಳಾಯಿ ಮಂಗಳೂರು ಇದರ ಆಶ್ರಯದಲ್ಲಿ ಜುಲೈ 3 ರಿಂದ ಬೆಳಗ್ಗೆ 6 ಗಂಟೆಗೆ ಮತ್ತು ರಾತ್ರಿ 8 ಗಂಟೆಗೆ 18 ದಿವಸಗಳ ಉಚಿತವಾಗಿ ನಡೆಯುವ ತುಳು ಭಗವದ್ಗೀತೆ ಪ್ರವಚನದ 38ನೇ ಬ್ಯಾಚ್ ನಡೆಯಲಿದೆ. ಭಗವದ್ಗೀತೆಯನ್ನು ಸರಳವಾಗಿ ಅರ್ಥ ಮಾಡಿಕೊಳ್ಳುವ ಸುವರ್ಣ ಅವಕಾಶ ಇಲ್ಲಿದೆ. https://chat.whatsapp.com/JtIbDzma2xtIyp3rFnFWJS ಭಗವದ್ಗೀತೆಯ ಪ್ರವಚನ ಪಡೆದುಕೊಳ್ಳಲು ಈ ಮೇಲಿನ ಲಿಂಗನ್ನು ಕ್ಲಿಕ್ ಮಾಡಿ ವಾಟ್ಸಾಪ್ ಗ್ರೂಪಿಗೆ ಸೇರಿಕೊಳ್ಳಬಹುದು.

ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜು.7 ರವರೆಗೆ ಮಕ್ಕಳಿಗೆ ಉಚಿತ ತಪಾಸಣಾ, ಚಿಕಿತ್ಸಾ ಶಿಬಿರ

ಮಣಿಪಾಲ: ಮಣಿಪಾಲದ ಶಿವಳ್ಳಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ರಜತ ಮಹೋತ್ಸವ ಹಾಗೂ ವೈದ್ಯರ ದಿನದ ಅಂಗವಾಗಿ ಮಕ್ಕಳ ವಿಭಾಗ ಕುಮಾರ ಕಲ್ಪ-ದಿಂದ ಮಕ್ಕಳಲ್ಲಿ ಕಂಡುಬರುವ ಉಸಿರಾಟ ಸಂಬಂಧಿ ರೋಗಗಳು, ಕೆಮ್ಮು, ಶೀತ ಅಸ್ತಮಾ, ನೆಗಡಿ, ಅಲರ್ಜಿ ಸೈನುಸೈಟಿಸ್, ಗಂಟಲು ನೋವು ಮುಂತಾದ ತೊಂದರೆಗಳಿಗೆ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಜು.1 ರಿಂದ ಜು.7 ರವರೆಗೆ ಬೆಳಿಗ್ಗೆ 09.00 ರಿಂದ ಅಪರಾಹ್ನ 4.00 ರವರೆಗೆ ಆಯೋಜಿಸಲಾಗಿದೆ. ಈ ಶಿಬಿರವನ್ನು ಜು.1 ರಂದು […]

ಜುಲೈ10ರಿಂದ ಅಕ್ಕಿ ಬದಲು ಹಣ ಕೊಡುವ ಪ್ರಕ್ರಿಯೆ ಪ್ರಾರಂಭ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅನ್ನಭಾಗ್ಯ ಯೋಜನೆಯ ಹಣ ಜುಲೈ 1ರಂದೇ ಕೊಡ್ತೀವಿ ಅಂತಾ ಹೇಳಿಲ್ಲ. ಈ ತಿಂಗಳು 10ರ ನಂತರ ಕೊಡಲು ಪ್ರಾರಂಭ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ತಮ್ಮ ಸರ್ಕಾರಿ ನಿವಾಸದ ಬಳಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ, ಜುಲೈ ತಿಂಗಳ ಅಕ್ಕಿ ಬದಲಿಗೆ ದುಡ್ಡನ್ನು ಜುಲೈ 1ರಂದೇ ಕೊಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳ ಹಣವನ್ನು ಈ ತಿಂಗಳಲ್ಲಿಯೇ ನೀಡಲಾಗುವುದು. ಜುಲೈ 10ರ ನಂತರ ಹಣ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ […]

ಪತ್ರಕರ್ತರು ಯಾವುದೇ ಒತ್ತಡದ ಸಂದರ್ಭದಲ್ಲಿ ಸತ್ಯ ಹೇಳುವ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು: ಹರಿಪ್ರಸಾದ್ ಎ.

ಉಡುಪಿ: ಇಂದು ಸಮಾಜದಲ್ಲಿ ಸತ್ಯ ಹೇಳುವುದೇ ಸತ್ಯ ಹೇಳುವುದೇ ಬಹಳ ದೊಡ್ಡ ಸವಾಲಿನ ಕೆಲಸ ಆಗಿದೆ. ಪತ್ರಕರ್ತರು ಯಾವುದೇ ಒತ್ತಡದ ಸಂದಭದಲ್ಲೂ ಸತ್ಯವನ್ನು ಹೇಳುವ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು. ಅಂತಹ ವೌಲ್ಯಗಳನ್ನು ಉಳಿಸಿಕೊಳ್ಳುವುದು ಪತ್ರಕರ್ತರ ಜವಾಬ್ದಾರಿಯಾಗಿದೆ ಎಂದು ಎಂದು ಸುದ್ದಿಯಾನ ಡಿಜಿಟಲ್ ಮೀಡಿಯಾದ ಪ್ರಧಾನ ಸಂಪಾದಕ ಹರಿಪ್ರಸಾದ್ ಎ. ಹೇಳಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿ, ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಐಎಂಎ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ […]

ವೈದ್ಯರು ಮತ್ತು ಆರೋಗ್ಯ ಮೂಲಸೌಕರ್ಯಗಳ ಮೇಲಿನ ಹೊರೆಗಳನ್ನು ನಿವಾರಿಸಲು ಪ್ರಿವೆಂಟಿವ್ ಹೆಲ್ತ್ ಕೇರ್ ಮೇಲೆ ಗಮನ ಕೇಂದ್ರೀಕರಿಸಿ

ಭಾರತದಲ್ಲಿ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಯೋಗಕ್ಷೇಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ಆರೋಗ್ಯ ವೃತ್ತಿಪರರ ದಣಿವರಿಯದ ಪ್ರಯತ್ನಗಳಿಗೆ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ವಿಶೇಷ ಸಂದರ್ಭವಾಗಿ ಈ ದಿನ ಕಾರ್ಯನಿರ್ವಹಿಸುತ್ತದೆ. ಅದೇನೇ ಒತ್ತಡ ಇದ್ದರೂ, ವೈದ್ಯರು, ನಮ್ಮೆಲ್ಲರಂತೆ, ವಿಸ್ತೃತ ಕೆಲಸದ ಸಮಯ ಮತ್ತು ರೋಗಿಗಳ ಹೆಚ್ಚುತ್ತಿರುವ ಒತ್ತಡದ ಪರಿಣಾಮವಾಗಿ ಭಾವನಾತ್ಮಕ ತೊಂದರೆ ಮತ್ತು ದೈಹಿಕ ಬಳಲಿಕೆಯನ್ನು ಎದುರಿಸುವ ಮಾನವರು ಎಂದು ಗುರುತಿಸುವುದು ಅವಶ್ಯ. ಆದ್ದರಿಂದ ಪ್ರಿವೆಂಟಿವ್ ಹೆಲ್ತ್ ಕೇರ್ ನ ಮಹತ್ವವನ್ನು […]