ಲೋಕಕಲ್ಯಾಣಕ್ಕಾಗಿ ಫೆಬ್ರವರಿಯಲ್ಲಿ ಪಡು ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಹಸ್ರ ಚಂಡಿಕಾಯಾಗ

ಉಡುಪಿ: ಪಡು ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಲೋಕಕಲ್ಯಾಣ, ದೇಶದ ಸುಭಿಕ್ಷೆ ಹಾಗೂ ಗ್ರಾಮ–ರಾಷ್ಟ್ರಗಳ ಕ್ಷೇಮಕ್ಕಾಗಿ ಫೆಬ್ರವರಿಯಲ್ಲಿ ಸಹಸ್ರ ಚಂಡಿಕಾಯಾಗ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಕೃಷ್ಣರಾಜ್ ಭಟ್ ತಿಳಿಸಿದರು. ಈ ಹಿನ್ನೆಲೆಯಲ್ಲಿ ಸೆ.18ರಂದು ಸಂಜೆ 6.30ಕ್ಕೆ ದೇವಸ್ಥಾನದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಅದಮಾರು ಮಠದ ವಿಶ್ವಪ್ರಿಯತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಗಣ್ಯರ ಸಮ್ಮುಖದಲ್ಲಿ ಯಾಗದ ಮನವಿ ಪತ್ರ ಬಿಡುಗಡೆ ಮಾಡಲಾಗುವುದು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕ್ಷೇತ್ರದಲ್ಲಿ ಪ್ರತೀ ಹುಣ್ಣಿಮೆಯ ಆರಾಧನಾ […]
ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಉದ್ಯೋಗ ಎಕ್ಸ್ಪ್ರೆಸ್ 2026 ಉದ್ಘಾಟನೆ

ಕುಂದಾಪುರ: ಐಎಂಜೆ ಶಿಕ್ಷಣ ಸಂಸ್ಥೆಗಳು,1ಎಂ1ಬಿ ಹಾಗೂ ರಾಜ್ಯ ಸರ್ಕಾರದ ಮೈಕ್ರೋಸಾಫ್ಟ್ ಮತ್ತು ಮೈಟಿ ಸಹಯೋಗದಲ್ಲಿ, “ಉದ್ಯೋಗ ಎಕ್ಸ್ಪ್ರೆಸ್ 2026” ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಭಾ ಕಾರ್ಯಕ್ರಮವು ಸೆಪ್ಟೆಂಬರ್ 18, 2026ರಂದು ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ (ಎಂಐಟಿ) ಆವರಣದಲ್ಲಿ ಬೆಳಿಗ್ಗೆ 9.30ಗೆ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಸ್ಯಾಮುಯೆಲ್ ಅಗಸ್ಟಸ್ ನಾರ್ಟನ್ ಸ್ಟ್ಯಾನ್ಲಿ, ಆರ್ಕಿಟೆಕ್ಟ್, ಐಬಿಎಂ ಇಂಡಿಯಾ ಕ್ಲೌಡ್ ಲ್ಯಾಬ್ಸ್ ಅವರು ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಅಭಿರಾಮ್ ನಟರಾಜನ್ , ಕಾರ್ಯಕ್ರಮ ನಿರ್ದೇಶಕರು, ಗ್ರಾಸ್ರೂಟ್ ಇನಿಶಿಯೇಟಿವ್ಸ್, […]
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಆಟೋ ಸೇವೆಗೆ ಚಾಲನೆ.

ಉಡುಪಿ: ನರೇಂದ್ರ ಮೋದಿಯವರ ಜನುಮ ದಿನ ಪ್ರಯುಕ್ತ ಕಳೆದ 6 ವರ್ಷಗಳಿಂದ ಮೋದಿಯವರ ಬ್ಯಾನರ್ ನ್ನು ತನ್ನ ರಿಕ್ಷಾಕ್ಕೆ ಕಟ್ಟಿ ಬಾಡಿಗೆ ಮಾಡುತ್ತಿರುವ ಜನ ಸಂಘ ಮೂಲದ ಕಾರ್ಯಕರ್ತರು ಅತ್ರಾಡಿಯ ಗೋಪಾಲ ಕೃಷ್ಣ ಆಚಾರ್ಯ ಇವರು ಈ ಬಾರಿ ಮೋದಿಯವರ ಜನ್ಮದಿನ ಸೆಪ್ಟೆಂಬರ್ 17 ರಂದು ಬೆಳಗ್ಗಿನಿಂದ ರಾತ್ರಿಯವರೆಗೆ ಉಚಿತ ಆಟೋ ರಿಕ್ಷಾ ಸೇವೆಯನ್ನು ನೀಡಲು ನಿರ್ಧರಿಸಿದ್ದು, ಉಚಿತ ಆಟೋ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಇವರ ಉಪಸ್ಥಿತಿಯಲ್ಲಿ ಹಿರಿಯಡ್ಕದ ಮೋದಿ (ಸದಾನಂದ […]
ರೈತರು, ಕರಾವಳಿ ಅಭಿವೃದ್ಧಿಗೆ ಆದ್ಯತೆ ನೀಡಿ: ಕಿಸಾನ್ ಕಾಂಗ್ರೆಸ್

ಉಡುಪಿ: ಕರಾವಳಿ ಸಚಿವ ಸಂಪುಟ ಸಭೆಯಲ್ಲಿ ರೈತರು ಹಾಗೂ ಕರಾವಳಿ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಆಗ್ರಹಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಶೆಟ್ಟಿ, ಕಸ್ತೂರಿರಂಗನ್ ವರದಿಯಿಂದ ಬಾಧಿತ ರೈತರ ರಕ್ಷಣೆ, ವಾರಾಹಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವುದು ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರ್ಸ್ಥಾಪನೆಗೆ ₹100 ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಪ್ರತಿ ತಾಲೂಕಿಗೆ ಒಂದರಂತೆ ಫಸಲು […]
ಸಾಂಪ್ರದಾಯಿಕ ಕಂಬಳಕ್ಕೆ ವಿಶೇಷ ಅನುದಾನ ನೀಡಿ: ಸಾಂಪ್ರದಾಯಿಕ ಕಂಬಳ ಸಮಿತಿ ಆಗ್ರಹ

ಉಡುಪಿ: ಕರಾವಳಿಯ ವಿಶಿಷ್ಟ ಜನಪದ ಆಚರಣೆ ಹಾಗೂ ಕ್ರೀಡೆಯಾಗಿರುವ ಸಾಂಪ್ರದಾಯಿಕ ಕಂಬಳಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ ಆಗ್ರಹಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕಂಬಳಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಹಾಗೂ ಉಡುಪಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಸಾಂಪ್ರದಾಯಿಕ ಕಂಬಳಗಳು ನಡೆಯುತ್ತವೆ. ಇದು ಕೇವಲ ಕ್ರೀಡೆಯಾಗಿರದೆ ಕರಾವಳಿಯ ಜನಪದ ಹಾಗೂ […]