ಡಾ. ರಾಮದಾಸ ಎಂ. ಪೈ ಅವರ 91ನೇ ಜನ್ಮದಿನ:  ಮಾಹೆಯಿಂದ ಬಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಮನೆ ನಿರ್ಮಾಣ ಯೋಜನೆಗೆ ಚಾಲನೆ

ಮಣಿಪಾಲ, ಸೆಪ್ಟೆಂಬರ್ 17, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ  ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಿಕೊಡುವ ಮಾದರಿ ಯೋಜನೆಯನ್ನು ಆರಂಭಿಸಿದೆ. ಮಾಹೆಯ ಕುಲಾಧಿಪತಿ ಡಾ. ರಾಮದಾಸ ಎಂ. ಪೈ ಅವರ 91ನೇ ಜನ್ಮದಿನವಾದ ಇಂದು ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಎರಡು ಕುಟುಂಬಗಳಿಗೆ ಮನೆನಿರ್ಮಾಣದ ದೃಢೀಕರಣ ಪತ್ರವನ್ನು ಮಾಹೆ ಟ್ರಸ್ಟ್‌ನ ಅಧ್ಯಕ್ಷರಾದ […]

ಕೌಶಲ್ಯವನ್ನು ಆರ್ಥಿಕ ಶಕ್ತಿಯಾಗಿ ಪರಿವರ್ತಿಸಬೇಕು ಡಾ. ಮಹಾಬಲೇಶ್ ಶೆಟ್ಟಿಮೂಡುಬಿದಿರೆ:

ಮಹಿಳೆಯರ ಆರ್ಥಿಕ ಸಬಲೀಕರಣವು ಕುಟುಂಬದ ಅಭಿವೃದ್ಧಿಯಷ್ಟೇ ಅಲ್ಲದೆ, ಸಮಾಜದ ಪ್ರಗತಿಗೂ ಪ್ರಮುಖ ಆಧಾರವಾಗಿದೆ. ಮಹಿಳೆಯರಲ್ಲಿರುವ ಕೌಶಲ್ಯಕ್ಕೆ ಸೂಕ್ತ ವೇದಿಕೆ ಹಾಗೂ ಮಾರುಕಟ್ಟೆ ದೊರೆತಾಗ ಅದು ಸ್ವಾವಲಂಬನೆ ಮತ್ತು ಆರ್ಥಿಕ ಸ್ವಾತಂತ್ರ‍್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಆಳ್ವಾಸ್ ಮೆಡಿಕಲ್ ಕಾಲೇಜಿನ ಡೀನ್ ಡಾ. ಮಹಾಬಲೇಶ್ ಶೆಟ್ಟಿ ಹೇಳಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ವೇದಿಕೆ ‘ಸಕ್ಷಮಾ’ ಹಾಗೂ ಆಳ್ವಾಸ್ ಹೋಮಿಯೋಪಥಿ ಕಾಲೇಜಿನ ಸಹಯೋಗದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಆಸಕ್ತ ಗೃಹಿಣಿಯರು, ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡವರು ಹಾಗೂ ಹವ್ಯಾಸಿ […]

ಮೂಡಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ‘ಜಾಬ್ ಎಕ್ಸ್‌ಪ್ರೆಸ್ 2K26’; 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳಿಂದ ಸಾವಿರಾರು ಉದ್ಯೋಗಾವಕಾಶಗಳು

ಕುಂದಾಪುರ: ಸ್ಥಳೀಯ ಐ.ಎಂ.ಜೆ. ಶಿಕ್ಷಣ ಸಂಸ್ಥೆ ಮೂಡಲಕಟ್ಟೆಯಲ್ಲಿ ಕರ್ನಾಟಕ ಸರ್ಕಾರ, ಮೈಕ್ರೋಸಾಫ್ಟ್, ಕೇಂದ್ರ ಸರ್ಕಾರದ MeitY ಸ್ಟಾರ್ಟ್‌ಅಪ್ ಹಬ್ ಮತ್ತು 1M1B ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಉದ್ಯೋಗ ಮೇಳ ‘ಜಾಬ್ ಎಕ್ಸ್‌ಪ್ರೆಸ್ 2K26’ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಅಭೂತಪೂರ್ವ ಸ್ಪಂದನೆ ದೊರೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಐಬಿಎಂ ಇಂಡಿಯಾ ಕ್ಲೌಡ್ ಲ್ಯಾಬ್ಸ್‌ನ ಆರ್ಕಿಟೆಕ್ಟ್ ಡಾ. ಸ್ಯಾಮ್ಯುಯೆಲ್ ಅಗಸ್ಟಸ್ ನಾರ್ಟನ್ ಸ್ಟಾನ್ಲಿ ಅವರು ಆಗಮಿಸಿದ್ದು, ಇಂದಿನ ತಂತ್ರಜ್ಞಾನ ಯುಗದಲ್ಲಿ ಪರಿಸರ ಸ್ನೇಹಿ ಕೌಶಲಗಳು ಹಾಗೂ ಕೃತಕ ಬುದ್ಧಿಮತ್ತೆ (AI) ಜ್ಞಾನಕ್ಕೆ […]

ಇಡೀ ವಿಶ್ವವನ್ನೇ ತನ್ನ ಕೈಚಳಕದ ಮೂಲಕ ನಿರ್ಮಾಣ ಮಾಡಿದ ವಾಸ್ತುಶಿಲ್ಪಿ ವಿಶ್ವಕರ್ಮರು : ಶಾಸಕ ಯಶ್‌ಪಾಲ್ ಎ ಸುವರ್ಣ

ಉಡುಪಿ ಸೆಪ್ಟಂಬರ್ 17 (ಕ.ವಾ): ಭಾರತೀಯ ಸಂಸ್ಕೃತಿ, ಪುರಾಣ, ಧಾರ್ಮಿಕ ಪರಂಪರೆ ಹಾಗೂ ಶಿಲ್ಪಕಲೆಯ ಇತಿಹಾಸದ ಬಗ್ಗೆ ಅವಲೋಕಿಸಿದಾಗ ‘ವಿಶ್ವಕರ್ಮ’ ಎಂಬ ಹೆಸರು ಅತ್ಯಂತ ಮಹತ್ವಪೂರ್ಣವಾಗಿ ಕಾಣಿಸುತ್ತದೆ. ತಂತ್ರಜ್ಞಾನದ ಪರಿವೇ ಇಲ್ಲದ ಸಾವಿರಾರು ವರ್ಷಗಳ ಹಿಂದೆ ತನ್ನ ಕೈಚಳಕದಿಂದ ಇಡೀ ವಿಶ್ವವನ್ನೇ ನಿರ್ಮಾಣ ಮಾಡುವ ಮೂಲಕ ದೇವಶಿಲ್ಪಿ ಹಾಗೂ ವಿಶ್ವದ ಸೃಷ್ಟಿಕರ್ತನೆಂದು ವಿಶ್ವಕರ್ಮರು ಗುರುತಿಸಿಕೊಂಡಿದ್ದಾರೆ ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು.ಅವರು ಇಂದು ನಗರದ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ […]

ಬಿ. ಬಿ. ಹೆಗ್ಡೆ ಕಾಲೇಜು: ಪರಿಸರ ಸ್ನೇಹಿ ಮಣ್ಣಿನ ಗಣಪತಿ ರಚನಾ ಸ್ಪರ್ಧೆ

ಕುಂದಾಪುರ (ಸೆ.10): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರಆಡಳಿತ ವಿಭಾಗ ಹಾಗೂ ರೋವರ್ಸ್ & ರೇಂಜರ್ಸ್ ಘಟಕದ ಜಂಟಿ ಆಶ್ರಯದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ರಚನೆಯ ಸ್ಪರ್ಧೆಯನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್, 10 ರಂದು ಕಾಲೇಜಿನ ಪ್ರಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.ಅತಿಯಾದ ರಾಸಾಯನಿಕ ಬಳಕೆ ಹಾಗೂ ಕೃತಕ ವಸ್ತುಗಳನ್ನು ಬಳಸಿ ಗಣಪತಿ ಮೂರ್ತಿಯನ್ನು ರಚಿಸುವುದು ಪರಿಸರಕ್ಕೆ ಹಾನಿಕಾರಕ ಆ ನಿಟ್ಟಿನಲ್ಲಿ ಪರಿಸರಕ್ಕೆ ಪೂರಕವಾದ ಮಣ್ಣಿನ ಗಣಪತಿಯನ್ನು ರಚಿಸುವುದು ಉತ್ತಮ ಎಂದು ಕಾಲೇಜಿನ ಪ್ರಾಂಶುಪಾಲರಾದ […]