ಹೆಬ್ರಿಗೆ ಬಂದಿಳಿದ ಸಿಎಂ; ಕಸ್ತೂರಿರಂಗನ್ ವರದಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಸಿಎಂ

ಉಡುಪಿ: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆ ಮುಗಿದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ಸಂಜೆ ಹೆಲಿಕಾಪ್ಟರ್ ಮೂಲಕ ಹೆಬ್ರಿಗೆ ಆಗಮಿಸಿದರು. ಹೆಬ್ರಿಯ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ ಗೆ ಮುಖ್ಯಮಂತ್ರಿ ಆಗಮಿಸಿದರು. ಬಳಿಕ ಶಾಸಕರು, ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು ಸಿಎಂ ಅವರನ್ನು ಸ್ವಾಗತಿಸಿದರು. ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಹೆಬ್ರಿಯ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಕಸ್ತೂರಿರಂಗನ್ ವರದಿಯಿಂದ ಉಡುಪಿ ಜಿಲ್ಲೆಯ ಗ್ರಾಮೀಣ […]
ಕೊಂಕಣಿ ಸಮುದಾಯಗಳನ್ನು ಒಗ್ಗೂಡಿಸಲು ‘ಕೊಂಕನಿಜ್’ ವೇದಿಕೆ ಆರಂಭ

ಮಂಗಳೂರು: ವಿಶ್ವದಾದ್ಯಂತ ಹರಡಿರುವ ಕೊಂಕಣಿ ಮಾತನಾಡುವ ಸಮುದಾಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ ‘ಕೊಂಕನಿಜ್’ (KONKANIZ) ಎಂಬ ಸಮುದಾಯ ಆಧಾರಿತ ವೇದಿಕೆಯನ್ನು ಮಂಗಳೂರಿನಲ್ಲಿಆರಂಭಿಸಲಾಯಿತು.ಕೊಂಕಣಿ ಸಮುದಾಯಗಳ ನಡುವೆ ಭಾಷೆಯ ಉಪಭಾಷೆಗಳು, ಲಿಪಿಗಳು ಹಾಗೂ ಭೌಗೋಳಿಕ ಗಡಿಗಳಿಂದ ಉಂಟಾಗಿರುವಅಂತರವನ್ನು ಕಡಿಮೆ ಮಾಡಿ, ಸಾಮಾನ್ಯವಾದ ಸಾಂಸ್ಕೃತಿಕ ಬಂಧಗಳನ್ನು ಬಲಪಡಿಸುವುದು ವೇದಿಕೆಯ ಉದ್ದೇಶವಾಗಿದೆ.ಕೊಂಕಣಿ ಭಾಷೆ, ಆಹಾರ, ಸಂಗೀತ, ನೃತ್ಯ, ಚಲನಚಿತ್ರ, ಕ್ರೀಡೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಮೂಲಕ ಸಮುದಾಯಗಳ ನಡುವೆ ಸೇತುವೆ ನಿರ್ಮಿಸಲು ವೇದಿಕೆ ಕಾರ್ಯನಿರ್ವಹಿಸಲಿದೆ. ಮೆಂಡೋನ್ಸಾ ಫೌಂಡೇಶನ್ನ ಡಾ. ವಿವೇಕ್ಮೆಂ […]
ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಚಿಂತನೆ; ಸಣ್ಣ ಉದ್ಯಮಗಳಿಗೆ ಒತ್ತು

ಉಡುಪಿ: ಕರಾವಳಿ ಭಾಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಚಿಂತನೆಗಳನ್ನು ರೂಪಿಸಲಾಗುತ್ತಿದೆ. ದೊಡ್ಡ ಉದ್ಯಮಗಳನ್ನು ತರುವುದು ಕಷ್ಟವಾಗಬಹುದು. ಆದರೆ ಸಣ್ಣ–ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡುವ ಮೂಲಕ ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ಮಂಗಳೂರಿನಲ್ಲಿ ಶುಕ್ರವಾರ ನಡೆಯುತ್ತಿರುವ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಮಾತನಾಡಿದ ಅವರು, ಕರಾವಳಿ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ. ದೇಶದ ಹಲವು ರಾಜ್ಯಗಳು ಕರಾವಳಿಯನ್ನು ಬಳಸಿಕೊಂಡು […]
ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ: ಸಿಎಂ ಘೋಷಣೆ

ಉಡುಪಿ: ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಅಗತ್ಯ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದರು.ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ತುಳು ಭಾಷೆಯ ಸಂರಕ್ಷಣೆ, ಅಭಿವೃದ್ಧಿ ಮತ್ತು ಅಧಿಕೃತ ಬಳಕೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ […]
ಡಾ. ರಾಮದಾಸ ಎಂ. ಪೈ ಅವರ 91ನೇ ಜನ್ಮದಿನ: ಮಾಹೆಯಿಂದ ಬಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಮನೆ ನಿರ್ಮಾಣ ಯೋಜನೆಗೆ ಚಾಲನೆ

ಮಣಿಪಾಲ, ಸೆಪ್ಟೆಂಬರ್ 17, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಮನೆ ನಿರ್ಮಿಸಿಕೊಡುವ ಮಾದರಿ ಯೋಜನೆಯನ್ನು ಆರಂಭಿಸಿದೆ. ಮಾಹೆಯ ಕುಲಾಧಿಪತಿ ಡಾ. ರಾಮದಾಸ ಎಂ. ಪೈ ಅವರ 91ನೇ ಜನ್ಮದಿನವಾದ ಇಂದು ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಎರಡು ಕುಟುಂಬಗಳಿಗೆ ಮನೆನಿರ್ಮಾಣದ ದೃಢೀಕರಣ ಪತ್ರವನ್ನು ಮಾಹೆ ಟ್ರಸ್ಟ್ನ ಅಧ್ಯಕ್ಷರಾದ […]