ಕೆ.ಎಂ.ಸಿ ಆಸ್ಪತ್ರೆಯಲ್ಲಿ ಪ್ರಾಕ್ಟಿಕಲ್ ಪೀಡಿಯಾಟ್ರಿಕ್ ಆಂಕೊಲಾಜಿ ರಾಷ್ಟ್ರೀಯ ತರಬೇತಿ ಕಾರ್ಯಾಗಾರ

ಮಣಿಪಾಲ: ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ನ ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೊಲಾಜಿ ಅಧ್ಯಾಯದ ಸಹಯೋಗದೊಂದಿಗೆ ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಇಂಟರಾಕ್ಟ್ ಕಟ್ಟಡದಲ್ಲಿ ರಾಷ್ಟ್ರೀಯ ತರಬೇತಿ ಕಾರ್ಯಕ್ರಮ -ಪ್ರಾಕ್ಟಿಕಲ್ ಪೀಡಿಯಾಟ್ರಿಕ್ ಆಂಕೊಲೋಜಿಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಅರ್ಚನಾ ಎಂ ವಿ, ಕಾರ್ಯಾಗಾರದ ಕುರಿತು ಸಂಕ್ಷಿಪ್ತ ಅವಲೋಕನವನ್ನು ನೀಡಿದರು. ಕಾರ್ಯಾಗಾರವು ಉಪನ್ಯಾಸಗಳು ಮತ್ತು ಪ್ರಾಯೋಗಿಕ ಕೌಶಲ್ಯ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಮಕ್ಕಳಲ್ಲಿ ಮಾಡುವ ಚಿಕಿತ್ಸಾ ಕಾರ್ಯವಿಧಾನ ಮತ್ತು ಸೆಂಟ್ರಲ್ […]

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಟಾಕಿ ನಿಷೇಧ; ಹಸಿರು ಪಟಾಕಿಗಳಿಗೆ ಮಾತ್ರ ಪರವಾನಗಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಮದುವೆ, ಗಣೇಶ ಉತ್ಸವ ಹಾಗೂ ರಾಜಕೀಯ ಸಂಬಂಧಿತ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅತ್ತಿಬೆಲೆ ಪಟಾಕಿ ಮಳಿಗೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಹಸಿರು ಪಟಾಕಿ ನಿಯಾಮವಳಿಗಳಿಗೆ ವಿರುದ್ಧವಾಗಿ ಅಂಗಡಿಗಳು ಇದ್ದರೆ ಕ್ರಮ ಕೈಗೊಳ್ಳಬೇಕು. ಅನಧಿಕೃತ ಮಳಿಗೆಗಳು ಕಂಡುಬಂದಲ್ಲಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರವೇ ಪಟಾಕಿ ಅಂಗಡಿಗಳಿಗೆ […]

ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಚಿತ್ರ ನಟಿ ಪ್ರೇಮಾ

ಉಡುಪಿ: ಶ್ರೀ ಕೃಷ್ಣಮಠಕ್ಕೆ ಇಂದು ಖ್ಯಾತ ಸಿನಿಮಾ ಕಲಾವಿದೆ ಪ್ರೇಮಾ ಆಗಮಿಸಿ ದೇವರ ದರ್ಶನ ಪಡೆದರು. ಈ ಸಂದರ್ಭ ಮಠದ ದಿವಾನ ವರದರಾಜ ಭಟ್ ಹಾಗೂ ಮಧೂರು ನಾರಾಯಣ ಶರಳಾಯ ಉಪಸ್ಥಿತರಿದ್ದರು. ಭಾರತ ಸರಕಾರದ ಫಾರ್ಮಸಿಕ್ಯೂಟಿಕಲ್ಸ್ ಎಕ್ಸ್ಪೋರ್ಟ್ ಪ್ರಮೋಷನ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷಡಾ.ಎಸ್.ವಿ.ವೀರಮಣಿ ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದುಕೊಂಡು ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಇವರಿಂದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ,ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಮನೆಯೊಂದರಿಂದ 73 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಉಡುಪಿ: ನಗರದ ಲಾಲಾಲಜಪತ್​ ರಾಯ್​ ಮಾರ್ಗದ 4ನೇ ಅಡ್ಡರಸ್ತೆಯಲ್ಲಿರುವ ಮನೆಯೊಂದಕ್ಕೆ ಭಾನುವಾರ ರಾತ್ರಿ ನುಗ್ಗಿದ ಕಳ್ಳರು 73 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ. ಕಳ್ಳರು ಮನೆಯ ಮುಂಬಾಗಿಲಿನ ಮತ್ತು ಮಾಸ್ಟರ್​ ಬೆಡ್​ ರೂಮಿನ ಬಾಗಿಲುಗಳ ಬೀಗ ಮುರಿದು, ಕಪಾಟುಗಳನ್ನು ತೆರೆದು ಅದರಲ್ಲಿದ್ದ ಅಂದಾಜು 1,882 ಗ್ರಾಂ ತೂಕದ ಸುಮಾರು ರೂ. 66,36,300 ಮೌಲ್ಯದ ಚಿನ್ನಾಭರಣಗಳು ಹಾಗೂ 7,450 ಗ್ರಾಂ ತೂಕದ ರೂ. 6,70,500 ಮೌಲ್ಯದ ಬೆಳ್ಳಿಯ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. […]

ರಿಷಬ್ ಶೆಟ್ಟಿ ಪ್ರೊಡಕ್ಷನ್ ನಂಬರ್ 9: ಆಸಕ್ತ ನಟ-ನಟಿಯರಿಗೆ ಕಾಸ್ಟಿಂಗ್ ಕಾಲ್

ರಿಷಬ್ ಶೆಟ್ಟಿ ಪ್ರೊಡಕ್ಷನ್ ನಂಬರ್ 9- ಆಡಿಷನ್ ಮತ್ತು ಕಾಸ್ಟಿಂಗ್ ಕಾಲ್. ಎಲ್ಲಾ ಆಸಕ್ತ ನಟ ನಟಿಯರಿಗೆ ಆಹ್ವಾನ. ನಟಿಯಾಗಲು ಬಯಸುವವರ ವಯಸ್ಸು 19 ರಿಂದ 25. ನಟರಿಗೆ- 18 ರಿಂದ 60. ಉತ್ತರ ಕರ್ನಾಟಕದ ಭಾಷಾ ಸೊಗಡು ತಿಳಿದಿರುವ ನಟ ನಟಿಯರಿಗೆ ಮೊದಲ ಆದ್ಯತೆ. ಆಸಕ್ತರು ತಮ್ಮ ಫೋಟೋ ಮತ್ತು ಪ್ರೊಫೈಲ್ ಅನ್ನು rsfproductionno9@gmail.com ಅಥವಾ 9380748309 ಕಳುಹಿಸಬಹುದು.