ಉಪ್ಪುಂದ: ಮತ್ಸಸಂಜೀವಿನಿ ಮೀನುಗಾರರ ಉತ್ಪಾದಕರ ಕಂಪನಿಯ ವಾರ್ಷಿಕ ಮಹಾಸಭೆ

ಉಪ್ಪುಂದ: ಮತ್ಸಸಂಜೀವಿನಿ ಮೀನುಗಾರರ ಉತ್ಪಾದಕರ ಕಂಪನಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಮತ್ತುಷೇರು ಪ್ರಮಾಣ ಪತ್ರ ವಿತರಣೆಯು ನಾಡದೋಣಿ ಭವನ ಉಪ್ಪುಂದಲ್ಲಿ ಇಲ್ಲಿ ನಡೆಯಿತು. SCDCC ಬ್ಯಾಂಕ್ ಮ್ಯಾನೇಜರ್ ಶಂಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶೇರು ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಕಂಪನಿಯನ್ನು ಗ್ರಾಮೀಣ ಭಾಗದ ರೈತರಿಗೆ ಮತ್ತು ಮೀನುಗಾರರಿಗೆ ಉತ್ತಮವಾದ ಆದಾಯಬರುವ ರೀತಿಯಲ್ಲಿ ಉಪ್ಪುಂದದಲ್ಲಿ ಸ್ಥಾಪಿಸಲಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಉಪ್ಪುಂದ ಸಂಸ್ಥೆ ಅಧ್ಯಕ್ಷ ಎ. ಆನಂದ ಖಾರ್ವಿ ಮಾತನಾಡಿ, ಮೀನುಗಾರಿಕೆ ಇಲಾಖೆ ಮತ್ತು ಕೃಷಿ […]

ರಾಜ್ಯೋತ್ಸವ ಪ್ರಶಸ್ತಿ ಸೇವಾ ಸಿಂಧು ಪೋರ್ಟಲ್ ನಲ್ಲಿ ನಾಮ ನಿರ್ದೇಶನಕ್ಕೆ ಅವಕಾಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2023 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ ನಲ್ಲಿ ನಾಮನಿರ್ದೇಶನ ಮಾಡಬಹುದಾಗಿದೆ. ಸೇವಾ ಸಿಂಧು ಪೋರ್ಟಲ್ ನ ವೆಬ್ಸೈಟ್ http://sevasindhu.karnataka.gov.in. ನಾಮನಿರ್ದೇಶನದ ಅವಧಿಯು ದಿನಾಂಕ: 01-10- 2023ರಿಂದ ಪ್ರಾರಂಭವಾಗಿ ದಿನಾಂಕ 15-10-2023 ಕಡೆಯ ದಿನಾಂಕವಾಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  

ಬನ್ನಂಜೆ ಗಾಂಧಿ ಭವನದಿಂದ ಕಡತ ಕಳ್ಳತನ: ಪ್ರಕರಣ ದಾಖಲು

ಉಡುಪಿ: ಉಡುಪಿ ತಾಲೂಕು ಕಛೇರಿಯ ಅಧೀನಕ್ಕೆ ಒಳಪಟ್ಟಿರುವ ಬನ್ನಂಜೆಯಲ್ಲಿರುವ ಗಾಂಧಿ ಭವನದಲ್ಲಿ ಶೇಖರಿಸಿಟ್ಟಿದ್ದ ದಾಖಲೆಗಳು ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಂಧಿ ಭವನದಲ್ಲಿ ತಾಲೂಕು ಕಚೇರಿಯ ದಾಖಲೆಗಳನ್ನು ಹಿಂದಿನಿಂದಲೂ ಶೇಖರಿಸಿಡಲಾಗುತಿತ್ತು. ಆ.15 ರಿಂದ ಸೆ.26 ರ ನಡುವೆ ಗಾಂಧಿ ಭವನದ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದಾಖಲೆಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಉಡುಪಿ ತಾಲೂಕು ಕಛೇರಿಯ ಪ್ರಥಮ ದರ್ಜೆ ಸಹಾಯಕ ನಟರಾಜ್ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.

ಮಂಗಳೂರು ಕ್ರೆಡಾಯ್ ಮಹಿಳಾ ವಿಭಾಗದ ಉದ್ಘಾಟನೆ: ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ಮಹಿಳಾ ಸಬಲೀಕರಣ

ಮಂಗಳೂರು: ಇಲ್ಲಿನ ಓಶಿಯನ್ ಪರ್ಲ್ ನಲ್ಲಿ ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಮಂಗಳೂರು ವಿಭಾಗದ ಕ್ರೆಡಾಯ್ ಮಹಿಳಾ ವಿಭಾಗದ (ಸಿಡಬ್ಲ್ಯೂಡಬ್ಲ್ಯೂ) ಉದ್ಘಾಟನೆಯು ಅದ್ದೂರಿಯಾಗಿ ನಡೆಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಎಮ್.ಪಿ., ಪ್ರದೀಪ್ ರಾಯ್ಕರ್, ಕ್ರೆಡಾಯ್ ಕರ್ನಾಟಕದ ಅಧ್ಯಕ್ಷ ಮತ್ತು ಸಿಡಬ್ಲ್ಯೂಡಬ್ಲ್ಯೂ ರಾಷ್ಟ್ರೀಯ ಕಾರ್ಯದರ್ಶಿ ಸಾರಾ ಜೇಕಬ್ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಕ್ರೆಡಾಯ್ ಕರ್ನಾಟಕದ ಅಧ್ಯಕ್ಷ ಪ್ರದೀಪ್ ರಾಯ್ಕರ್, ಸಿಡಬ್ಲ್ಯೂಡಬ್ಲ್ಯೂ ಆರಂಭಿಸಿದ ಕಾರ್ಯಗಳು, ಚಟುವಟಿಕೆಗಳು ಮತ್ತು ತರಬೇತಿ […]

ಪ್ರವಾಸದ ನಿಮ್ಮ ಎಲ್ಲಾ ಅಗತ್ಯಗಳಿಗೆ ಒಂದೇ ಪರಿಹಾರ ಹೋಟೆಲ್ ಆಶ್ಲೇಷ್!!

ಪ್ರವಾಸದ ನಿಮ್ಮ ಎಲ್ಲಾ ಅಗತ್ಯಗಳಿಗಾಗಿ ಒಂದೇ ಪರಿಹಾರ ಹೋಟೆಲ್ ಆಶ್ಲೇಷ್… ಕೆ.ಎಸ್.ಟಿ.ಡಿ.ಸಿ ಮಾನ್ಯತೆ ಹೊಂದಿದ “ಆಶ್ಲೇಷ್” ಬೋರ್ಡಿಂಗ್ ಎಂಡ್ ಲಾಡ್ಜಿಂಗ್, “ವಜ್ರ” ಎಸಿ ರೆಸ್ಟೋರೆ೦ಟ್, “ಗಝ್ಲರ್ಸ್ ಇನ್” ಗಾರ್ಡನ್ ರೆಸ್ಟೋರೆ೦ಟ್ , “ವೀಣಾ ವರ್ಲ್ಡ್” ಟ್ರಾವೆಲ್ಸ್ ಎಂಡ್ ಟೂರ್ಸ್, ಗಾರ್ಡನ್ ೨.೦, ಲೆ-ವೈನ್ , ಯೆಯಾಚಢತ್ತು ಹಲವು ಆಕರ್ಷಣೆಗಳಿಗಾಗಿ ಸಂಪರ್ಕಿಸಿ ಹೋಟೆಲ್ ಆಶ್ಲೇಷ್, ಎಂಐಟಿ ಎದುರು, ಮಣಿಪಾಲ-ಕಾರ್ಕಳ ಹೆದ್ದಾರಿ,ಮಣಿಪಾಲ. ಸಂಪರ್ಕ: 9739271272