ದೊಡ್ಡಣ್ಣಗುಡ್ಡೆ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅ.15 ರಿಂದ 24 ರವರೆಗೆ ನವರಾತ್ರಿ ಉತ್ಸವ

ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಅ.15 ರಿಂದ 24ರ ವಿಜಯದಶಮಿಯ ಪರ್ವಕಾಲದವರಿಗೆ ನವರಾತ್ರಿ ಮಹೋತ್ಸವವು ಬಹು ವಿಜೃಂಭಣೆಯಿಂದ ನಿತ್ಯ ಅನ್ನಸಂತರ್ಪಣೆಯೊಂದಿಗೆ ನೆರವೇರಲಿದೆ. ಈ ಮಹಾನ್ ಉತ್ಸವದಲ್ಲಿ ಸಾರ್ವಜನಿಕರೆಲ್ಲರೂ ಭಾಗವಹಿಸಿ ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಧರ್ಮದರ್ಶಿ ರಮಾನಂದ ಗುರೂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅ.15ರಿಂದ 24ರ ವರೆಗೆ ಶರನ್ನವರಾತ್ರಿ ಮಹೋತ್ಸವ

ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅ.15ರಿಂದ 24ರ ವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಈ ಪ್ರಯುಕ್ತ ಪ್ರತಿದಿನ ದುರ್ಗಾಹೋಮ ವಿಜಯ ದಶಮಿಯಂದು ಚಂಡಿಕಾ ಹೋಮ ಹಾಗೂ ಸಂಜೆ ಸಾಮೂಹಿಕ ದೀಪ ನಮಸ್ಕಾರ ಮತ್ತು ಅನ್ನಸಂತರ್ಪಣೆ ಜರುಗಲಿವೆ. ನವರಾತ್ರಿ ಉತ್ಸವದ ವಿಶೇಷ ಸೇವೆಗಳು ಒಂದು ದಿನದ ದುರ್ಗಾಹೋಮ ರೂ.4500/ ದೇವಸ್ಥಾನಕ್ಕೆ ಒಂದು ದಿನದ ಹೂವಿನ ಅಲಂಕಾರ ರೂ.10000/- ವಿಜಯದಶಮಿ ಚಂಡಿಕಾ ಹೋಮ ರೂ. 1000/- ವಿಜಯದಶಮಿ ದಿನದಂದು ಸಂಜೆ ಸಾಮೂಹಿಕ ದೀಪ ನಮಸ್ಕಾರ ರೂ.1500/- ನವರಾತ್ರಿಯ […]

World Sight Day 2023: ಕಣ್ಣಿನ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ, ವಿಶ್ವ ದೃಷ್ಟಿ ದಿನದ ಬಗ್ಗೆ ಇಲ್ಲಿದೆ ಮಾಹಿತಿ

ನಿಮ್ಮ ಕಣ್ಣಿನ ಆರೋಗ್ಯದ ಪ್ರಾಮುಖ್ಯತೆಯ ಕುರಿತು ಆಲೋಚಿಸಲು ಮತ್ತು ಅದನ್ನು ರಕ್ಷಿಸಲು ಮತ್ತು ಭವಿಷ್ಯದಲ್ಲಿ ಅದನ್ನು ಆರೋಗ್ಯಕರವಾಗಿಡಲು ಎಚ್ಚರಿಸುವ ಸಲುವಾಗಿ ಈ ದಿನವನ್ನು ಮೀಸಲಿಡಲಾಗಿದೆ. ವಿಶ್ವ ದೃಷ್ಟಿ ದಿನದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಹೀಗಿದೆ. ಪಂಚೇಂದ್ರೀಯಗಳಲ್ಲಿ ಕಣ್ಣು (Eye) ಪ್ರಮುಖವಾದ ಅಂಗ. ದೃಷ್ಟಿ ಇಲ್ಲದಿದ್ದರೆ ಜಗತ್ತೇ ಕತ್ತಲು. ಪ್ರಪಂಚದಾದ್ಯಂತದ ಅನೇಕ ಜನರು ವಿವಿಧ ರೀತಿಯ ದೃಷ್ಟಿ ದೋಷಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್​ ತಿಂಗಳ ಎರಡನೇ ಗುರುವಾರದಂದು […]

ಜಾಗತಿಕ ಮಟ್ಟದ ವಿಜ್ಞಾನಿಗಳ ಶ್ರೇಯಾಂಕದಲ್ಲಿ ಮಾಹೆಯ ಪ್ರಾಧ್ಯಾಪಕರು

ಮಣಿಪಾಲ: ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾನಿಲಯವು ಅತ್ಯಂತ ಹೆಚ್ಚು ಉಲ್ಲೇಖಕ್ಕೆ ಒಳಗಾಗುವ ವಿಜ್ಞಾನದ ಲೇಖಕರ ಡೇಡಾಬೇಸ್‌ನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ, ಸಾರ್ವಜನಿಕವಾಗಿ ಲಭ್ಯವಿರುವ ಈ ದತ್ತಸಂಚಯದಲ್ಲಿ ಜಗತ್ತಿನ ಅಗ್ರಪಂಕ್ತಿಯ 2 % ವಿಜ್ಞಾನಿಗಳ ಪಟ್ಟಿ ಇದ್ದು ಇದರಲ್ಲಿ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ಗೆ ಸೇರಿದ ಶಿಕ್ಷಣ ಸಂಸ್ಥೆಗಳ 20 ಮಂದಿ ಪ್ರಾಧ್ಯಾಪಕರು ಇದ್ದಾರೆ. ಈ ದತ್ತ ಸಂಚಯವು ಎಚ್‌-ಇಂಡೆಕ್ಸ್‌ನ ಉಲ್ಲೇಖಗಳು [ಸೈಟೇಶನ್ಸ್‌ ಎಚ್‌-ಇಂಡೆಕ್ಸ್‌]. ಎಚ್‌ಎಂ-ಇಂಡೆಕ್ಸ್‌ನ ಸಹ-ಲೇಖಕ ಹೊಂದಾಣಿಕೆ [ಕೋಆಥರ್‌ಶಿಪ್‌ ಎಡ್ಜಸ್ಟೆಡ್‌ ಎಚ್‌ಎಂ-ಇಂಡೆಕ್ಸ್‌), ವಿಭಿನ್ನ ಕೃತಿಸ್ವಾಮ್ಯ ಸ್ಥಾನಗಳನ್ನು ಹೊಂದಿರುವ […]

ಕಾಪು: ಅ.16 ರಂದು ಜನತಾ ದರ್ಶನ ಕಾರ್ಯಕ್ರಮ

ಕಾಪು: ಅ.16 ರಂದು ಬೆಳಿಗ್ಗೆ 10 ಗಂಟೆಗೆ ಕಾಪು ತಾಲೂಕು ಆಡಳಿತ ಸೌಧದ ಸಭಾಭವನದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾಪು ತಾಲೂಕು ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಮತ್ತು ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಅಥವಾ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.