ಪರ್ಕಳ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ: ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಉಡುಪಿ: ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಕೆಳ ಪರ್ಕಳದ ಈಶ್ವರ ನಗರದ ನಗರಸಭೆಯ ಪಂಪ್ ಹೌಸ್ ಬಳಿ ಸೋಮವಾರ ಸಂಜೆ ನಡೆದಿದೆ. ಮಣಿಪಾಲ ಮಾಧವ ಕೃಪಾ ಶಾಲೆಯ ಮಕ್ಕಳನ್ನು ಸಂಜೆ ಮನೆಗೆ ಕರೆ ತರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಣಿಪಾಲದಿಂದ ಪರ್ಕಳದ ಕಡೆ ಹೋಗುತ್ತಿದ್ದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಇದರಿಂದ ರಿಕ್ಷಾದಲ್ಲಿದ್ದ ಮೂವರು ಮಕ್ಕಳಿಗೆ ಗಾಯಗಳಾಗಿವೆ ತಿಳಿದುಬಂದಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ […]

ಉಡುಪಿ: ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಉಡುಪಿ: ಉಪ್ಪೂರು ಕೊಳಲಗಿರಿಯ ರವಿತೇಜ (36) ನರ್ನಾಡು ಮದಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ನ.7ರ ರಾತ್ರಿಯಿಂದ ಕಾಣೆಯಾಗಿದ್ದು, ರವಿವಾರ ಬೆಳಗ್ಗೆ ಮೃತದೇಹ ದೊರೆತಿದೆ. ವಿಪರೀತ ಮದ್ಯಪಾನ ಅಭ್ಯಾಸ ಇದ್ದು ಚಿಕಿತ್ಸೆ ಕೊಡಿಸಿದರೂ ಮದ್ಯಸೇವನೆ ಮುಂದುವರಿಸಿದ್ದರು ಎನ್ನಲಾಗಿದೆ.ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಲಿಮ್ಕಾ ಬುಕ್‌ ಆಫ್ ರೆಕಾರ್ಡ್‌ ಪಡೆದಿದ್ದ ಬಾಲಕಿ ನಿಧನ

ಮಂಗಳೂರು: ಲಿಮ್ಕಾ ಬುಕ್‌ ಆಫ್‌ ರೆಕಾಡ್ಸ್‌ನ ಬಾಲಕಿ ಅನಾರೋಗ್ಯದಿಂದ ಮಂಗಳೂರಿನಲ್ಲಿ ನಿಧನ ಹೊಂದಿದಳು. ಮೃತ ಹೊಂದಿದ ಬಾಲಕಿ ಮಂಗಳೂರು ದ್ವಾರಕ ನಗರ ಕೊಟ್ಟಾರ ನಿವಾಸಿಗಳಾದ ಪುಷ್ಪರಾಜ್‌ ಎಸ್‌. ಕುಂದರ್‌ ವೈಶಾಲಿ ಎಲ್‌. ಬೆಂಗ್ರೆ ಅವರ ಪುತ್ರಿ ಪೂರ್ವಿ (7). 2019ರಲ್ಲಿ 1 ನಿಮಿಷದಲ್ಲಿ ದಾಖಲೆಯ ರೈಮ್ಸ್‌ ಆಟವಾಡಿ ಇಂಡಿಯನ್‌ ಬುಕ್‌ ಆಫ್‌ ರೆಕಾಡ್ಸ್‌ನಲ್ಲಿ ಹೆಸರು ಮಾಡಿದ್ದಳು. ಸಣ್ಣ ಪ್ರಾಯದಲ್ಲೇ ಚುರುಕಿನಿಂದ ಕೂಡಿದ್ದ ಪೂರ್ವಿ ಫುಟ್‌ಬಾಲ್‌, ಭರತನಾಟ್ಯದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿ ಜನರ ಪ್ರೀತಿಗೆ ಪಾತ್ರವಾಗಿದ್ದಳು. ವಿವಿಧ ಸಂಘ […]

ಕುಂದಾಪುರ: ಎತ್ತರ ಜಿಗಿತದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿ ಸಿನಾನ್

ಕುಂದಾಪುರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ) ತುಮಕೂರು ಜಿಲ್ಲೆ , ವಿದ್ಯಾನಿಧಿ ಪದವಿ ಪೂರ್ವ ಕಾಲೇಜು ತುಮಕೂರು, ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜು ಶಿರಾ, ಅರವಿಂದ ಪದವಿ ಪೂರ್ವ ಕಾಲೇಜು ಕುಣಿಗಲ್ ಇವರ ಸಂಯುಕ್ತ ಆಶಯದಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣ ತುಮಕೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ 2024- 25 ರಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಿನಾನ್ ಎತ್ತರ […]

ಉಡುಪಿ: ಎಸಿ ಕೋಣೆಯಿಂದ ದಕ್ಷ ಎಸ್ಪಿ ಹೊರಬರಲಿ: ಶ್ರೀನಿಧಿ ಹೆಗ್ಡೆ

ಉಡುಪಿ: ರಾಜ್ಯದಲ್ಲೆ ಹೆಚ್ಚು ಶಾಂತಿಯುತ, ಕಾನೂನು ಸುವ್ಯವಸ್ಥೆಯನ್ನು ಪಾಲಿಸುವ ನಾಗರಿಕರನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ, ಪ್ರಸ್ತುತ ಎಸ್ಪಿಯಾಗಿರುವ ಡಾ.ಅರುಣ್ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದಾರೆ. ಆದರೆ ಅವರ ನಿರ್ಧಾರಗಳು ಪೋಲಿಸ್ ಸಿಬ್ಬಂದಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್, ಹೈಕೋರ್ಟ್ ವಕೀಲ ಶ್ರೀನಿಧಿ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ವಿಷಾದಿಸಿದ್ದಾರೆ. ಆರಂಭದಲ್ಲಿ ಸಾಕಷ್ಟು ಖ್ಯಾತಿ ಪಡೆದ ಎಸ್ಪಿ ಡಾ.ಅರುಣ್ ಅವರ ಅವಧಿಯಲ್ಲಿ ನಡೆದ ಘನಘೋರ ಅಪರಾಧಗಳನ್ನು ಪತ್ತೆಹಚ್ಚುವಲ್ಲಿ ಅವರ ನೇತೃತ್ವದಲ್ಲಿ ಜಿಲ್ಲಾ […]