ಉಡುಪಿ: ವಿದ್ಯಾ ಸರಸ್ವತಿ ಮಡಿಲಿಗೆ “ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್” ಅವಾರ್ಡ್

ಉಡುಪಿ: ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಮಂಗಳೂರಿನ ಮೋತಿ ಮಹಲ್ ಹೋಟೆಲ್ ನಲ್ಲಿ ಪ್ರತಿಷ್ಟಿತ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಉಡುಪಿಯ ಫ್ಯಾಷನ್ ತಾರೆ​ ವಿದ್ಯಾ ಸರಸ್ವತಿಯವರು ಚಾಣಕ್ಯ ಅವಾರ್ಡ್ಸ್ ವಿಭಾಗದ 2024 ನ “ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್” ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.​ ಈ ಪ್ರಶಸ್ತಿಯನ್ನು ” ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ “ಸಚಿವರಾದ ಶ್ರೀ ಶ್ರೀಪಾದ್ ನಾಯಕ್ ರವರ […]

ಬೆಳ್ತಂಗಡಿ: ಕಾಲೇಜು ವಿದ್ಯಾರ್ಥಿ ಅಸೌಖ್ಯದಿಂದ ಮೃತ್ಯು.

ಬೆಳ್ತಂಗಡಿ: ಉಜಿರೆ ಕಾಲೇಜಿನ ಯುವ ಪ್ರತಿಭೆ, ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಅಸೌಖ್ಯದಿಂದ ನ.12ರಂದು ನಿಧನ ಹೊಂದಿದ್ದರು. ಮೃತಪಟ್ಟ ಯುವಕ ಮಂಡ್ಯ ಮೂಲದ ಚಿನ್ಮಯ ಗೌಡ ಪಿ.ಕೆ. (18). ಅವರು ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದು, ಉಜಿರೆ ಖಾಸಗಿ ಕಾಲೇಜಿಗೆ ತೆರಳುತ್ತಿದ್ದರು. ಉತ್ತಮ ಕಬಡ್ಡಿ ಪಟುವಾಗಿದ್ದ ಅವರು ಕಾಲೇಜಿಗೆ ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಟ್ಟಿದ್ದರು. ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫ‌ಲಿಸದೆ ಮಂಗಳವಾರ ಮೃತಪಟ್ಟರು. ಅವರು ತಂದೆ, ತಾಯಿಯನ್ನು […]

ಪರಶುರಾಮ ಥೀಮ್ ಪಾರ್ಕ್ ವಂಚನೆ ಪ್ರಕರಣ: ಶಾಸಕರನ್ನು ಬಂಧಿಸುವ ಪ್ರಮೇಯ ಬರಬಹುದು- ಮುನಿಯಾಲು ಉದಯಕುಮಾರ್ ಶೆಟ್ಟಿ

ಉಡುಪಿ: ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನಿರ್ಮಿತಿ ಕೇಂದ್ರದ ಇಂಜಿನಿಯರ್, ಅಧಿಕಾರಿಗಳು ಹಾಗೂ ಶಾಸಕರನ್ನು ಬಂಧಿಸುವ ಪ್ರಮೇಯ ಬರಬಹುದು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಕಾರ್ಕಳ ಪರಶುರಾಮ ಮೂರ್ತಿ ರಚಿಸಿದ ಕಲಾವಿದ ಕೃಷ್ಣ ನಾಯ್ಕ್ ಬಂಧನ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಬಡಪಾಯಿ ಕಲಾವಿದ ಕೃಷ್ಣನಾಯ್ಕ್ ನನ್ನು ಬಂಧಿಸಲಾಗಿದೆ. ಆದರೆ, ಕಣ್ಮರೆಯಾದ ಅರ್ಧ ಪರಶುರಾಮನ ಅರ್ಧ ಮೂರ್ತಿ ಎಲ್ಲಿದೆ?. ಸುಟ್ಟು […]

ಬ್ರಹ್ಮಾವರ ಲಾಕಪ್ ಡೆತ್ ಪ್ರಕರಣ; ಎಸ್ ಐ ಸಹಿತ ಇಬ್ಬರ ಅಮಾನತು

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಬ್ರಹ್ಮಾವರ ಠಾಣೆ ಎಸ್ ಐ ಸೇರಿದಂತೆ ಇಬ್ಬರನ್ನು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ.ಅರುಣ್ ಕೆ. ಅಮಾನತುಗೊಳಿಸಿ ಆದೇಶ ನೀಡಿದ್ದಾರೆ. ಕೇರಳದ ಕೊಲ್ಲಂ ಮೂಲದ ಆರೋಪಿ ಬಿಜು ಮೋನು(45)ನನ್ನು ಪೊಲೀಸರು ಬ್ರಹ್ಮಾವರ ಠಾಣೆಗೆ ಕರೆದುಕೊಂಡು ಬಂದು, ಆತನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಚೇರ್ಕಾಡಿ ಗ್ರಾಮದ ಮಹಿಳೆಗೆ ಕಿರುಕುಳ ನೀಡಿದ ಆರೋಪ ಬಿಜು ಮೋನು ಮೇಲಿತ್ತು. ಈ ಪ್ರಕರಣಕ್ಕೆ […]

ಧರ್ಮಸ್ಥಳ: ನ.26 ರಿಂದ ಡಿ.1 ರವರೆಗೆ ಧರ್ಮಸ್ಥಳ ಕ್ಷೇತ್ರದಲ್ಲಿ ಅದ್ದೂರಿ ಲಕ್ಷದೀಪೋತ್ಸವ ಆಚರಣೆ

ಧರ್ಮಸ್ಥಳ: ಕಾರ್ತಿಕ ಮಾಸದಲ್ಲಿ ಧರ್ಮಸ್ಥಳದಲ್ಲಿ ಜರುಗುವ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಈ ವರ್ಷ ನ.26 ರಿಂದ ಡಿ.1 ರವರೆಗೆ ಅದ್ದೂರಿಯಾಗಿ ನಡೆಯಲಿದೆ. ನ.26ರಂದು ಹೊಸಕಟ್ಟೆ ಉತ್ಸವ, 27ರಂದು ಕೆರೆಕಟ್ಟೆ ಉತ್ಸವ, 28ರಂದು ಲಲಿತೋದ್ಯಾನ ಉತ್ಸವ, 29ರಂದು ಕಂಚಿಮಾರುಕಟ್ಟೆ ಉತ್ಸವ, 30ರಂದು ಗೌರಿಮಾರುಕಟ್ಟೆ ಉತ್ಸವ (ಲಕ್ಷದೀಪೋತ್ಸವ), ಡಿ.1ರಂದು ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣಪೂಜೆ ನಡೆಯಲಿದೆ. ನ.26ರಂದು ಮಧ್ಯಾಹ್ನ 3 ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ 25,000ಕ್ಕೂ ಹೆಚ್ಚು ಭಕ್ತರು ಮತ್ತು ಅಭಿಮಾನಿಗಳು ಪಾದಯಾತ್ರೆಯಲ್ಲಿ ಪ್ರಾರ್ಥನೆ, ಭಜನೆ ಹಾಗೂ ಶಿವಪಂಚಾಕ್ಷರಿ ಪಠಣದೊಂದಿಗೆ ಆಗಮಿಸಲಿದ್ದಾರೆ. […]