ನ.18ರಂದು ಉಡುಪಿಯಲ್ಲಿ ‘ಕನಕದಾಸರ 537ನೇ ಜಯಂತಿ ಮಹೋತ್ಸವ’, 351 ಕುಂಭ ಕಳಸ ಮೆರವಣಿಗೆ

ಉಡುಪಿ: ಉಡುಪಿ ಶ್ರೀ ಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಹಾಗೂ ಉಡುಪಿ ಜಿಲ್ಲಾ ಶ್ರೀ ಕನಕದಾಸ ಸಮಾಜ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ “ಕನಕದಾಸರ 537ನೇ ಜಯಂತಿ ಮಹೋತ್ಸವ” ಹಾಗೂ 351 ಕುಂಭ ಕಳಸ ಮೆರವಣಿಗೆ ಇದೇ ನ. 18ರಂದು ಉಡುಪಿಯಲ್ಲಿ ನಡೆಯಲಿದೆ ಎಂದು ಸಂಘದ ಖಜಾಂಚಿ ವಗೇನಪ್ಪ ಎಳಮಲಿ ತಿಳಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11ಗಂಟೆಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪ್ರಭಾವತಿ ಕೆ.ಆರ್. ಕುಂಭ […]

ನ.16, 17ರಂದು ಉಡುಪಿಯ ಕುಂತಳನಗರದಲ್ಲಿ ‘ಬೃಹತ್ ಉದ್ಯೋಗ ಮೇಳ’

ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್, ಕುಂತಳನಗರ ಇದರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ವತಿಯಿಂದ ಎಂಆರ್ ಜಿ ಗ್ರೂಪ್ ನ ಪ್ರಾಯೋಜಕತ್ವದಲ್ಲಿ ಸತತ 3ನೇ ಬಾರಿಗೆ ಎರಡು ದಿನಗಳ ‘ಬೃಹತ್ ಉದ್ಯೋಗ ಮೇಳ’ ವನ್ನು ಇದೇ ನವೆಂಬರ್ 16 ಮತ್ತು 17ರಂದು ಮಣಿಪುರ ಗ್ರಾಮದ ಕುಂತಳನಗರದ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ ಎಂದು ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ತಿಳಿಸಿದರು. ಉಡುಪಿಯಲ್ಲಿ ಇಂದು […]

ಉಡುಪಿ: ನ.16ರಂದು “ಗೋವಿಂದ ಪೈ ಸಂಶೋಧನ ಸಂಪುಟ-1″ಕೃತಿಯ ಬಿಡುಗಡೆ ಸಮಾರಂಭ

ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಮಾಹೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ‘ಗೋವಿಂದ ಪೈ ಸಂಶೋಧನ ಸಂಪುಟ-1’ ಕೃತಿಯ ಬಿಡುಗಡೆ ಸಮಾರಂಭ ಇದೇ ನ.16ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಕೃತಿ […]

ರಾಜ್ಯದಲ್ಲಿರುವುದು ಮುಸ್ಲಿಂ ಸರಕಾರ; ಶಾಸಕ ಸುನಿಲ್ ಕುಮಾರ್ ಟೀಕೆ

ಉಡುಪಿ: ಸಿದ್ದರಾಮಯ್ಯ ಅವರಿಂದ ಮುಸಲ್ಮಾನರ ತುಷ್ಟಿಕರಣ ಇದೇ ಮೊದಲೇನಲ್ಲ. ಅವರಿಗೆ ಮುಸಲ್ಮಾನರ ಋಣ ತೀರಿಸಬೇಕು‌ ಅನಿಸುತ್ತೆ. ಪರಿಶಿಷ್ಟ ಜಾತಿ- ಪಂಗಡ ಮತ್ತು ಒಬಿಸಿ ವರ್ಗಕ್ಕೆ ಈ ಸರ್ಕಾರದಿಂದ ನ್ಯಾಯ ಸಿಗಲ್ಲ. ಕಳೆದ ಬಾರಿ ಟಿಪ್ಪು ಜಯಂತಿ ಆಚರಣೆ ಮಾಡಿದರು. ಈ ಬಾರಿ ವಕ್ಫ್ ಆಸ್ತಿಗೆ ಬೇಲಿ ಹಾಕಲು ಹೊರಟಿದ್ದಾರೆ ಎಂದು ಶಾಸಕ ಸುನಿಲ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗ ಮುಂದುವರೆದು ಸರಕಾರಿ ಕಾಮಗಾರಿಯಲ್ಲೂ ಮುಸಲ್ಮಾನರಿಗೆ ಮೀಸಲಾತಿ […]

ಮಹಾರಾಷ್ಟ್ರ:ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಸಮಾಜ ಸೇವಾ ಮಾಣಿಕ್ಯ ರಾಷ್ಟೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಮಹಾರಾಷ್ಟ್ರ: ತುಳುಕೂಟ ಪುಣೆ (ರಿ)ವತಿಯಿಂದ ಬೊಳ್ಳಿ ಪರ್ಬ-2024 ತುಳುನಾಡ ಜಾತ್ರೆ ತುಳುಕೂಟ ರಜತ ಸಂಭ್ರಮದ ಕಾರ್ಯಕ್ರಮದಲ್ಲಿ ಕಾಪುವಿನ ಸಮಾಜ ಸೇವಕ ಹತ್ತಾರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿ ತನ್ನದೆ ಆದ ರೀತಿಯಲ್ಲಿ ಜನರಿಗೆ ಸಹಾಯ ಮಾಡುತ್ತ ದೇಶ-ವಿದೇಶದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದು ಬಟರ್ ಫ್ಲೈ ಗೆಸ್ಟ್ ಹೌಸ್ ಇದರ ಆಡಳಿತ ನಿರ್ದೇಶಕರಾದ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರ ಸಮಾಜ ಸೇವೆಯನ್ನು ಪರಿಗಣಿಸಿ ಕೊಡಲ್ಪಡುವ ಸಮಾಜ ಸೇವಾ ಮಾಣಿಕ್ಯ ರಾಷ್ಟೀಯ ಪ್ರಶಸ್ತಿಯನ್ನು ಪುಣೆಯ ಬಾಣೆರ್ ನ […]