ಉಡುಪಿ:ವ್ಯಕ್ತಿ ನಾಪತ್ತೆ

ಉಡುಪಿ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಉಡುಪಿ ತಾಲೂಕು ಬಡಗಬೆಟ್ಟು ಗ್ರಾಮದ ನಿವಾಸಿ ಗಣಪತಿ ನಾಯ್ಕ್ (54) ಎಂಬ ವ್ಯಕ್ತಿಯು ಅಕ್ಟೋಬರ್ 13 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 3 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ತುಳು ಹಾಗೂ ಮರಾಠಿ ಭಾಷೆಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಐ ಮೊ.ನಂ:9480805448, ಪಿ.ಎಸ್.ಐ ಮೊ.ನಂ: 9480805475 ಹಾಗೂ ಉಡುಪಿ ಕಂಟ್ರೋಲ್ ರೂಂ : 0820-2526444 […]

ಬೈಂದೂರು:ವ್ಯಕ್ತಿ ನಾಪತ್ತೆ

ಉಡುಪಿ: ಪಾರ್ಶ್ವವಾಯು ರೋಗದಿಂದ ಬಳಲುತ್ತಿದ್ದ ಬೈಂದೂರು ತಾಲೂಕು ಮುದೂರು ಗ್ರಾಮದ ಶಂಕರಮುಖ ಎಂಬಲ್ಲಿಯ ತೆಲಾಯಿಲ್ ಮನೆಯ ನಿವಾಸಿ ಜಯಕುಮಾರ್ (58) ಎಂಬ ವ್ಯಕ್ತಿಯು ನವೆಂಬರ್ 7 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 4 ಇಂಚು ಎತ್ತರ, ಬಿಳಿ ಮೈಬಣ್ಣ, ಕೋಲು ಮುಖ, ಸಾಧಾರಣ ದೃಢಕಾಯ ಶರೀರ ಹೊಂದಿದ್ದು, ತಮಿಳು, ಹಿಂದಿ ಹಾಗೂ ಮಳೆಯಾಳಂ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ಠಾಣೆ ದೂ.ಸಂಖ್ಯೆ: 08254-258233, 9480805460, ಬೈಂದೂರು […]

ಮಂದಾರ್ತಿ:ಉಡುಪಿ ಜಿಲ್ಲಾ ಸಹಕಾರ ಸಪ್ತಾಹ ಉದ್ಘಾಟನಾ ಕಾರ್ಯಕ್ರಮ:

ಮಂದಾರ್ತಿ:”ವಿಕಸಿತ ಭಾರತ”ವೆಂದರೆ ಅದೊಂದು ಪ್ರತಿ ಕುಟುಂಬದ ಬದುಕನ್ನು ಸಮೃದ್ಧಿ ಗೊಳಿಸುವ ಅಭಿಯಾನದ ಪರಿಕಲ್ಪನೆ.ವಿಕಸಿತ ಭಾರತದಲ್ಲಿ ಬಡತನ ನಿರುದ್ಯೋಗ ತೊಡೆದು ಹಾಕಿ ದೇಶದಲ್ಲಿ ಆಧುನಿಕ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವುದೇ ಸುಂದರವಾದ ಪರಿಕಲ್ಪನೆ. ಇದನ್ನು ನಾವು ಸಾಧಿಸಬೇಕಾದರೆ ನಮ್ಮ ಮೊದಲ ಆದ್ಯತಾ ವಲಯವಾಗಿ ಸಹಕಾರ ಕ್ಷೇತ್ರವನ್ನು ಒಪ್ಪಿಕೊಂಡು ನಡೆಯಬೇಕಾದ ಅನಿವಾರ್ಯತೆ ಇದೆ.ಬರೇ ಕೈಗಾರಿಕೆ ಉದ್ಯಮವನ್ನೆ ಬೆಳೆಸುವುದರ ಮೂಲಕ ವಿಕಸಿತ ಭಾರತದಲ್ಲಿ ಹಸಿವು ನಿರುದ್ಯೋಗ ತೊಡೆದು ಹಾಕಲು ಸಾಧ್ಯವಿಲ್ಲ.ಪ್ರತಿಯೆಾಬ್ಬ ವ್ಯಕ್ತಿಯ ತಲಾ ಆದಾಯ ಹೆಚ್ಚಿಸುವಲ್ಲಿ ಈ ಸಹಕಾರ ವ್ಯವಸ್ಥೆಯನ್ನು ಗ್ರಾಮೀಣ ಮಟ್ಟದಿಂದ […]

ನ.16ರಿಂದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ “ರಂಗಭಾಷೆ” ಕಾರ್ಯಾಗಾರ

ಉಡುಪಿ: ರಂಗಭೂಮಿ ಉಡುಪಿ ಆಶ್ರಯದಲ್ಲಿ ಯಕ್ಷ ರಂಗಾಯಣ ಕಾರ್ಕಳ ಹಾಗೂ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇದರ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ “ರಂಗಭಾಷೆ” ನಾಕಟವೆಂದರೆ ಏನು, ಯಾಕೆ ಮತ್ತು ಹೇಗೆ? ಎಂಬ ರಂಗ ಕಾರ್ಯಾಗಾರ ಮತ್ತು ಕಿರು ನಾಟಕಗಳ ಉತ್ಸವವನ್ನು ಇದೇ ನ.16ರಿಂದ 18ರ ವರೆಗೆ ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಭೂಮಿ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.16ರಂದು ಬೆಳಿಗ್ಗೆ 11ಗಂಟೆಗೆ […]

ಉಡುಪಿ: ನ.17ರಂದು “ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ: ಯಕ್ಷಗಾನ ಕಲಾರಂಗ ಉಡುಪಿ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 2024ನೇ ಸಾಲಿನ “ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭ” ಇದೇ ನ.17ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯ ಶಾರದಾ ಮಂಟಪ ರಸ್ತೆಯಲ್ಲಿರುವ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, […]