ಉಡುಪಿ: ರಾಷ್ಟೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ವಿವಿಧ ಹುದ್ದೆಗಾಗಿ ಅರ್ಜಿ ಆಹ್ವಾನ

ಉಡುಪಿ: ಜಿಲ್ಲೆಯ ರಾಷ್ಟೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿಯಿರುವ ಹೆರಿಗೆ ತಜ್ಞರು-01 ಹುದ್ದೆ, ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರದಲ್ಲಿ 5 ಹಾಗೂ ಕಾರ್ಕಳದಲ್ಲಿ 1 ಸೇರಿದಂತೆ ಒಟ್ಟು ವೈದ್ಯಾಧಿಕಾರಿಗಳು-06 ಹುದ್ದೆ, ಆಡಿಯೋಮೆಟ್ರಿಕ್ ಅಸಿಸ್ಟೆಂಟ್ -01 ಹುದ್ದೆ, ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವ ಯಂಗ್ ಹಿಯರಿಂಗ್ ಇಂಪೈರಡ್ ಚಿಲ್ಡ್ರನ್ ಇನ್ಸ್ ಟ್ರಕ್ಟರ್ -01 ಹುದ್ದೆ ಹಾಗೂ ಉಡುಪಿಯ ನಗರ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಎಲ್.ಹೆಚ್.ವಿ-1 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು […]
ಡಿ.7 ರಿಂದ ಕಟೀಲು ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ; ಒಟ್ಟು 1002 ಸೇವೆಯಾಟ ಪ್ರದರ್ಶನ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ ಡಿ. 7 ರಿಂದ ಪ್ರಾರಂಭವಾಗಲಿದೆ. ಸಂಜೆ 5.15 ಗಂಟೆಗೆ ದೇವಸ್ಥಾನದಲ್ಲಿ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6.45 ರಿಂದ ಕಲಾವಿದರಿಗೆ ಗೆಜ್ಜೆ ಹಸ್ತಾಂತರ, ರಾತ್ರಿ 8.30ಕ್ಕೆ ಚೌಕಿ ಪೂಜೆ, ಬಳಿಕ ಆರು ರಂಗಸ್ಥಳಗಳಲ್ಲಿ ಏಕಕಾಲಕ್ಕೆ ಪೂರ್ವರಂಗ ಪ್ರದರ್ಶನ, 10.30ಕ್ಕೆ ಪಾಂಡವಾಶ್ವಮೇಧ ಯಕ್ಷಗಾನ ಬೆಳಗ್ಗಿನ ಜಾವದವರೆಗೆ ನಡೆಯಲಿದೆ ಎಂದು ಕಟೀಲು ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಈ […]
ಉಡುಪಿಯಲ್ಲಿ ಅಗಲಿದ ಅರ್ಜುನ ಆನೆಗೆ ಶ್ರದ್ಧಾಂಜಲಿ

ಉಡುಪಿ: ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ನಗರದ ಮಾರುತಿ ವೀಥಿಕಾದಲ್ಲಿ ಮಂಗಳವಾರ ನಡೆಯಿತು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಅಗಲಿದ ಆನೆ ಅರ್ಜುನನಿಗೆ ಮೌನ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅರಣ್ಯಅಧಿಕಾರಿಗಳು, ನಾಗರಿಕ ಸಮಿತಿಯ ಕಾರ್ಯಕರ್ತರು, ಪ್ರಾಣಿಪ್ರೀಯರು, ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಉಪ ವಲಯ ಅರಣ್ಯಾಧಿಕಾರಿಗಳಾದ ಗುರುರಾಜ್, ಜೀವನದಾಸ್, ಗಸ್ತು ಅರಣ್ಯ ಪಾಲಕರಾದ ಕೇಶವ ಪೂಜಾರಿ, ಚರಣ್ […]
ಡಿ. 11 ರಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹುದ್ದೆಗೆ ನೇರ ಸಂದರ್ಶನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಷ್ಟೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಸರ್ವೇಕ್ಷಣಾ ಘಟಕದಐ.ಡಿ.ಎಸ್.ಪಿ ಕಾರ್ಯಕ್ರಮದಲ್ಲಿ ಕುಂದಾಪುರದ ಸಾರ್ವಜನಿಕ ಆರೋಗ್ಯ ಘಟಕಕ್ಕೆ ಅಗತ್ಯವಿರುವ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಡಿಸೆಂಬರ್ 11 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರ ವರೆಗೆ ನಗರದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಸ್ನಾತಕೋತ್ತರ ಪದವಿಯೊಂದಿಗೆ ವೈದ್ಯಕೀಯ ಪದವೀಧರರು/ ಪ್ರಿವೆಂಟಿವ್ ಮತ್ತು ಸೋಶಿಯಲ್ ಮೆಡಿಸಿನ್‌ನಲ್ಲಿ ಡಿಪ್ಲೊಮಾ/ ಸಾರ್ವಜನಿಕ ಆರೋಗ್ಯ ಅಥವಾ ಸಾಂಕ್ರಾಮಿಕ ರೋಗ ಶಾಸ್ತ್ರ […]
ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

ಕುಂದಾಪುರ: ಡಿ. 5ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಟ್ರಸ್ಟ್ ನ ಅಧ್ಯಕ್ಷ ಗುರೂಜಿ ಶಾಂತಾರಾಮ್ ಭಂಡಾರ್ಕರ್ ಮಾತನಾಡಿ, ಪ್ರತಿದಿನವು ಇತರರನ್ನು ಗೆಲ್ಲಿಸಿ. ನಿತ್ಯವೂ ಮನೆ ಮನಸು ಕನಸಿನಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಇತರರು ಜಯ ಗಳಿಸಬೇಕು. ನಿಮಗೂ ಬದುಕಿನಲ್ಲಿ ಸಾರ್ಥಕತೆಯ ಅನುಭವವಾಗುತ್ತದೆ. ಆಗ ಜಗತ್ತು ನಿಮ್ಮ ವಶವಾಗುತ್ತದೆ. ಪ್ರತಿ ವರ್ಷ ನಮ್ಮ ತಂದೆಯವರಾದ ಎ.ಎಸ್.ಭಂಡಾರ್ಕಾರ್ ಅವರ ಸಂಸ್ಮರಣೆ ಮಾಡುವ ನಿಮಗೆ ಚಿರುಋಣಿ […]