ಡಿ. 10-11 ರಂದು ಹೆರಂಜೆ ಕಂಬಳಗದ್ದೆಯಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡೋತ್ಸವ ಹಾಗೂ ಕಂಬಳ

ಹೆರಂಜೆ: ಹೆರಂಜೆ ಜನ್ನಕಂಬಳ ಪಟ್ಟದ ರಜತ ಸಂಭ್ರಮ ಪ್ರಯುಕ್ತ ಹೆರಂಜೆ ಕಂಬಳಗದ್ದೆಯಲ್ಲಿ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡೋತ್ಸವವು ಡಿ.10 ರಂದು ನಡೆಯಲಿದೆ. ಸಂಜೆ 7 ರಿಂದ ಜನ್ಸಾಲೆ ರಾಘವೇಂದ್ರ ಆಚಾರ್ ಸಾರಥ್ಯದಲ್ಲಿ “ಚೂಡಾಮಣಿ” ಯಕ್ಷಗಾನ ಪ್ರದರ್ಶನ. ಡಿ.11 ರಂದು ಹೆರಂಜೆ ಜನ್ನ ಕಂಬಳ ನಡೆಯಲಿದೆ.
ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಗೋಕರ್ಣ ಪರ್ತಗಾಳಿ ಮಠಾಧೀಶರ ಭೇಟಿ

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಗುರುವಾರದಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾದೀಶ ಶ್ರೀಪಾದ ವಡೇರ್ ಸ್ವಾಮೀಜಿಯವರು ಪ್ರಥಮ ಬಾರಿಗೆ ಭೇಟಿ ನೀಡಿದರು. ಪೂರ್ಣಕುಂಭ ಮಂಗಳ ವಾದ್ಯದೊಂದಿಗೆ ಸ್ವಾಮೀಜಿಯವರನ್ನು ಸ್ವಾಗತಿಸಲಾಯಿತು. ದೇವಳದ ವತಿಯಿಂದ ಪಾದಪೂಜೆ, ಗೌರವಾರ್ಪಣೆ ಮತ್ತು ಗುರುಕಾಣಿಕೆ ಸಮರ್ಪಿಸಲಾಯಿತು. ತಮ್ಮ ಆಶೀರ್ವಚನದಲ್ಲಿ ಸ್ವಾಮಿಗಳು ಮಾತನಾಡಿ, ದೇವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳುತ್ತಾ ಸ್ವಾರ್ಥಿಯಾಗುವ ಬದಲು ಭಕ್ತರು ದೇವರ ಬಗ್ಗೆ ಚಿಂತಿಸಿ ಪರರ ಸೇವೆ ಮಾಡಬೇಕು. ದೇವಳದ ಜಿರ್ಣೋದ್ಧಾರದಿಂದ ಊರು, ರಾಜ್ಯ, ರಾಷ್ಟ್ರ ಉದ್ದಾರವಾಗುತ್ತದೆ. ದೇವಳದ […]
ಸ್ಪಂದನಾ ಟ್ರಸ್ಟ್ ನ 51 ನೇ ವಾರ್ಷಿಕೋತ್ಸವ ಆಚರಣೆ

ಮಂಗಳೂರು: ಸ್ಪಂದನಾ ಟ್ರಸ್ಟ್ ಇನ್ಫೆಂಟ್ ಮೇರಿಸ್ ಕಾನ್ವೆಂಟ್ ಜೆಪ್ಪು ಇದರ 51 ನೇ ವಾರ್ಷಿಕೋತ್ಸವವನ್ನು ಹಾಗೂ ಕ್ರಿಸ್ಮಸ್ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಭಗಿನಿ ಸಿಲ್ವಿಯಾ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯು ಮಕ್ಕಳ ಹಾಗೂ ಕುತುಂಬದ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ಅಭಿವೃದ್ದಿ ಕಾರ್ಯಕ್ರಮಗಳನ್ನು ಆಯೋಜಿಸಿ ಹಾಗೂ ಸರಕಾರದಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡಿ ಎಲ್ಲರನ್ನೂ ಸ್ವಾವಲಂಬಿಗಳಾಗಿಸುವುದು ಸಂಸ್ಥೆಯ ಉದ್ದೇಶ ಎಂದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೆನೆಪೋಯ ಮೆಡಿಕಲ್ ಕಾಲೇಜ್ ನ ಪ್ರಾಧ್ಯಾಪಕ ಸಿಡ್ನಿ ಡಿ’ಸೋಜ, […]
ಕಲಾವಿದೆ ಲಿಖಿತ ಶೆಟ್ಟಿ ಇವರಿಗೆ ಕನಸು ಕಾರ್ತಿಕ್ ಸ್ಮರಣಾರ್ಥ ಯುವರಂಗ ಪುರಸ್ಕಾರ ಪ್ರದಾನ

ಬೈಂದೂರು: ಯಾವ ಊರಿನಲ್ಲಿ ಸಂಸ್ಕೃತಿ ಬೆಳೆಯುತ್ತದೋ ಆ ಊರು ಅಭಿವೃದ್ಧಿಯಾಗುತ್ತದೆ, ಸಂಸ್ಕೃತಿಯನ್ನು ನಾಶ ಮಾಡಿದ ಊರು ಅಥವಾ ನಶಿಸುತ್ತದೆ ಎಂದು ಖ್ಯಾತ ರೇಡಿಯೋ ನಿರೂಪಕಿ, ಲೇಖಕಿ ಆರ್ ಜೆ ನಯನ ಹೇಳಿದರು. ಅವರು ಬೈಂದೂರು ತಾಲೂಕಿನ ಅರೆಹೊಳೆಯ ನಂದಗೋಕುಲ ರಂಗಶಾಲೆಯಲ್ಲಿ ನಡೆದ ಕನಸು ಕಾರ್ತಿಕ್ ಯುವ ರಂಗ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಕನಸು ಕಾರ್ತಿಕ್ ನೆನಪಿನಲ್ಲಿಅರೆ ಹೊಳೆಪ್ರತಿಷ್ಠಾನ, ಮಂದಾರ (ರಿ.) ಬೈಕಾಡಿ, ರಂಗಪಯಣ (ರಿ.) ಬೆಂಗಳೂರು ಹಾಗೂ ಜನಪ್ರತಿನಿಧಿ ಪತ್ರಿಕೆ ಕುಂದಾಪುರ, ಜಂಟಿಯಾಗಿ ಆಯೋಜಿಸಿದ್ದ ಅರೆಹೊಳೆ […]
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿತಿ ಸ್ಥಿರ

ಹೈದರಾಬಾದ್: ತೆಲಂಗಾಣ ಮಾಜಿ ಮುಖ್ಯಮಂತ್ರಿ ಹಾಗೂ ಭಾರತ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ಅವರು ಕಳೆದ ರಾತ್ರಿ ತಮ್ಮ ತೋಟದ ಮನೆಯಲ್ಲಿ ಕುಸಿದು ಬಿದ್ದು ಗಾಯಗೊಂಡಿದ್ದಾರೆ. ಕೆಸಿಆರ್ ಅವರನ್ನು ತಕ್ಷಣವೇ ಹೈದರಾಬಾದ್‌ನ ಯಶೋಧಾ ಆಸ್ಪತ್ರೆಗೆ ದಾಖಲಿಸಲಾಗಿದೆ ಗುರುವಾರ ಎರ್ರವಳ್ಳಿ ತೋಟದ ಮನೆಯಲ್ಲಿ ರಾವ್ ಕಾಲು ಜಾರಿ ಕೆಳಗೆ ಬಿದ್ದಿದ್ದರು. ಬಿದ್ದ ನಂತರ ಅವರ ಎಡ ಸೊಂಟದ ಮೂಳೆ ಮುರಿದಿದೆ ಎಂದು ವರದಿಯಾಗಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿಯವರಿಗೆ ವೈದ್ಯರು ಕೆಲವು ಪರೀಕ್ಷೆಗಳನ್ನು […]