ಕುಂದಾಪುರ: ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ‘MITK AI VISION 24H’ ರಾಷ್ಟ್ರಮಟ್ಟದ ಹ್ಯಾಕಥಾನ್ಗೆ ಚಾಲನೆ

ಕುಂದಾಪುರ: ಸ್ಥಳೀಯ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನ ಆಡಿಟೋರಿಯಂನಲ್ಲಿ ಶುಕ್ರವಾರ, ಅಕ್ಟೋಬರ್ 9 ರಂದು ‘ಐಡಿಯಾಸ್ ಟುಡೇ, ಇಂಪ್ಯಾಕ್ಟ್ ಟುಮಾರೋ’ ಎಂಬ ಧ್ಯೇಯವಾಕ್ಯದೊಂದಿಗೆ ‘MITK AI VISION 24H’ 24-ಗಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ಉದ್ಘಾಟನಾ ಸಮಾರಂಭವು ಅದ್ಧೂರಿಯಾಗಿ ನೆರವೇರಿತು. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಕಾಮ್ವಾಲ್ಟ್ ಸಂಸ್ಥೆಯ ಡಾಟಾ ಇವಾಂಜೆಲಿಸ್ಟ್ ಪ್ರಶಾಂತ್ ಜಯರಾಮ್ ಉದ್ಘಾಟಿಸಿ ಮಾತನಾಡುತ್ತಾ, “ಪ್ರಸ್ತುತ ಕೈಗಾರಿಕಾ ಕ್ಷೇತ್ರದಲ್ಲಿ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆ ಕ್ರಾಂತಿಕಾರಿ ಬದಲಾವಣೆ ತರುತ್ತಿವೆ. ವಿದ್ಯಾರ್ಥಿ ಸಮೂಹವು ಕೇವಲ ಪಠ್ಯಕ್ಕೆ […]
ಮಾನಸಿಕ ಆರ್ಥಿಕ ಸಬಲತೆ ಮುಖ್ಯ- ಡಾ. ಕಂಠಿ

ಮಾನಸಿಕ ಆರೋಗ್ಯದ ಜೊತೆಗೆ ಆರ್ಥಿಕ ಸಬಲತೆ ಇದ್ದಾಗ ನಿವೃತ್ತಿ ಜೀವನ ಯಶಸ್ವಿಯಾಗುತ್ತದೆ ಎಂದು ಧರ್ಮಸ್ಥಳ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಗಿರಿಧರ ಕಂಠಿ ಹೇಳಿದರು. ಅಕ್ಸೆಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಏಜೆನ್ಸಿ ಪಾರ್ಟ್ನರ್ ಚಾನೆಲ್ನ ಸಹಯೋಗದಲ್ಲಿ ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆದ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.ನಿವೃತ್ತರಾದ ನಂತರ ಮನೆ ಸೇರುವುದನ್ನು ಬಿಟ್ಟು ಜನಜಾಗ್ರತಿ, ಜನರ ಸೇವೆ ಮಾಡಿದಾಗ ಸಮಾಜಕ್ಕೆ ಒಳಿತಾಗುತ್ತದೆ. ಜನರೊಂದಿಗೆ ಬೆರೆತಾಗ ಮನಸ್ಸು ಶುದ್ದಿ ಯಾಗುತ್ತದೆ ಎಂದರು.ಈ ಶುಭ ಸಂದರ್ಭದಲ್ಲಿ […]
ಉದ್ಯೋಗ ಹುಡುಕುವವರ ಬಳಿಗೇ ಉದ್ಯೋಗಾವಕಾಶ: ಯುವಜನರಿಗೆ ಡಾ. ಕೆ. ಪ್ರಕಾಶ್ ಶೆಟ್ಟಿ ಕರೆ

ಉಡುಪಿ: ಯುವಜನರು ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿದರೆ ಯಶಸ್ಸು ಖಚಿತ. ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶಗಳು ಬರುವಂತಹ ವಾತಾವರಣ ಇಂದು ನಿರ್ಮಾಣವಾಗುತ್ತಿದೆ ಎಂದು ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಯೋಗದಲ್ಲಿ ಹಾಗೂ ಎಂ.ಆರ್.ಜಿ. ಗ್ರೂಪ್ನ ಪ್ರಾಯೋಜಕತ್ವದಲ್ಲಿ ಕುಂತಳ ನಗರದ ಆಶಾ ಪ್ರಕಾಶ್ ಶೆಟ್ಟಿ […]
ಮಂಗಳೂರು: ಎರಡು ತಿಂಗಳಲ್ಲಿ ಬರೋಬ್ಬರಿ 43,200 ಮೆಟ್ರಿಕ್ ಟನ್ ಮೀನು ಇಳುವರಿ!

ಮಂಗಳೂರು: ಪ್ರಸ್ತುತ ಮೀನುಗಾರಿಕಾ ಋತು ಆರಂಭವಾಗಿ ಎರಡು ತಿಂಗಳು ಕಳೆದಿದ್ದು, ಪ್ರತಿಕೂಲ ಹವಾಮಾನದ ಆತಂಕದ ನಡುವೆಯೂ ಮೀನುಗಾರಿಕೆಯಲ್ಲಿ ತೃಪ್ತಿದಾಯಕ ಇಳುವರಿ ದೊರೆತಿದೆ ಎಂದು ಮೀನುಗಾರರು ತಿಳಿಸಿದ್ದಾರೆ. ಸಾಮಾನ್ಯವಾಗಿ ಎರಡು ತಿಂಗಳ ಮೀನುಗಾರಿಕಾ ನಿಷೇಧ ಮುಗಿದ ಬಳಿಕ ಹೆಚ್ಚಿನ ನಿರೀಕ್ಷೆಯೊಂದಿಗೆ ಕಡಲಿಗೆ ಇಳಿಯುವ ಮೀನುಗಾರರಿಗೆ ಈ ಬಾರಿ ಉತ್ತಮ ಇಳುವರಿ ದೊರೆತಿದೆ. ನಿಷೇಧಾವಧಿ ಮುಗಿದ ನಂತರ ಬಹುತೇಕ ಎಲ್ಲಾ ಬೋಟ್ಗಳು ತಮ್ಮ ಮೊದಲ ಮೀನುಗಾರಿಕಾ ಪ್ರವಾಸ ಕೈಗೊಂಡಿದ್ದು, ಆಳ ಸಮುದ್ರಕ್ಕೆ ತೆರಳಿದ ಬೋಟ್ಗಳಿಗೆ ಉತ್ತಮ ಪ್ರಮಾಣದಲ್ಲಿ ಮೀನು ಲಭ್ಯವಾಗಿದೆ. […]
ಮೂಡ್ಲಕಟ್ಟೆ ಐ ಎಂ ಜೆ ವಿದ್ಯಾಸಂಸ್ಥೆಗಳ ಆರೋಗ್ಯ ವಿಜ್ಞಾನ ವಿಭಾಗದ ಕೋರ್ಸುಗಳ ಓರಿಯೆಂಟೇಷನ್ ಕಾರ್ಯಕ್ರಮ

ಕುಂದಾಪುರ: ಮೂಡ್ಲಕಟ್ಟೆ ಐ ಎಂ ಜೆ ವಿದ್ಯಾಸಂಸ್ಥೆಗಳ ಆರೋಗ್ಯ ವಿಜ್ಞಾನ ವಿಭಾಗದ ಕೋರ್ಸುಗಳ ಓರಿಯೆಂಟೇಷನ್ ಕಾರ್ಯಕ್ರಮವನ್ನು 7ನೇ ಅಕ್ಟೋಬರ್ 2026 ರಂದು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ B.Sc. ನರ್ಸಿಂಗ್ನ 7ನೇ ಬ್ಯಾಚ್, ಅಲೈಡ್ ಹೆಲ್ತ್ ಸೈನ್ಸಸ್ನ 3ನೇ ಬ್ಯಾಚ್ ಹಾಗೂ ಫಿಸಿಯೋಥೆರಪಿಯ 2ನೇ ಬ್ಯಾಚ್ಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು.ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ನ ಪ್ರಾಂಶುಪಾಲರಾದ ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಸ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರೊ. […]