ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ: ಉಡುಪಿ ಜಿಲ್ಲೆಯ ನಿವಾಸಿ ಕೃಷ್ಣ ಪೂಜಾರಿ (57) ಎಂಬ ವ್ಯಕ್ತಿಯು ಮಾರ್ಚ್ 20 ರಂದು ಮನೆಯಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿರುತ್ತಾರೆ. ಕಪ್ಪು ಮೈಬಣ್ಣ, ದುಂಡು ಮುಖ ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಹಿಂದಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣಾ ದೂ.ನಂ: 0820-2537999, ಮಲ್ಪೆ ಪಿ.ಎಸ್.ಐ ಮೊ.ನಂ:9480805447 ಅಥವಾ ಉಡುಪಿ ವೃತ್ತ ನಿರೀಕ್ಷಕರ ಮೊ.ನಂ: 9480805430 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಲ್ಪೆ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ […]

ಕುಂದಾಪುರ: ಐದನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ಕುಂದಾಪುರ: ಇಲ್ಲಿನ ಅಪಾರ್ಟಮೆಂಟ್ ಒಂದರ ಐದನೇ ಮಹಡಿಯಿಂದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಿದ್ದು ಸಾವನಪ್ಪಿದ ಘಟನೆ ಹಳೇ ಗೀತಾಂಜಲಿ ಟಾಕೀಸ್ ಸಮೀಪ ನಡೆದಿದೆ. ಮೃತ ಮಹಿಳೆಯನ್ನು ಲಕ್ಷ್ಮೀ ಪ್ರತಾಪ್ ನಾಯಕ್ (41) ಎಂದು ಗುರುತಿಸಲಾಗಿದೆ. ಸಂಜೆ ವೇಳೆ ಫ್ಲ್ಯಾಟಿನ ಮಹಡಿಯ ಮೇಲೆ ಒಣಗಿಸಲು ಹಾಕಿದ್ದ ತೆಂಗಿನಕಾಯಿ ತರಲು ಹೋಗಿದ್ದ ಲಕ್ಷ್ಮೀ ಪ್ರತಾಪ್ ಆಕಸ್ಮಿಕವಾಗಿ ಮಹಡಿಗೆ ಅಳವಡಿಸಲಾಗಿದ್ದ ಫೈಬರ್ ಶೀಟ್ ಮೇಲೆ ಕಾಲಿಟ್ಟಿದ್ದರಿಂದ ಅದು ತುಂಡಾಗಿ ಎರಡನೇ ಮಹಡಿಯ ನೆಲದ ಮೇಲೆ ಬಿದ್ದಿದ್ದಾರೆನ್ನಲಾಗಿದೆ. ಇದರಿಂದ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದ […]

ಬನ್ನಂಜೆಯಲ್ಲಿ 16 ಸೆಂಟ್ಸ್ ಜಾಗ ಮಾರಾಟಕ್ಕಿದೆ

ಉಡುಪಿ: ಇಲ್ಲಿನ ಬಹು ಬೇಡಿಕೆಯ ಪ್ರದೇಶವಾದ ಬನ್ನಂಜೆಯಲ್ಲಿ ಸಿಂಗಲ್ ಲೇಔಟ್ ನ ಕರ್ವರ್ಶನ್ ಆಗಿರುವ 16 ಸೆಂಟ್ಸ್ (5 ಸೆಂಟ್ಸ್, 5 ಸೆಂಟ್ಸ್ ಮತ್ತು 6 ಸೆಂಟ್ಸ್) ಜಾಗ ಮಾರಾಟಕ್ಕಿದೆ. ಪ್ರತಿ ಸೆಂಟ್ಸ್ ಗೆ 7 ಲಕ್ಷರೂ. ಬಾವಿ ನೀರಿನ ಲಭ್ಯತೆ. ಉಡುಪಿ-ಮಣಿಪಾಲ ಮುಖ್ಯರಸ್ತೆಯಿಂದ 100 ಮೀ. ಅಂತರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448379989

ಕೋಟ ಶ್ರೀನಿವಾಸ ಪೂಜಾರಿಯವರಿಗೆ ಒಂದೇ ತಿಂಗಳಲ್ಲಿ ಉಚಿತವಾಗಿ ಇಂಗ್ಲಿಷ್ ಕಲಿಸಲು ಮುಂದೆ ಬಂದ ಬೆಳಗಾವಿಯ ಖ್ಯಾತ ಇಂಗ್ಲಿಷ್ ಟ್ರೈನರ್ !

ಬೆಳಗಾವಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಒಂದು ತಿಂಗಳಲ್ಲೇ ಇಂಗ್ಲಿಷ್ ಕಲಿಸುವುದಾಗಿ ಬೆಳಗಾವಿಯ ಖ್ಯಾತ ಇಂಗ್ಲಿಷ್ ಟ್ರೈನರ್ ಜಿ.ಎಲ್.ಮಂಜುನಾಥ ತಿಳಿಸಿದ್ದಾರೆ. ಮೂಲತಃ ಹಾಸನದವರಾಗಿರುವ ಬೆಳಗಾವಿಯಲ್ಲಿ ಕಳೆದ 20 ವರ್ಷಗಳಿಂದ ಟೈಮ್ ಇಂಗ್ಲಿಷ್ ಟ್ರೈನಿಂಗ್ ಅಕಾಡೆಮಿ ಮೂಲಕ ವಿದ್ಯಾರ್ಥಿಗಳು, ಉದ್ಯೋಗಾರ್ಥಿಗಳು ಹಾಗೂ ನಾಗರಿಕರಿಗೆ ಇಂಗ್ಲಿಷ್ ಕಲಿಸಿ ಕೊಟ್ಟು ಸಹಸ್ರಾರು ಜನರ ಬಾಳಿಗೆ ಆಶಾಕಿರಣವಾಗಿರುವ ಮಂಜುನಾಥ ಅವರು ಕೋಟ ಶ್ರೀನಿವಾಸ ಪೂಜಾರಿ ಅವರು ಯಾವುದೇ ಕಾರಣಕ್ಕೆ ಭಾಷೆಗಾಗಿ ಭಯಪಡಬೇಕಾಗಿಲ್ಲ, ನಾನು ಅವರಿಗೆ […]

ಇಂದು ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ‌ಮನ್ಮಹಾರಥೋತ್ಸವ

ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಶ್ರೀ ಮಹಿಷ ಮರ್ದಿನಿ ದೇವಿಯ ರಥೋತ್ಸವ ದಿ. 22 ರಿಂದ 27ರವರೆಗೆ ನಡೆಯಲಿದೆ. ಮಾ.25ರಂದು ಮಧ್ಯಾಹ್ನ 12ಕ್ಕೆ ರಥಾರೋಹಣ, ಅನ್ನಸಂತರ್ಪಣೆ, ಶ್ರೀ ದುರ್ಗಾದೇವಿ ಸಂಕೀರ್ತನ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ ‌8 ಗಂಟೆಗೆ ‌ಮನ್ಮಹಾರಥೋತ್ಸವ ನಡೆಯಲಿದೆ. ಹಾಗೂ ವೈವಿಧ್ಯಮಯ ಯಕ್ಷಗಾನ ವೇಷಗಳ ಮೆರವಣಿಗೆ, ಹಚ್ಚಡ ಸೇವೆ, ಉಂಡಾರು ಬಳಗದವರಿಂದ ಚಂಡೆ ವಾದನ ಹಾಗೂ ಸ್ಯಾಕ್ಸ್ ಫೋನ್ ಕಾರ್ಯಕ್ರಮಗಳು ನಡೆಯಲಿವೆ. ಮಾ.26ರಂದು ಬೆಳಗ್ಗೆ 7ಕ್ಕೆ ಕವಟೂದ್ಘಾಟನೆ, ತುಲಾಭಾರ ಸೇವೆ […]