ಹೂಗಳ ಮಧುರ ರಹಸ್ಯ: ಜೇನುತುಪ್ಪ ಹೇಗೆ ಸಿದ್ಧವಾಗುತ್ತದೆ ಬಲ್ಲಿರಾ? ಆಸಕ್ತಿಕರ ಮಾಹಿತಿ ಇಲ್ಲಿದೆ

ಆಹಾ! ಜೇನುತುಪ್ಪ ಎನ್ನುತ್ತಿದ್ದಂತೇ ಬಾಯಲ್ಲಿ ನೀರೂರುತ್ತದೆ. ತಿಳಿ ಹಳದಿ, ಚಿನ್ನದ ಬಣ್ಣದ ಜೇನುತುಪ್ಪ ತಿನ್ನಲು ಅದೆಷ್ಟು ರುಚಿಯೋ ಹಾಗೇ ಅಷ್ಟೇ ಆರೋಗ್ಯಕರವೂ ಹೌದು. ಆದರೆ ಈ ಜೇನುತುಪ್ಪ ಹೇಗೆ ತಯಾರಾಗುತ್ತದೆ ಅನ್ನುವುದರ ಬಗ್ಗೆ ಹಲವರಿಗೆ ಕುತೂಹಲವಿರುತ್ತದೆ. ಅದನ್ನೀಗ ತಿಳಿದುಕೊಳ್ಳೋಣ. ಜೇನುತುಪ್ಪ ವನ್ನು ಜೇನುನೊಣಗಳು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ತಯಾರಿಸುತ್ತವೆ. ಹೂವಿನ ಮಕರಂದ ಹೀರುವ ಜೇನುಹುಳಗಳು ಅದನ್ನು ತುಪ್ಪವನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಇಲ್ಲಿದೆ. ಪ್ರಕೃತಿಯಿಂದ ದೊರೆಯುವ ಪ್ರಕೃತಿ ಸಹಜವಾದ ಅಧಿಕ ಪೋಷಕಾಂಶವುಳ್ಳ ಜೇನುತುಪ್ಪ ತುಂಬಾ ಆರೋಗ್ಯಕರ. ಜೇನುನೊಣಗಳು ಇದನ್ನು ತಮ್ಮ […]
ಬೆಂಗಳೂರಿನ ಹೆಸರಘಟ್ಟದಲ್ಲಿರುವ ಸರ್ಕಾರಿ ಪೌಲ್ಟ್ರಿ ಫಾರಂನಲ್ಲಿ ಪತ್ತೆಯಾಯ್ತು ಬರ್ಡ್ ವೈರಸ್! ಚಿಕನ್ ಪ್ರಿಯರಿಗೆ ಅಲರ್ಟ್!

ಬೆಂಗಳೂರು: ಬೆಂಗಳೂರಿನ ಹೆಸರಘಟ್ಟದಲ್ಲಿರುವ ಸರ್ಕಾರಿ ಪೌಲ್ಟ್ರಿ ಫಾರಂನಲ್ಲಿ H5N1 (Bird Flu) ವೈರಸ್ ಪತ್ತೆಯಾಗಿದೆ. ಇದು ರಾಜ್ಯದಲ್ಲಿ ಆತಂಕ ಹುಟ್ಟಿಸಿದ್ದು, ತಕ್ಷಣವೇ ಫಾರಂ ಅನ್ನು ಮುಚ್ಚಲಾಗಿದೆ. ಫಾರಂನಲ್ಲಿದ್ದ ಕೋಳಿಗಳನ್ನು ಹತ್ಯೆ ಮಾಡಿ ನೆಲದಲ್ಲಿ ಹೂತು ವಿಲೇವಾರಿ ಮಾಡಲಾಗಿದೆ. ಸರ್ಕಾರದ ತುರ್ತು ಕ್ರಮಗಳು ವೈರಸ್ ಹರಡುವ ಬಗ್ಗೆ ಮಾಹಿತಿ ಜನರಿಗೆ ಸೂಚನೆಗಳು ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಹಕ್ಕಿ ಜ್ವರ (H5N1) ಪತ್ತೆಯಾದ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪ್ರಯತ್ನ ನಡೆಯುತ್ತಿದೆ, ಆದರೆ ಸಾರ್ವಜನಿಕರು […]
ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತಾ? ಇಲ್ಲಿದೆ ಆಶ್ಚರ್ಯಕರ ಸಂಗತಿ

ಬೈಕ್ ಸವಾರಿ ಮಾಡುವ ಪ್ರತಿಯೊಬ್ಬರಿಗೂ ಹೆಲ್ಮೆಟ್ ಅನಿವಾರ್ಯ. ಆದರೆ ಹಲವರಲ್ಲಿ ಒಂದು ಸಾಮಾನ್ಯ ಪ್ರಶ್ನೆ — “ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆಯಾ?” ಎಂಬುದು. ಈ ಬಗ್ಗೆ ಸಾಕಷ್ಟು ಮಿಥ್ಯೆಗಳು ಹರಿದಾಡುತ್ತಿವೆ. ಅನೇಕರು ಕೂದಲು ಉದುರುವಿಕೆಯ ಹೆದರಿಕೆಯಿಂದ ಹೆಲ್ಮೆಟ್ ಧರಿಸದೇ ವಾಹನ ಸವಾರಿ ಮಾಡಿ ಪ್ರಾಣಾಪಾಯ ತಂದುಕೊಮಡವರಿದ್ದಾರೆ. ಹಾಗಾದರೆ ನಿಜ ವಿಷಯವೇನು ಅನ್ನೋದನ್ನ ಇಲ್ಲಿ ತಿಳಿದುಕೊಳ್ಳೋಣ. ಹೆಲ್ಮೆಟ್‌ನಿಂದ ನೇರವಾಗಿ ಕೂದಲು ಉದುರುವುದಿಲ್ಲ ತಜ್ಞರ ಪ್ರಕಾರ, ಹೆಲ್ಮೆಟ್ ಧರಿಸುವುದರಿಂದ ನೇರವಾಗಿ ಕೂದಲು ಉದುರುವುದಿಲ್ಲ. ಆದರೆ ಕೆಲವು ಪರಿಸ್ಥಿತಿಗಳು ಕೂದಲಿನ ಆರೋಗ್ಯಕ್ಕೆ […]
ದಿನದ ಕೆಲವು ಸಮಯ ನಿಮ್ಮ ಮೊಬೈಲ್ ಸೈಲೆಂಟ್ ಮಾಡೋದ್ರಿಂದ ಎಷ್ಟೆಲ್ಲಾ ಉಪಯೋಗ ಇದೆ ನಿಮಗೆ ಗೊತ್ತಾ?

ಇಂದಿನ ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನವಿಲ್ಲದೇ ಬದುಕೇ ಅಸಾಧ್ಯ ಎಂಬ ಪರಿಸ್ಥಿತಿ ಬಂದೊದಗಿದೆ. ಕೆಲವರಿಗಂತೂ ಒಂದರೆಘಳಿಗೆಯೂ ಮೊಬೈಲ್ ಬಿಟ್ಟು ಇರಲು ಸಾಧ್ಯವೇ ಇಲ್ಲದಾಗಿದೆ. “ನೋಮೋಫೋಬಿಯಾ” ಎಂಬ ಹೊಸ ಖಾಯಿಲೆಯೂ ಶುರುವಾಗಿದೆ. ಇಂತಹಾ ಸಂದರ್ಭದಲ್ಲಿ ದಿನದ ಒಂದಷ್ಟು ಸಮಯ ಮೊಬೈಲ್ ಬಿಟ್ಟಿರುವುದು ಅಥವಾ ಸೈಲೆಂಟ್ ಮೋಡ್ ನಲ್ಲಿಡುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ತಿಳಿಯೋಣ. ನಿರಂತರ ರಿಂಗ್‌ಟೋನ್ ಹಾಗೂ ಮೆಸೇಜ್ ಅಲರ್ಟ್‌ಗಳು ಗಮನವನ್ನು ಬೇರೆಡೆಗೆ ಸೆಳೆಯುತ್ತವೆ. ನಮ್ಮ ಕೆಲಸವನ್ನು ಏಕಾಗ್ರತೆಯಿಂದ ಮಾಡುವುದನ್ನು ತಡೆಯುತ್ತವೆ. ಒತ್ತಡ ಕಡಿಮೆ ಮಾಡುವಲ್ಲಿ ಸಹಾಯಕ ನಿರಂತರ ನೋಟಿಫಿಕೇಶನ್‌ಗಳು […]
ದೇಹಕ್ಕೆ ಮತ್ತು ಆರೋಗ್ಯಕ್ಕೆ ಅಪಾಯಕಾರಿ ಸಿಂಥೆಟಿಕ್ ಬಟ್ಟೆ ಯಾವುದರಿಂದ ತಯಾರಾಗುತ್ತವೆ ಗೊತ್ತೇ?

ನಾವು ಧರಿಸುವ ಬಟ್ಟೆಗಳು ಕೇವಲ ನಮ್ಮ ದೇಹ ಮುಚ್ಚುವುದು ಮಾತ್ರವಲ್ಲದೇ, ದೇಹಕ್ಕೂ ಹಿತಕರವಾಗಿರಬೇಕು. ಹಾಗಾಗಿ ನಾವು ಹಾಕುವ ಬಟ್ಟೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ. ನೈಸರ್ಗಿಕವಾಗಿ ತಯಾರಿಸಲ್ಪಟ್ಟ ಹತ್ತಿಯ, ಕಾಟನ್ ಬಟ್ಟೆಗಳು ಎಲ್ಲಾ ಕಾಲಕ್ಕೂ ತಕ್ಕನಾಗಿದ್ದು, ಇದು ಹಿಂದಿನ ಕಾಲದಿಂದಲೂ ಇರುವ, ಎಲ್ಲರೂ ಇಷ್ಟ ಪಟುವ ಬಟ್ಟೆಯಾಗಿದೆ. ಆದರೆ ಈಗ ನಿರ್ವಹಣೆ ಸುಲಭ ಎಂಬ ಕಾರಣದಿಂದಾಗಿ ಸಿಂಥೆಟಿಕ್ (Synthetic) ಬಟ್ಟೆಗಳ ಬಳಕೆ ಹೆಚ್ಚಾಗಿದೆ. ಈ ಸಿಂಥೆಟಿಕ್ ಬಟ್ಟೆ, ಪ್ಲಾಸ್ಟಿಕ್ ಆಧಾರಿತ ನಾರುಗಳಿಂದ ತಯಾರಾಗುತ್ತವೆ. ಇವು ಫ್ಯಾಷನ್‌ಗೆ ಸುಲಭವಾದರೂ, ದೀರ್ಘಕಾಲ […]