ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ: ವಿಶ್ವ ಯೋಗ ದಿನಾಚರಣೆ
ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಶುಕ್ರವಾರ ವಿಶ್ವ ಯೋಗ ದಿನಾಚರಣೆಯನ್ನು ಜಗನ್ನಾಥ ಸಭಾಭವನದಲ್ಲಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ಲಿಸ್ ಯೋಗ ತರಬೇತಿ ಕೇಂದ್ರದ ತರಬೇತುದಾರರಾದ ಶ್ರೀಮತಿ ಸುಮನ ಶ್ರೀನಿವಾಸ್ ಯೋಗ ತರಬೇತಿಯನ್ನು ನಡೆಸಿಕೊಟ್ಟರು. ಯೋಗದಿಂದ ಅರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು. ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಪ್ರತಿಮ ವಿ. ಎಸ್ ಇವರು ವಿವಿಧ ಬಗೆಯ ಯೋಗ ಪ್ರತ್ಯಕ್ಷತೆಯನ್ನು ನೀಡಿ […]
ಪ್ರಕೃತಿ ಚಿಕಿತ್ಸೆ-ಯೋಗ ವಿಜ್ಞಾನ ವಿದ್ಯಾರ್ಥಿಗಳಿಂದ ಯೋಗ
ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ವತಿಯಿಂದ ಮಿಜಾರು ಶೋಭಾವನದ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ಬಾರಿಯ ಯೋಗ ದಿನಾಚರಣೆ ಧ್ಯೇಯ – ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಅಡಿಯಲ್ಲಿ ಕಾಲೇಜಿನ 400ಕ್ಕೂ ಅಧಿಕ ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಯೋಗ ಪ್ರೊಟೋಕಾಲ್ ನಿಯಮಾವಳಿ ಅನುಸಾರವಾಗಿ ತಾಡಾಸನ, ವೃಕ್ಷಸಾನ, ತ್ರಿಕೋನಾಸನ, ಅರ್ಧಚಕ್ರಾಸನ, ಇನ್ನಿತರ ಆಸನ ಮಾಡುವ ಮೂಲಕ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಿತು. ವಿದ್ಯಾರ್ಥಿ ಸ್ಫೂರ್ತಿ ಮೊಯ್ಲಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಕೃತಿ […]
ಜೂನ್ 21: ಉಡುಪಿ ಅಜ್ಜರಕಾಡಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ರಾಷ್ಟ್ರೀಯ ಸೇವಾ ಯೋಜನೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಹಾಗೂ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು “ಸ್ವಂತ ಮತ್ತು ಸಮಾಜಕ್ಕಾಗಿ ಯೋಗ” ಎಂಬ […]
ಇಂದು (ಜೂ.21)ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಣಿಪಾಲ MSDC ಯಲ್ಲಿ “ಉಚಿತ ಯೋಗ ಸೆಶನ್”.
ಮಣಿಪಾಲ: ಮಣಿಪಾಲ MSDC (ಡಾ. ಟಿ ಎಂ ಎ ಪೈ ಫೌಂಡೇಶನ್ ನ ಒಂದು ಘಟಕ) ಯಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಇಂದು ಬೆಳಗ್ಗೆ 9:30 ರಿಂದ 10:30 ರ ವರೆಗೆ ಉಚಿತ ಯೋಗ ಸೆಶನ್ ಆಯೋಜಿಸಿದೆ. ಯೋಗ ಸೆಶನ್ ಅನ್ನು ದೃಷ್ಟಿ ಯೋಗ ಕೇಂದ್ರದ ಸಂಸ್ಥಾಪಕಿ ಶ್ರೀಮತಿ ನಯನಾ ಶಾನಭೋಗ್ ಅವರು ನಡೆಸಲಿದ್ದಾರೆ, ಅವರು ಭಾರತ ಸರ್ಕಾರದ ಆಯುಷ್ ಸಚಿವಾಲಯವು ನಡೆಸಿದ ಯೋಗ ಬೋರ್ಡ್ ಪರೀಕ್ಷೆಯ ಹಂತ -1 ಅನ್ನು ಮಾಡಿದ್ದಾರೆ. ಆಸಕ್ತರು ದಯವಿಟ್ಟು […]
ರಾಷ್ಟ್ರೀಯ ಆಯುರ್ವೇದ ದಿನ-2023 ರ ಮುಖ್ಯ ಧ್ಯೇಯ ‘Ayurveda for One Health’
ಆಯುರ್ವೇದ ದಿನವನ್ನು 10ನೇ ನವೆಂಬರ್ 2023 ರಂದು ಆಚರಿಸಲಾಗುತ್ತದೆ. ಆಯುರ್ವೇದ ದಿನ-2023 ರ ಮುಖ್ಯ ಧ್ಯೇಯ ‘Ayurveda for One Health’ ಎಂದು ನಿರ್ಧರಿಸಲಾಗಿದೆ. ಇದರ ಟ್ಯಾಗ್ ಲೈನ್ ‘Ayurveda for everyone on every day’ ಅಂದರೆ, ‘ಪ್ರತಿದಿನ ಎಲ್ಲರಿಗೂ ಆಯುರ್ವೇದ’. ಇದು ಪ್ರತಿ ಮಾನವ-ಪ್ರಾಣಿ-ಸಸ್ಯ-ಪರಿಸರವನ್ನು ಕೇಂದ್ರೀಕರಿಸುತ್ತದೆ. ಮಾನವೀಯತೆಯ ಮೂಲ ಆರೋಗ್ಯ ಸಂಪ್ರದಾಯವಾದ ಆಯುರ್ವೇದವು ಕೇವಲ ವೈದ್ಯಕೀಯ ವ್ಯವಸ್ಥೆಯಲ್ಲ, ಆದರೆ ಪ್ರಕೃತಿಯೊಂದಿಗಿನ ನಮ್ಮ ಸಹಜೀವನದ ಸಂಬಂಧದ ಅಭಿವ್ಯಕ್ತಿಯಾಗಿದೆ. ಇದು ಆರೋಗ್ಯ ರಕ್ಷಣೆಯ ಉತ್ತಮ ದಾಖಲಿತ ವ್ಯವಸ್ಥೆಯಾಗಿದೆ, […]