ನಾಳೆ ಕರ್ನಾಟಕಕ್ಕೆ ಮುಂಗಾರು ಆಗಮನ ನಿರೀಕ್ಷೆ: ಬಿಪರ್‌ಜಾಯ್​ ಚಂಡಮಾರುತದಿಂದಾಗಿ ಮಂಗಳೂರಿಗೆ ತಂಪೆರೆದ ಮಳೆರಾಯ

ಮಂಗಳೂರು: ನಿನ್ನೆ ಮುಂಗಾರು ಮಳೆ ಕೇರಳ ಪ್ರವೇಶಿಸಿದೆ. ನಾಳೆ ಕರ್ನಾಟಕ ಪ್ರವೇಶಿಸುವ ಸಾಧ್ಯತೆ ಇದೆ. ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಮುಂಗಾರು ಮಳೆಯ ಆಗಮನವಾಯಿತು. ವಾಡಿಕೆಯಂತೆ ಜೂನ್ 1ಕ್ಕೆ ಬರಬೇಕಿದ್ದ ಮುಂಗಾರು ತೀವ್ರ ವಿಳಂಬವಾಗಿದ್ದು, ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಬೇಸಿಗೆಯಿಂದ ಕಂಗೆಟ್ಟಿದ್ದ ಜನರಿಗೆ ಇಂದು ಬೆಳಗ್ಗೆ ಆರಂಭವಾದ ಮಳೆ ಖುಷಿ ಕೊಟ್ಟಿತು. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಬಿಪರ್‌ಜಾಯ್​ ಚಂಡಮಾರುತದ ಪ್ರಭಾವದಿಂದ ಇಂದಿನಿಂದ ಮಳೆ ಆರಂಭವಾಗಿದೆ. ಕೇರಳ ಭಾಗದಿಂದ ಉತ್ತರಕ್ಕೆ […]

48 ಗಂಟೆಯಲ್ಲಿ ಕರ್ನಾಟಕಕ್ಕೆ ಮಾನ್ಸೂನ್​ ಪ್ರವೇಶ :ಕೇರಳಕ್ಕೆ ಅಪ್ಪಳಿಸಿದ ಮುಂಗಾರು

ನವದೆಹಲಿ​: ಭಾರತೀಯ ಹವಾಮಾನ ಇಲಾಖೆ ರೈತರು ಸೇರಿದಂತೆ ದೇಶದ ವಾಸಿಗಳಿಗೆ ಸಿಹಿ ಸುದ್ದಿ ನೀಡಿದೆ. ಮುಂಗಾರು ಭಾರತಕ್ಕೆ ಪ್ರವೇಶಿಸಿದ್ದು, ಇನ್ನು 48 ಗಂಟೆಗಳಲ್ಲಿ ಕರ್ನಾಟಕಕ್ಕೆ ಎಂಟ್ರಿ ಕೊಡಲಿದೆ ಎಂದು ಹೇಳಿದೆ. ಭಾರತೀಯ ಹವಾಮಾನ ಇಲಾಖೆ (IMD) ಸಿಹಿ ಸುದ್ದಿ ನೀಡಿದೆ. ನೈರುತ್ಯ ಮುಂಗಾರು ಕೊನೆಗೂ ದೇಶವನ್ನು ಪ್ರವೇಶಿಸಿದೆ. ಗುರುವಾರ ಕೇರಳ ಕರಾವಳಿಗೆ ಅಪ್ಪಳಿಸಿರುವುದಾಗಿ ಐಎಂಡಿ ಅಧಿಕೃತವಾಗಿ ಪ್ರಕಟಿಸಿದೆ. ಹವಾಮಾನ ಇಲಾಖೆ ನಿರೀಕ್ಷಿಸಿದ್ದಕ್ಕಿಂತ ಏಳು ದಿನಗಳ ನಂತರ ಮುಂಗಾರು ದೇಶವನ್ನು ಪ್ರವೇಶಿಸಿದೆ. ಪ್ರಸ್ತುತ, ನೈರುತ್ಯ ಮುಂಗಾರು ಲಕ್ಷದ್ವೀಪ ಮತ್ತು […]

ಕೇಂದ್ರ ಸರ್ಕಾರ : ತೊಗರಿ, ಭತ್ತ, ರಾಗಿ ಸೇರಿದಂತೆ ಮುಂಗಾರು ಹಂಗಾಮಿನ ಬೆಳೆಗಳಿಗೆ MSP ಹೆಚ್ಚಿಳ

ನವದೆಹಲಿ: ಕೇಂದ್ರ ಸರ್ಕಾರ ದೇಶದ ರೈತರಿಗೆ ಸಿಹಿ ಸುದ್ದಿ ನೀಡಿದೆ. ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದೆ. ಕೇಂದ್ರ ಸರ್ಕಾರ 2023- 24ನೇ ಸಾಲಿನ ಮಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಿದೆ. ಜೋಳ, ರಾಗಿ, ಮೆಕ್ಕೆಜೋಳ, ಹೆಸರು, ತೊಗರಿ, ಭತ್ತ, ಸೂರ್ಯಕಾಂತಿ ಹಾಗೂ ಎಣ್ಣೆ ಕಾಳುಗಳ ಎಂಎಸ್​ಪಿಯನ್ನು ಶೇ.6ರಿಂದ 7ರವರೆಗೆ ಹೆಚ್ಚಿಸಲಾಗಿದೆ. ಪ್ರತಿ ಭತ್ತದ ಬೆಲೆ ಕ್ವಿಂಟಲ್‌ಗೆ 143 ರೂ. ಏರಿಕೆ ಮಾಡಲಾಗಿದೆ. ಇದರಿಂದ ಕನಿಷ್ಠ ಬೆಲೆ ಕ್ವಿಂಟಲ್‌ಗೆ 2,183 […]

ಉಡುಪಿ ಜಿಲ್ಲಾ ಕೃಷಿಕ ಸಂಘದ ರಜತ ಸಂಭ್ರಮದ ರೈತ ಸಮಾವೇಶ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲಾ ಕೃಷಿಕ ಸಂಘದ ರಜತ ಸಂಭ್ರಮದ ಜಿಲ್ಲಾ ರೈತ ಸಮಾವೇಶವು ಉಡುಪಿ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪ ಆವರಣದಲ್ಲಿ ಭಾನುವಾರ ಅದ್ಧೂರಿಯಾಗಿ ನಡೆಯಿತು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಸಮಾವೇಶವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಾರುಕಟ್ಟೆ, ರಸ್ತೆ ಹಾಗೂ ನೀರು ರೈತರಿಗೆ ಅತೀ ಅವಶ್ಯಕ. ಇವು ಮೂರು ಸಮರ್ಪಕವಾಗಿದ್ದರೆ, ಕೃಷಿಯಲ್ಲಿ ಹೆಚ್ಚು ಲಾಭಗಳಿಸಬಹುದು ಎಂದರು. ಬೆಳೆಗಳ ಇಳಿಯುವರಿ ಬರುವ ಹೊತ್ತಿನಲ್ಲಿ ಸರ್ಕಾರ ಬೆಂಬಲ ಬೆಲೆ ಘೋಷಣೆ […]

ಸಾವಯವ ಸಿರಿ ಅನುಷ್ಠಾನಕ್ಕೆ ಅರ್ಜಿ ಆಹ್ವಾನ      

ಉಡುಪಿ: ಕೃಷಿ ಇಲಾಖೆಯ ವತಿಯಿಂದ, ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರವು ಜನರಿಗೆ ಆರೋಗ್ಯಕರ ಹಾಗೂ ರಾಸಾಯನಿಕ ಮುಕ್ತ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ದೊರಕಿಸಲು ಹಾಗೂ ಸಾವಯವ ಕೃಷಿಯನ್ನು ಉತ್ತೇಜಿಸಲು ಸಾವಯವ ಸಿರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಸಾವಯವ ಸಿರಿ ಯೋಜನೆಯನ್ನು ಅನುಷ್ಠಾನ ಮಾಡಲು ಅರ್ಹ ನೊಂದಾಯಿತ ಸಾಮಾಜಿಕ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹತ್ತು ವರ್ಷಗಳಿಂದ ಸಾವಯವ ಕೃಷಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ, ಸಾವಯವ ಕೃಷಿ ಸಂಬಂಧಿತ ತರಬೇತಿ/ಕಾರ್ಯಾಗಾರಗಳನ್ನು ಆಯೋಜಿಸಲು ಅವಶ್ಯಕವಾದ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ, ಕನಿಷ್ಟ […]