ಶ್ರೀ ಕೃಷ್ಣ ಮಠ:ಶ್ರೀ ರಾಘವೇಂದ್ರ ಸ್ವಾಮಿ ರಾಯರ 348 ನೇ ಆರಾಧನೆ:ಪೂಜೆ

ಉಡುಪಿ: ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 348 ನೇ ಆರಾಧನೆ ಪ್ರಯುಕ್ತ ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪ್ರಹಲ್ಲಾದ ರಾಯರ ರಥೋತ್ಸವ ನಡೆಯಿತು. ಶ್ರೀ ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪ್ರಹಲ್ಲಾದ ರಾಯರ ಉತ್ಸವ ಮೂರ್ತಿಗೆ ಪರ್ಯಾಯ ಶ್ರೀಪಾದರು ಮಂಗಳಾರತಿ ಮಾಡಿ ವಿಶೇಷ ಪೂಜೆ ನೆರವೇರಿಸಿದರು.
ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಸಂಸ್ಕೃತೋತ್ಸವ

ಉಡುಪಿ: ಶ್ರೀಮನ್ಮಧ್ವ ಸಿದ್ಧಾಂತ ಪ್ರಭೋಧಕ ಸಂಸ್ಕೃತ -ಸ್ನಾತಕ – ಸ್ನಾತಕೋತ್ತರ ಅಧ್ಯಯನ ಕೇಂದ್ರ,ಉಡುಪಿ ಇದರ ವತಿಯಿಂದ, ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಸಂಸ್ಕೃತೋತ್ಸವ ಸಮಾರಂಭ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿತು. ಕಾರ್ಯಕ್ರಮ ಉದ್ಘಾಟಿಸಿದ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಸಂಸ್ಕೃತ ಭಾಷೆಯ ಮಹತ್ಮುಂವದ ಕುರಿತು ಮಾತನಾಡಿದರು. ಕೇಂದ್ರ ಮಂತ್ರಿಗಳಾದ ಮಾನ್ಸುಖ್ ಎಲ್.ಮಾಂಡವಿ ಅವರು ಮಾತನಾಡಿ, ಸಂಸ್ಕೃತವು ದೇವಭಾಷೆ. ಅದು ಎಲ್ಲ ಸಂಶೋಧನೆಗೂ ಮೂಲವಾಗಿದೆ, ಆದ್ದರಿಂದ ಈ ಸಭೆಯಲ್ಲಿ ಭಾಗವಹಿಸಿದ್ದು ಸಂತೋಷವಾಗಿದೆ ಎಂದರು. ಅದಮಾರು ಕಿರಿಯ ಯತಿಗಳಾದ […]
ಶ್ರೀ ಕೃಷ್ಣ ಮಠದಲ್ಲಿ ಹೊಸ್ತಿಲು ಪೂಜೆ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಕರ್ಕಾಟಕ ಹುಣ್ಣಿಮೆ (ಆಟಿ ಹುಣ್ಣಿಮೆ) ಪ್ರಯುಕ್ತ ಮುತೈದೆ ನಾರಿಯರು ಹೊಸ್ತಿಲು ಪೂಜೆ ಮಾಡಿ ನಮಸ್ಕಾರ ಮಾಡಿದರು.
ರಿಕ್ಷಾ ಮಾಲಕರ ಮತ್ತು ಚಾಲಕರ ವತಿಯಿಂದ ಸ್ವಾತಂತ್ರ್ಯೋತ್ಸವ:

ಉಡುಪಿ: ರಥಬೀದಿಯ ರಿಕ್ಷಾ ಮಾಲಕರ ಮತ್ತು ಚಾಲಕರ ವತಿಯಿಂದ ನಡೆದ 73 ನೇ ಸ್ವಾತಂತ್ರ್ಯೋತ್ಸವದಲ್ಲಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ದ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು
ಶ್ರೀ ಕೃಷ್ಣ ಮಠ: ‘ನರಸಿಂಹ ವೈಭವ’ ಹರಿಕಥೆ

ಕಾರ್ಕಳ: ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹರಿಕಥಾ ಪರಿಷತ್ತು ಮಂಗಳೂರು,ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಬೆಂಗಳೂರು ಮತ್ತು ಶ್ರೀಹಂಡೆದಾಸ ಪ್ರತಿಷ್ಟಾನ ಕಾರ್ಕಳ ಇವರ ಸಂಯುಕ್ತ ಸಹಯೋಗದೊಂದಿಗೆ ಬೆಂಗಳೂರಿನ ಕು.ಶಾರ್ವರೀ ಸೋಮಯಾಜಿ ಇವರಿಂದ ‘ನರಸಿಂಹ ವೈಭವ’ ಕಥಾಭಾಗದ ಹರಿಕಥೆ ನಡೆಯಿತು.